ಚಾರ ಪರಿಸರದಲ್ಲಿ ಒಂಟಿ ಕಾಡಾನೆಯ ದಾಂಧಲೆ
ವರದಿ: ಮುನಿಯಾಲು ಪ್ರಮೋದ್ ಚಂದ್ರ
ಹೆಬ್ರಿ: ಚಾರ ಪರಿಸರದ ಜನವಸತಿ ಹಾಗೂ ರೈತರ ತೋಟಗಳಿಗೆ ಶುಕ್ರವಾರ ರಾತ್ರಿ ಒಂಟಿ ಆನೆ ದಾಳಿ ನಡೆಸಿ ನಾಗರಿಕರಲ್ಲಿ ಆತಂಕ ಮೂಡಿಸಿದೆ.




ಹೆಬ್ರಿ ಹಾಗೂ ನಾಡ್ಪಾಲು ಗ್ರಾಮಗಳಲ್ಲಿ ದಿನನಿತ್ಯ ಆನೆ ದಾಂಧಲೆ ಮಾಡುತ್ತಿದ್ದು, ಈ ಬಗ್ಗೆ ಅರಣ್ಯ ಇಲಾಖೆಯವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ದೂರು ಕೇಳಿಬರುತ್ತಿದೆ.
ಅರಣ್ಯ ಇಲಾಖೆಯ ಈ ಬಗ್ಗೆ ಗಮನಹರಿಸಬೇಕೆಂದು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಅರಣ್ಯ ಇಲಾಖೆಗೆ ಮುತ್ತಿಗೆ ಹಾಕಲಾಗುವುದು ಎಂದು ಚಾರ ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಶೆಟ್ಟಿ ಆಗ್ರಹಿಸಿದ್ದಾರೆ.
ಹೆಬ್ರಿ ಗ್ರಾಮ ಪಂ. ಸದಸ್ಯರಾದ ಎಚ್. ಬಿ ಸುರೇಶ್, ಎಚ್ ಜನಾರ್ದನ್ ಶನಿವಾರ ಆನೆ ದಾಳಿ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದಾರೆ.





















