ಚಳಿಗಾಲದ ಯೋಗ ಕ್ರಮ -ಡಾ. ಮಾಲತಿ ಪೈ

Picture of RB NEWS

RB NEWS

Bureau Report

ಚಳಿಗಾಲದಲ್ಲಿ ಶೀತದಿಂದ ಕೂಡಿದ ವಾತಾವರಣದಿಂದ ದೇಹದಲ್ಲಿ ಅನೇಕ ಸಮಸ್ಯೆಗಳು ಕಾರಣವಾಗುತ್ತದೆ. ಯೋಗ, ಮುದ್ರೆಗಳನ್ನು ಮಾಡುವುದರಿಂದ ದೇಹವನ್ನು ಬೆಚ್ಚಗಿರಿಸಿಕೊಳ್ಳುವುದರಿಂದ ಚಳಿಗಾಲದಲ್ಲಿ ಕಾಡುವ ಆರೋಗ್ಯ ಸಮಸ್ಯೆಯನ್ನು ನಿಯಂತ್ರಣದಲ್ಲಿರಿಸಬಹುದು.

ಉತ್ತರ ಮತ್ತು ದಕ್ಷಿಣ ಗೋಳಾರ್ಧದ ಕೆಲವು ಭಾಗಗಳಲ್ಲಿ ಚಳಿಗಾಲವು ವರ್ಷದ ಅತ್ಯಂತ ಶೀತ ಋುತು ಆಗಿದೆ. ಶೀತ ತಾಪಮಾನವನ್ನು ಘನೀಕರಿಸುವುದು ಆಗಿದೆ. ಸಾಮಾನ್ಯವಾಗಿ ಬಲವಾದ ಗಾಳಿಯಿಂದ ಉಲ್ಬಣಗೊಳ್ಳುತ್ತದೆ. ಸಾಮಾನ್ಯವಾಗಿ ಮೂರು ತಿಂಗಳುಗಳ ಕಾಲ ಚಳಿಗಾಲ ಇರುತ್ತದೆ.

ಯೋಗಪಟು: ಅನ್ವಿ ಅಂಚನ್

ಚಳಿಗಾಲದಲ್ಲಿ ಕಾಡುವ ಸಮಸ್ಯೆಗಳು ಒಂದೆರಡಲ್ಲ. ನಾವು ಶೀತಲವಾಗಿರುವಾಗ ನಮ್ಮ ರಕ್ತಪರಿಚಲನೆಯು ಕಡಿಮೆಯಾಗುತ್ತದೆ. ದೇಹದ ಉಷ್ಣತೆಯನ್ನು ಮತ್ತಷ್ಟು ಕಡಿಮೆ ಮಾಡುತ್ತದೆ. ಒಣಚರ್ಮ ಉಂಟಾಗುತ್ತದೆ. ಕೆಲವರಿಗಂತೂ ನೋವಿನಿಂದ ಕೂಡಿದ ಪಾದದ ಬಿರುಕುಗಳು, ಸೋಂಕಿನ ತೊಂದರೆ, ನೋವಿನ ಕಾಲುಗಳು, ಅಸ್ತಮಾ, ಶೀತ, ಜ್ವರ, ಕೆಮ್ಮು, ನೋಯುತ್ತಿರುವ ಗಂಟಲು, ರಕ್ತ ಹೆಪ್ಪುಗಟ್ಟುವಿಕೆ ಇತ್ಯಾದಿ ಆರೋಗ್ಯ ಸಮಸ್ಯೆಗಳು ಕಾಡುತ್ತವೆ.

ಚಳಿಗಾಲದಲ್ಲಿ ಶೀತದಿಂದ ಕೂಡಿದ ವಾತಾವರಣದಿಂದಾಗಿ ಮುಂಜಾನೆ ದೇಹ ಜಡವಾಗುತ್ತದೆ. ಹಾಗೆಯೇ ದೇಹದಲ್ಲಿನ ರಕ್ತಪರಿಚಲನೆಯು ನಿಧಾನವಾಗುತ್ತದೆ. ಇದರಿಂದ ಗಂಟು ನೋವು, ಚರ್ಮದ ತುರಿಕೆ, ಆಸ್ತಮಾ, ಶೀತ, ಹುಳದ ಬಾಧೆ ಇತ್ಯಾದಿ ಕಾಯಿಲೆಗಳು ಕಾಣಿಸಿಕೊಳ್ಳುವುದು ಜಾಸ್ತಿ.

ಚಳಿಗಾಲದಲ್ಲಿ ಉಂಟಾಗುವ ಆರೋಗ್ಯ ಸಮಸ್ಯೆಗಳ ನಿಯಂತ್ರಣಕ್ಕೆ ಯೋಗ ಮುದ್ರೆಗಳು ಸಹಕಾರಿ. ಚಳಿಯಿಂದ ರಕ್ಷಣೆ ಮಾಡಿಕೊಳ್ಳಲು ಬಟ್ಟೆಯ ಹೊದಿಕೆ, ಮಪ್ಲರ್‌, ಮಂಕಿ ಕ್ಯಾಪ್‌, ಗ್ಲಿಸರಿನ್‌, ಲೋಶನ್‌, ಇತ್ಯಾದಿ ಬಳಸುತ್ತಾರೆ. ಚರ್ಮದ ಮೃದುತ್ವ ಕಾಪಾಡಲು ಎಣ್ಣೆ ಸ್ನಾನ, ಉತ್ತಮ ಆಹಾರ ಸೇವನೆ, ಇತ್ಯಾದಿಗಳನ್ನು ಮಾಡುತ್ತಾರೆ.

