ಜಾನುವಾರು ಚೋರರಿಬ್ಬರ ಬಂಧನ

ಮೂಡುಬಿದಿರೆ: ನೆಲ್ಲಿಕಾರಿನ ಬೋರುಗುಡ್ಡೆ ಎಂಬಲ್ಲಿ ಮನೆಯೊಂದರ ಹಟ್ಟಿಯಿಂದ ಜಾನುವಾರುಗಳನ್ನು ಕಳವು ಗೈಯಲು ಮುಂದಾಗಿದ್ದ ತಂಡವೊಂದನ್ನು

ಮೂಡಬಿದ್ರಿ ಪೊಲೀಸ್ ವೃತ್ತ ನಿರೀಕ್ಷಕ ಸಂದೇಶ ಪಿ.ಜಿ ನೇತೃತ್ವದ ಪೊಲೀಸರು ತಂಡ ಬಂಧಿಸಿದ್ದಾರೆ.
ಮೂಡುಬಿದಿರೆಯ ಗಂಟಾಲ್ ಕಟ್ಟೆ ಮಹಮ್ಮದ್ ಸಫ್ವನ್, ಸಲೀಂ ಬಂಧಿತ ಆರೋಪಿಗಳು.

ನವಂಬರ್ 22ರ ನಸುಕಿನ ಜಾವ 2.15ರ ವೇಳೆಗೆ ಮೂಡುಬಿದಿರೆಯ ನೆಲ್ಲಿಕಾರಿನ ಬೋರುಗುಡ್ಡೆ ಎಂಬಲ್ಲಿ ಪಂಜ ಮನೆಯ ಹಟ್ಟಿಯ ಬಳಿ ಬಿಳಿ ಕಾರೊಂದು ನಿಲ್ಲಿಸಲಾಗಿತ್ತು. ಕಾರಿನ ಶಬ್ದ ಕೇಳಿ ಮನೆ ಮಂದಿ ಹೊರಬಂದಾಗ ಕಾರು ಚಾಲನೆಯ ಸ್ಥಿತಿಯಲ್ಲಿ ಕಂಡು ಬಂತು. ಆ ದೃಶ್ಯಾವಳಿ ಮನೆಮಂದಿ ಬೊಬ್ಬೆ ಹಾಕಿದಾಗ ಕಾರು ಅಲ್ಲಿಂದ ಹೊರಟುಹೋಗಿತ್ತು.
ನೆರೆಕರೆಯವರು ಸೇರಿಕೊಂಡು ದುಷ್ಕರ್ಮಿಗಳು ಬಂದಿದ್ದ ಕಾರನ್ನು ಹಿಂಬಾಲಿಸಿ ಹೋದಾಗ ಆ ಕಾರಿನ ಚಾಲಕನ ನಿರ್ಲಕ್ಷ್ಯ ದಿಂದಾಗಿ ಮರವೊಂದಕ್ಕೆ ಡಿಕ್ಕಿ ಹೊಡೆದಿತ್ತು. ದುಷ್ಕರ್ಮಿಗಳು ಪರಾರಿಯಾಗಿದ್ದರು.
ದುಷ್ಕರ್ಮಿಗಳು ಬಂದಿದ್ದ ಕಾರಿನ ನಂಬ್ರ KA-20-Z-2879 ಆಗಿದ್ದು, ಅದರ ಮಾಹಿತಿಯನ್ವಯ ಆರೋಪಿಗಳ ಪತ್ತೆ ಹಚ್ಚಲು ಪೊಲೀಸರಿಗೆ ಸಹಕಾರಿಯಾಗಿದೆ.
ದನ ಕಳವುಗೈಯಲು ವಿಫಲಯತ್ನ ನಡೆಸಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದು, ಈ ಹಿಂದೆ ಇದೇ ದಂಧೆ ನಡೆಸಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಈ ಕುರಿತು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





































