ಜಿಎಸ್ಬಿ ಸಮಾಜ ಹಿತರಕ್ಷಣಾ ವೇದಿಕೆಯ ಮಹತ್ವಾಕಾಂಕ್ಷಿ ಯೋಜನೆ‘ವಯೋವಂದನಾ ಆತಿಥ್ಯ ಗೃಹ’ಕ್ಕೆ ಶಿಲಾನ್ಯಾಸ
RB NEWS
Bureau Report
ಜಿಎಸ್ಬಿ ಸಮಾಜ ಹಿತರಕ್ಷಣಾ ವೇದಿಕೆಯ ಮಹತ್ವಾಕಾಂಕ್ಷಿ ಯೋಜನೆ ‘ವಯೋವಂದನಾ ಆತಿಥ್ಯ ಗೃಹ’ಕ್ಕೆ ಶಿಲಾನ್ಯಾಸ
ಉಡುಪಿ: ಜಿಎಸ್ಬಿ ಸಮಾಜ ಹಿತರಕ್ಷಣಾ ವೇದಿಕೆ, ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ಉಪ್ಪೂರಿನಲ್ಲಿ ಖರೀದಿಸಿದ ನಿವೇಶನದಲ್ಲಿ ನಿರ್ಮಾಣಕ್ಕೆ ಉದ್ದೇಶಿಸಿರುವ 72 ನಿವಾಸಿ ಕೊಠಡಿಗಳನ್ನು ಒಳಗೊಂಡ ‘ವಯೋವಂದನಾ ಆತಿಥ್ಯ ಗೃಹ’ ಕಟ್ಟಡದ ತಳಪಾಯದ ಶಿಲಾನ್ಯಾಸ ಹಾಗೂ ವಾಸ್ತು ನಿರ್ಮಾಣದ ಶಿಲಾಪೂಜನ ಕಾರ್ಯಕ್ರಮವು ಫೆಬ್ರವರಿ 01, ಆದಿತ್ಯವಾರ ಬೆಳಿಗ್ಗೆ 8.00 ಗಂಟೆಗೆ ಉಡುಪಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಳದ ಮೊಕ್ಕಾಂನಲ್ಲಿ ನೆರವೇರಿತು. ಪರಮಪೂಜ್ಯ ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ವಾಸ್ತು ಶಿಲಾಪೂಜನ ನೆರವೇರಿಸಿ, ಅನುಗ್ರಹಿಸಿ ಆಶೀರ್ವಚನ ನೀಡಿದರು. ಈ ಶುಭ ಸಂದರ್ಭದಲ್ಲಿ ಶ್ರೀ ಗುರುವರ್ಯರ ಸನ್ನಿಧಿಯಲ್ಲಿ, ಶ್ರೀ ಕಾಶೀ ಮೂಲಮಠದ ಜೀರ್ಣೋದ್ಧಾರ ಕಾರ್ಯಕ್ಕೆ ಜಿಎಸ್ಬಿ ಸಮಾಜ ಹಿತರಕ್ಷಣಾ ವೇದಿಕೆಯ ಮೂಲಕ ದೇಣಿಗೆಯನ್ನು ಅರ್ಪಿಸಲಾಯಿತು. ಕಾರ್ಯಕ್ರಮದಲ್ಲಿ ವೇದಿಕೆಯ ಸಂಚಾಲಕರಾದ ಆರ್. ವಿವೇಕಾನಂದ ಶೆಣೈ, ಅಧ್ಯಕ್ಷರಾದ ಜಿ. ಸತೀಶ್ ಹೆಗ್ಡೆ (ಕೋಟ), ಮಾರ್ಗದರ್ಶಕರಾದ ವೇದಮೂರ್ತಿ ಚೇಂಪಿ ರಾಮಚಂದ್ರ ಅನಂತ ಭಟ್, ಪ್ರಮುಖರಾದ ವಿದ್ಯಾನಂದ ಶರ್ಮ, ವಿನೋದ್ ಕಾಮತ್, ಅನಂತ ಪೈ, ಕಲ್ಪನಾ ಪೈ, ನಾಗೇಶ್ ಕಾಮತ್, ಶೇಷಗಿರಿ ಕುಡ್ವ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.