ಚಳಿಗಾಲದಲ್ಲಿ ರಕ್ಷಣೆ ಪಡೆಯಲು ಬೆಳಗ್ಗೆ ಎದ್ದ ಕೂಡಲೇ ನಿತ್ಯವಿಧಿಗಳನ್ನು ಮುಗಿಸಿ ಒಂದು ಲೋಟ ಬಿಸಿ ದ್ರವಾಹಾರ ಸೇವಿಸಿ ಸರಳ ವ್ಯಾಯಾಮಗಳನ್ನು ಸೂರ್ಯ ನಮಸ್ಕಾರಗಳನ್ನು ಮಾಡಬೇಕು. ಸಾಧ್ಯವಾಗುವವರು ಕಪಾಲಭಾತಿ ಕ್ರಿಯೆ ಮಾಡಬೇಕು.

ಯೋಗವು ದೇಹವನ್ನು ಬೆಚ್ಚಗಿರಿಸುತ್ತದೆ. ಯೋಗದ ಮೂಲಕ ಸ್ನಾಯುಗಳು ಬೆಚ್ಚಗಾಗುತ್ತವೆ. ದೇಹಕ್ಕೆ ರಕ್ತಪರಿಚಲನೆ ಸುಧಾರಿಸುತ್ತದೆ. ಸೆಳೆತವನ್ನು ಕಡಿಮೆ ಮಾಡುತ್ತದೆ. ಒಳಗಿನಿಂದ ಶಾಖವನ್ನು ನಿರ್ಮಿಸುವುದರಿಂದ ದಿನವಿಡೀ ಚಟುವಟಿಕೆಯಿಂದ ಕೂಡಿರುವಂತೆ ಮಾಡುತ್ತದೆ. ಯೋಗದಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ನಿಯಮಿತ ವ್ಯಾಯಾಮ ಯೋಗ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಶೀತ ಮತ್ತು ಜ್ವರ ವೈರಸ್‌ಗಳ ವಿರುದ್ಧ ಹೋರಾಡಲು ದೇಹವನ್ನು ಸಿದ್ಧಗೊಳಿಸುತ್ತದೆ. ಯೋಗವು ಶಕ್ತಿಯನ್ನು ಹೆಚ್ಚಿಸುತ್ತದೆ. ಚಳಿಗಾಲದ ಆರೋಗ್ಯಕ್ಕೆ ಇರುವ ದುಗ್ದರಸದ ಪ್ರಸರಣ ಹೆಚ್ಚಿಸುತ್ತದೆ.

ಚಳಿಗಾಲದಲ್ಲಿಅಭ್ಯಾಸ ಮಾಡಬಹುದಾದ ಆಯ್ದ ಆಸನಗಳು ಪ್ರಮುಖವಾಗಿ ತಾಡಾಸನ, ಪಾಶ್ರ್ವ ತಾಡಾಸನ, ಅರ್ಧಚಕ್ರಾಸನ, ಪಾದಹಸ್ತಾಸನಮ ವೀರಭದ್ರಾಸನ, ಪ್ರಸಾರಿತ ಪಾದೋತ್ತಾನಾಸನ, ವೃಕ್ಷಾಸನ, ಬದ್ಧಕೋಣಾಸನ, ಪದ್ಮಾಸನ, ಪಶ್ಚಿಮೋತ್ಥಾಸನ, ವಜ್ರಾಸನ, ಶಶಾಂಕಾಸನ, ಮಂಡೂಕಾಸನ, ಉತ್ಥಾನ ಮಂಡೂಕಾಸನ, ಅರ್ಧಉಷ್ಟಾ್ರಸನ, ವಕ್ರಾಸನ, ಅರ್ಧಮತ್ಸ್ಯೇಂದ್ರಾಸನ, ಉತ್ಥಾನ ಪಾದಾಸನ, ಪವನಮೋಕ್ತಾಸನ, ಸರ್ವಾಂಗಾಸನ, ಹಲಾಸನ, ಭುಜಂಗಾಸನ, ಶಲಭಾಸನ, ಚಕ್ರಾಸನ, ಸಾಧ್ಯವಾದರೆ ಕ್ಲಿಷ್ಟಕರವಾದ ಭಂಗಿಗಳಾದ ಬಕಾಸನ, ಊಧ್ರ್ವ ಕುಕ್ಕುಟಾಸನ, ಯೋಗ ನಿದ್ರಾಸನ, ಶೀರ್ಷಾಸನ, ಪಿಂಚಮಯೂರಾಸನ, ಶಲಭ ವೃಶ್ಚಿಕಾಸನ, ಶವಾಸನ ಇತ್ಯಾದಿ ಅಭ್ಯಾಸ ಮಾಡಿದಾಗ ದೇಹವು ಬಲುಬೇಗನೆ ಶಾಖಗೊಳ್ಳುವುದು.

ಯೋಗಿಗಳು ಹೆಚ್ಚು ತಯಾರಾದ ಪರ್ವತಪ್ರದೇಶ ಹಿಮಾಲಯಗಳಲ್ಲಿಈ ಆಸನಗಳನ್ನು ಮಾಡುತ್ತಾರೆ. ಗುರುಮುಖೇನ ಸಲಹೆ ಪಡೆದುಕೊಂಡೇ ಆಸನವನ್ನು ಅಭ್ಯಾಸ ಮಾಡಬೇಕು. ಯೋಗ ವ್ಯಾಯಾಮದ ಜತೆಗೆ ವಾಕಿಂಗ್‌ ಹೋಗುವುದು, ಪತಂಜಲಿ ಋುಷಿ ತಿಳಿಸಿದ ಅಷ್ಟಾಂಗ ಯೋಗವನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಾಗ ಆರೋಗ್ಯ ರಕ್ಷಣೆಯೊಂದಿಗೆ ಉತ್ತಮ ಜೀವನ ಶೈಲಿಯಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top