






ಜನಪ್ರತಿನಿಧಿಗಳಿಂದ ಸಿಗದ ಸ್ಪಂದನೆ ರಾಜಕರಣಿಯಿಂದ ದೊರೆತ್ತಾಗ….
ಕಾರ್ಕಳ: ಕಾಂತಾವರ ಗ್ರಾಮ ಪಂಚಾಯತ್ ಸಮಗ್ರ ಅಭಿವೃದ್ಧಿಯಲ್ಲಿ ಕುಂಠಿತವಾಗಿದೆ. ಆರ್ಥಿಕ ಕ್ರೋಡೀಕರಣಕ್ಕಾಗಿ ವ್ಯಾಪಾರ ಮಳಿಗೆಗಳು ತೀರಾ ಕಡಿಮೆಯಾಗಿದ್ದರೂ, ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿಯ ಕೊರತೆ ಎದ್ದುಕಾಣುತ್ತಿದೆ.
ಕಾಂತಾರ-ಬಾರಾಡಿ ಸಂಪರ್ಕ ಕೂಡು ರಸ್ತೆಯಲ್ಲಿ ಸಂಕ ನಿರ್ಮಾಣಕ್ಕೆ ಕಳೆದ ಕೆಲ ವರ್ಷಗಳ ಮೀನಾಮೇಷ ಎಣಿಸುತ್ತಿದ್ದು, ಸ್ಥಳೀಯ ನಿವಾಸಿಗಳ ಬಹುವರ್ಷಗಳ ಬೇಡಿಕೆ ನೆನೆಗುದ್ದಿಗೆ ಬಿದ್ದಿದೆ.
ಇದರಿಂದ ಸ್ಥಳೀಯ ನಿವಾಸಿಗಳು ಬಾರಾಡಿಗೆ ತಲುಪಬೇಕಾದರೆ ಕಾಂತಾವರ-ಬಾರಾಡಿ ನೇರ ಸಂಪರ್ಕ ರಸ್ತೆ ಬದಲಾಗಿ ಸುಮಾರು 5 ಕಿ.ಮೀ ದೂರದ ರಸ್ತೆಯಾಗಿ ಬಾರಾಡಿಗೆ ತಲುಪಬೇಕಾದ ಅನಿವಾರ್ಯ ಎದುರಾಗಿದೆ.
ಈ ಕಾರಣದಿಂದಾಗ ಸ್ಥಳೀಯ ನಿವಾಸಿಗಳು ಬಹುವರ್ಷಗಳಿಂದ ಗ್ರಾಮ ಮಟ್ಟದಿಂದ ಶಾಸಕ, ಸಂಸದರಿಗೂ ಮನವಿ ಪತ್ರ ನೀಡುತ್ತಾ ತಮ್ಮ ಬೇಡಿಕೆ ಈಡೇರಿಸುವಂತೆ ಅಂಗಲಾಚುತ್ತಾ ಸುಸ್ತಾಗಿದ್ದರು.

ಕೃಷಿಕರಿಗೂ ಆರ್ಥಿಕ ಹೊಡೆತ
ಬಾರಾಡಿ ಪರಿಸರದಲ್ಲಿ ಅನೇಕರು ಕೃಷಿ ಕಾಯಕದಿಂದಲೇ ಬದುಕು ನಿರ್ವಹಿಸುತ್ತಾರೆ. ಭತ್ತರ ಕೃಷಿ ಕಾಯಕಕ್ಕಾಗಿ ಇವರು ಹೆಚ್ಚುವರಿ ಮೊತ್ತವನ್ನು ಭರಿಸಬೇಕಾದ ಅನಿವಾರ್ಯ ಉಂಟಾಗಿದೆ. ಕೃಷಿ ಭೂಮಿ ಉಳಿಮೆಗಾಗಿ ಹಾಗೂ ಭತ್ತದ ಕಟಾವ್ಗಾಗಿ ಯಂತ್ರವು ಬಾರಾಡಿಗೆ ಬರಬೇಕಾದರೆ ಪರ್ಯಾಯ ರಸ್ತೆಯ ಮೂಲಕ ಬರಬೇಕಾಗಿರುವುದರಿಂದ ಹಾಗೂ ಸುಮಾರು ಐದು ಕಿ.ಮೀ ಸುತ್ತು ಬಳಸಿ ಬರಬೇಕಾಗಿರುವುದಿಂದ ಕೃಷಿಕರು ಪ್ರತಿ ಬಾರಿ ರೂ .2,000 ದಂತೆ ಹೆಚ್ಚುವರಿ ಹಣ ವ್ಯಯಿಸಬೇಕಾಗಿದೆ.
ಕಾಂತಾವರಕ್ಕೆ ಬಂದಿದ್ದ ರಾಜಕರಣಿ







ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ವರ್ಧಾಕರಣಕ್ಕೆ ಇಳಿಸಿದ್ದ ಮುನಿಯಾಲು ಉದಯಕುಮಾರ್ ಶೆಟ್ಟಿ ಅವರು ಕೆಲ ದಿನಗಳ ಹಿಂದೆ ಕಾಂತಾವರ ಪರಿಸರಕ್ಕೆ ಅಗಮಿಸಿದ್ದರು.
ಅದೇ ಸಂದರ್ಭದಲ್ಲಿ ಬಾರಾಡಿಯ ಸ್ಥಳೀಯ ನಿವಾಸಿಗಳು ತಮ್ಮ ಬೇಡಿಕೆಯನ್ನು ಇವರಿಗೂ ಸಲ್ಲಿಸಿದ್ದರು.
ಬೇಡಿಕೆಗೆ ಸಕರಾತ್ಮಕವಾಗಿ ಸ್ಪಂದಿಸಿದ ಮುನಿಯಾಲು ಉದಯಕುಮಾರ್ ಶೆಟ್ಟಿ ಅವರು, ಸರಕಾರಿ ಮಟ್ಟದಲ್ಲಿ ಆ ಕೆಲಸಕಾರ್ಯ ನಡೆಸಲು ಇನ್ನಷ್ಟು ದಿನಗಳು ಬೇಕಾಗಬಹುದು.
ಸಮಸ್ಸೆಗೆ ತನ್ನಿಂದಾಗ ಪರಿಹಾರ ಮಾಡುವುದಾಗಿ ಭರವಸೆ ನೀಡಿದರು. ಅದಕ್ಕೆ ಸ್ಥಳೀಯ ನಿವಾಸಿಗಳು ಒಪ್ಪಿಕೊಂಡಿದ್ದರು.
ಕಾಂತಾವರ-ಬಾರಾಡಿ ಪ್ರಮುಖ ರಸ್ತೆಗೆ ಅಡ್ಡವಾಗಿ ಎರಡು ಸಿಮೆಂಟ್ ಮೋರಿಗಳನ್ನು ಸ್ಥಳೀಯ ನಿವಾಸಿಗಳು ಸ್ವಂತ ಖರ್ಚು ಭರಿಸಿ ತರಿಸಿಕೊಟ್ಟಿದ್ದರು.
ಉಳಿದಂತೆ ಆ ಮೋರಿ ಜೋಡಣೆಗೆ ಅಗತ್ಯವಾದ 10 ಮಂದಿ ಕಾರ್ಮಿಕರು, 15 ಲೋಡ್ ಮಣ್ಣು, ಟಿಪ್ಪರ್, 2 ಹಿಟಾಚಿ, ರೋಲರ್ ಇವುಗಳನ್ನು ಮುನಿಯಾಲು ಉದಯಕುಮಾರ್ ಶೆಟ್ಟಿ ಅವರು ಸ್ವಂತ ಖರ್ಚು ಭರಿಸಿ ವ್ಯವಸ್ಥೆ ಮಾಡಿದರು. ಆ ಮೂಲಕ ಕಾಂತಾವರ-ಬಾರಾಡಿ ಕೂಡುರಸ್ತೆ ಸಂಪರ್ಕ ಕಲ್ಪಿಸಲಾಗಿದೆ. ಬಹುವರ್ಷದ ಬೇಡಿಕೆ ಈಡೇರಿದೆ.
ಇಚ್ಛಾಶಕ್ತಿಯಿದ್ದರೆ ಯಾವುದೇ ಕೆಲಸ-ಕಾರ್ಯಗಳು ಯಶಸ್ಸು ಆಗಿ ನಡೆಯುತ್ತದೆ ಎಂಬುವುದಕ್ಕೆ ಇದೊಂದು ಉದಾಹರಣೆಯಷ್ಟೇ.
ಕಂಬಳಕ್ಕೆ ಮರುಜೀವ ಕೊಟ್ಟ ಗ್ರಾಮ

ಬಾರಾಡಿ ಕಂಬಳ

ಬಾರಾಡಿ ಕಂಬಳದ ರೂವಾರಿ ಡಾ.ಜೀವಂಧರ್ ಬಳ್ಳಾಲ್
ಕಂಬಳ ವಿವಾದವು ನ್ಯಾಯಾಲಯದಲ್ಲಿ ಇದ್ದ ಸಂದರ್ಭದಲ್ಲಿ ಕಂಬಳಕ್ಕೆ ಮರುಜೀವ ಕೊಟ್ಟ ಗ್ರಾಮ ಕಾಂತಾವರ. ಬಾರಾಡಿ ಕಂಬಳಕ್ಕೆ ತನ್ನದೇ ಆದ ಇತಿಹಾಸ ಇದೆ. ಕಂಬಳ ಮರುಶುರುವಾಗಿರುವುದು ಇದೇ ಬಾರಾಡಿ ಕಂಬಳದ ಮೂಲಕ. ಆ ಸಂದರ್ಭದಲ್ಲಿ ಪ್ರಾಣಿದಯಾ ಸಂಘದ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು, ಸಂಘ-ಸAಸ್ಥೆಗಳು ಪ್ರಮುಖರು ಅದೇ ಕಂಬಳದಲ್ಲಿ ಬೀಡುಬಿಟ್ಟಿದ್ದರು. ಅವರೆಲ್ಲರ ಕಣ್ಗಾವಲು ನಡುವೆ ಆ ವರ್ಷ ಜಾನುವಾರುಗಳಿಗೆ ಒಂದೇ ಒಂದು ಏಟು ಬೀಳದೇ ಕಂಬಳ ಯಶಸ್ಸು ಆಗಿ ನಡೆದಿತ್ತು ಎಂಬುವುದು ಐತಿಹ್ಯವಾಗಿದೆ.














