ಜಲವಿಹಾರ ನಡೆಸಿದ ಹಾಲಿ , ಮಾಜಿ ಶಾಸಕರು

Picture of RB NEWS

RB NEWS

Bureau Report

ಮೂಡುಬಿದಿರೆ: ಸ್ಥಳೀಯ ಕಡಲ ಕೆರೆ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನದಲ್ಲಿರುವ ಕೆರೆಗೆ ಆಗಸ್ಟ್ 27ರಂದು ಮೀನುಗಳನ್ನು ಬಿಡಲಾಯಿತು.

ಅದೇ ಸಂದರ್ಭದಲ್ಲಿ ಬೋಟಿಂಗ್ ಕಾರ್ಯಕ್ರಮಕ್ಕೂ ಚಾಲನೆಯನ್ನು ಶಾಸಕ ಉಮಾನಾಥ ಕೋಟ್ಯಾನ್ ನೀಡಿದರು.

ಮಾಜಿ ಸಚಿವ ಅಭಯ ಚಂದ್ರ ಜೈನ್, ಪುರಸಭಾ ಅಧ್ಯಕ್ಷ ಜಯಶ್ರೀ, ಉಪಾಧ್ಯಕ್ಷ ನಾಗರಾಜ ಪೂಜಾರಿ, ರೋಟರಿ ಕ್ಲಬ್ ನ ಅಧ್ಯಕ್ಷರು ಹಾಗೂ ಇತರ ಪದಾಧಿಕಾರಿಗಳು ಬೋಟಿಂಗ್ ಕಾರ್ಯಕ್ರಮದಲ್ಲಿ ಸ್ವತಹ ಭಾಗವಹಿಸಿದರು.

ತರುವಾಯ ನಡೆದ ಸಭಾ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಕೆರೆಯ ಪ್ರದೇಶದಲ್ಲಿ ಸ್ವಚ್ಛತೆಯನ್ನು ಕಾಪಾಡುವುದರ ಮೂಲಕವಾಗಿ ಸಹಕರಿಸಬೇಕು. ಪರಿಸರ ಸ್ವಚ್ಛತೆ ಉತ್ತಮ ಗಾಳಿ ಗೆ ಪೂರಕ ಎಂದರು. ಎಲ್ಲರೂ ಬೋಟಿಂಗ್ ನಲ್ಲಿ ಸ್ವತಃ ಭಾಗವಹಿಸಿ ಸಂತಸವನ್ನು ಪಡೆಯಬಹುದೆಂದು ತಿಳಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top