ಕಾರ್ಕಳ : ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆ, ಕಾರ್ಕಳ ಇದರ ತಿಂಗಳ ಕಾರ್ಯಕ್ರಮದಲ್ಲಿ “ಪ್ರವಾಸ ಕಥನ ಮಾಲಿಕೆ ಭಾಗ –2 ” ಸರಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನವಂಬರ್ 7 ರಂದು ನೆರವೇರಿತು.
ವೇದಿಕೆಯ ಹಿರಿಯ ಸದಸ್ಯೆ ಅನುಪಮಾ ಚಿಪ್ಲೂಂಣಕರ್, ವಸುಧಾ ಶೆಣೈ ಮತ್ತು ಗೀತಾ ಆರ್. ಮರಾಠೆ ಇವರು ತಾವು ಕೈಗೊಂಡ ಶಿರ್ಡಿ, ವೃಂದಾವನ ಮತ್ತು ಉತ್ತರ ಭಾರತ ಪ್ರವಾಸದ ಅದ್ಭುತ, ಅವಿಸ್ಮರಣೀಯ ಅನುಭವಗಳನ್ನು ಹಂಚಿಕೊಂಡರು.
ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆಯ ಅಧ್ಯಕ್ಷೆ ಪ್ರೊ. ಮಿತ್ರಪ್ರಭಾ ಹೆಗ್ಡೆ ಸ್ವಾಗತಿಸಿದರು ಮಾಲತಿ ವಸಂತರಾಜ್ ನಿರೂಪಿಸಿದರು. ಡಾ. ಸುಮತಿ ಪಿ ಇವರು ಪ್ರಾರ್ಥಿಸಿ ಕಾರ್ಯದರ್ಶಿ ಮಾಲತಿ. ಜಿ. ಪೈಯವರು ಧನ್ಯವಾದವನ್ನಿತ್ತರು.
ಜಾಗೃತಿ ಮಹಿಳಾ ಸಂಘಟನೆಯ ಸದಸ್ಯೆಯರು ಭಾಗವಹಿಸಿದ್ದರು.

ಕಾರ್ಕಳ : ಜಾಗೃತಿ ಸಾಹಿತ್ಯಾಸಕ್ತ ಮಹಿಳೆಯರ ಸಂಘಟನೆಯ ತಿಂಗಳ ಕಾರ್ಯಕ್ರಮದ ಅಂಗವಾಗಿ ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ಕಾರ್ಕಳದ ಸರಕಾರಿ ಪದವಿ ಪೂರ್ವ ಕಾಲೇಜಿನ ಹೈಸ್ಕೂಲ್ ವಿಭಾಗದಲ್ಲಿ, ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಗಳಾದ ಡಾ.ಹರ್ಷ ಕಾಮತರವರು ಆಯುರ್ವೇದ ಔಷಧಿಯ ಬಗ್ಗೆ, ಭಾರತದ ಪ್ರಾಚೀನ ಆಯುರ್ವೇದ ಪದ್ದತಿಯಿಂದ ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯ ವನ್ನು ನೆಲೆಗೊಳಿಸುವ ಕುರಿತು ಮಾತನಾಡಿದರು. ವಿವಿಧ ರೋಗಗಳು, ಅವುಗಳನ್ನು ಗುಣಪಡಿಸುವ ವಿಧಾನಗಳನ್ನು ತಿಳಿಸಿದರು. ಕೊನೆಯಲ್ಲಿ ನಮ್ಮ ಆಹಾರ -ವಿಹಾರ, ಆಚಾರ ವಿಚಾರಗಳು ಪರಿಪೂರ್ಣವಾಗಿದ್ದರೆ ಮನುಷ್ಯನು ಆರೋಗ್ಯದಿಂದಿರಲು ಸಾಧ್ಯ ಎಂದರು. ಆಯುರ್ವೇದ ವೈದ್ಯ ಪದ್ದತಿಯ ಕುರಿತು ಜನರಲ್ಲಿರುವ ತಪ್ಪು ಕಲ್ಪನೆಗಳ ಕುರಿತು ,ಮಧ್ಯ ವಯಸ್ಸಿನ ಮಹಿಳೆಯರ ಆರೋಗ್ಯ ಸಮಸ್ಯೆಗಳ ಮಾಹಿತಿ ನೀಡಿದರು .ಬಳಿಕ ನಡೆದ ಸಂವಾದದಲ್ಲಿ ಜಾಗೃತಿಯ ಸದಸ್ಯೆಯರು ಪಾಲ್ಗೊಂಡರು. ಶೈಲಜಾ ಹೆಗ್ಡೆ ಪ್ರಾರ್ಥನೆಯನ್ನು ಜಾಗೃತಿ ಅಧ್ಯಕ್ಷೆ ಮಿತ್ರಪ್ರಭಾ ಹೆಗ್ಡೆ ಸ್ವಾಗತವನ್ನು ಶ್ಯಾಮಲಾ ಕುಮಾರಿ ಬೇವಿಂಜೆಯವರು ಧನ್ಯವಾದವನಿತ್ತರು.ಮಾಲತಿ ವಸಂತರಾಜ್ ರವರು ನಿರೂಪಣೆಯನ್ನು ಮಾಡಿದರು.





































