ನಿಟ್ಟೆ: ರಾಜ್ಯ ಮಟ್ಟದ ಚಿಕ್ಕಮಗಳೂರು ಮ್ಯಾರಾಥಾನ್ ಚಿಕ್ಕಮಗಳೂರಿನಲ್ಲಿ ಫೆ.೨೫ ರಂದು ಜರುಗಿತು.
14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ನಿಟ್ಟೆಯ ಡಾ.ಎನ್.ಎಸ್.ಎ.ಎಂ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ರಕ್ಷಿತ್ ಚಿನ್ನದ ಪದಕ, ರಷಭ್ ಬೆಳ್ಳಿ ಪದಕ, ಜೇಶ್ಟಾ ನಾಲ್ಕನೇ ಸ್ಥಾನ ಹಾಗೂ ೧೬ ವರ್ಷದೊಳಗಿನ ವಿಭಾಗದಲ್ಲಿ ದೀಕ್ಷಿತಾ ಚಿನ್ನದ ಪದಕ, ರಶ್ಮಿತಾ ಕಂಚಿನ ಪದಕಗಳಿಸಿದರು.
೧೬ ವರ್ಷ ಮೇಲ್ಪಟ್ಟ ಮುಕ್ತ ವಿಭಾಗದಲ್ಲಿ ಡಾ.ಎನ್.ಎಸ್.ಎ.ಎಂ ಪದವಿಪೂರ್ವ ಕಾಲೇಜಿನ ನಂದಿನಿ ಕಂಚಿನ ಪದಕ ಹಾಗೂ ಡಾ.ಎನ್.ಎಸ್.ಎ.ಎಂ. ಪ್ರಥಮದರ್ಜೆ ಕಾಲೇಜಿನ ಪ್ರತೀಕ್ಷಾ ಐದನೇ ಸ್ಥಾನ ಪಡೆದಿರುತ್ತಾರೆ.
ಈ ವಿದ್ಯಾರ್ಥಿಗಳಿಗೆ ಪ್ರಶಸ್ತಿಯೊಂದಿಗೆ ನಗದು ಬಹುಮಾನ ದೊರೆತಿದೆ.





































