



ಚಳಿಗಾಲದಲ್ಲಿ ಕಾಡುತ್ತಿರುವ ಅಸ್ತಮಕ್ಕಾಗಿ ಆಸನಗಳು
ಯೋಗ ಮುದ್ರೆ ಮತ್ತು ಪ್ರಾಣಾಯಮ – ಡಾ. ಮಾಲತಿ ಪೈ
ಅಸ್ತಮಾ ಇರುವವರು ಯೋಗ ಮಾಡುವುದರಿಂದ ಉತ್ತಮ ಆರೋಗ್ಯ ಹೊಂದಬಹುದು. ಎದೆಯ ಸ್ನಾಯುಗಳನ್ನು ತೆರೆಯುವ ಮೂಲಕ ಯೋಗವು ಸಹಾಯ ಮಾಡುತ್ತದೆ. ಯೋಗವು ಉತ್ತಮ ಉಸಿರಾಟವನ್ನು ಉತ್ತೇಜಿಸುತ್ತದೆ.
ಆಸ್ತಮಾಕ್ಕಾಗಿ ಯೋಗ ಇದರ ಕುರಿತು ವಿಶ್ವವಿದ್ಯಾನಿಲಯಗಳಲ್ಲಿ ಹಲವಾರು ಅಧ್ಯಯನಗಳು ನಡೆದಿದೆ ಫಲಪ್ರದವನ್ನು ತಂದುಕೊಟ್ಟಿದೆ.
ಅಸ್ತಮಾ ರೋಗಿಗಳು ಯೋಗ ಅಭ್ಯಾಸ ಮಾಡುವುದರಿಂದ ನಮ್ಯತೆ, ಸಮತೋಲನ, ಉಸಿರಾಟದ ನಿರ್ವಹಣೆ ಸುಧಾರಿಸುತ್ತದೆ.
ನಿಯಮಿತವಾಗಿ ಯೋಗಾಭ್ಯಾಸ ಮಾಡುವುದರಿಂದ ಆಸ್ತಮಾ ಇರುವ ವ್ಯಕ್ತಿಗಳಿಗೆ ಅವರ ರೋಗಲಕ್ಷಣಗಳ ತೀವ್ರತೆಯನ್ನು ಕಡಿಮೆ ಮಾಡುವ ಮೂಲಕ ಸಹಾಯ ಮಾಡಬಹುದು.
ಯೋಗವು ಅಸ್ತಮಾಗೆ ಮೊದಲ ಹಂತದ ಚಿಕಿತ್ಸೆಯಾಗಿಲ್ಲವಾದರೂ, ಇದು ಸಮಗ್ರ ಚಿಕಿತ್ಸಾ ಯೋಜನೆಯ ಭಾಗವಾಗಿರಬಹುದು. ಕೆಲವು ಯೋಗ ಭಂಗಿಗಳು ಒತ್ತಡವನ್ನು ಕಡಿಮೆ ಮಾಡುತ್ತದೆ.
ಯೋಗ
ಅಸ್ತಮಾ ಸಮಸ್ಯೆಗೆ ರಾಮಬಾಣ ಈ ೫ ಯೋಗ ಭಂಗಿಗಳು.
ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಎದುರಾದಾಗ ವೈದ್ಯರಲ್ಲಿಗೆ ಹೋಗುತ್ತೇವೆ. ಮನೆ ಮದ್ದು ಅಥವಾ ಸಾಂಪ್ರದಾಯಿಕ ಪದ್ಧತಿಗಳ ಅನುಭವದಲ್ಲಿ ಅಂತಹ ಕಾಯಿಲೆಗಳನ್ನು ವಾಸಿ ಮಾಡಿಕೊಳ್ಳಬಹುದು.
ಬಹುತೇಕ ಜನರಿಗೆ ಇದು ಗೊತ್ತೇ ಇಲ್ಲ. ಅಸ್ತಮಾ ಅಥವಾ ಕೆಮ್ಮು ಸಮಸ್ಯೆಯಿಂದ ದೀರ್ಘಕಾಲ ತೊಂದರೆ ಅನುಭವಿಸುತ್ತಿರುವ ಮಂದಿಗೆ ಯೋಗಾಸನಗಳಿಂದ ಸಿಗಬಹುದು ಪರಿಹಾರ.
ಇಲ್ಲಿ ತಿಳಿಸಿರುವ ಯೋಗಾಸನಗಳು ಅಸ್ತಮಾ ಸಮಸ್ಯೆಯಿಂದ ಬಳಲುತ್ತಿರುವವರಿಗಾಗಿ ಹೇಳಿ ಮಾಡಿಸಿದ ಯೋಗಭ್ಯಾಸಗಳಾಗಿವೆ. ತುಂಬ ಸರಳವಾಗಿ ಇವುಗಳನ್ನು ಮಾಡಬಹುದು ಮತ್ತು ಯಾರು ಬೇಕಾದರೂ ಮಾಡಬಹುದು. ಅದರಲ್ಲಿ ಚಕ್ರಸನ ಮಾತ್ರ ಅನುಭವಿ ಆಗಿದ್ದರೆ ಮಾಡುವುದು ಒಳ್ಳೆಯದು. ಜೊತೆಗೆ ನಿಮಗೆ ಬೆನ್ನು ನೋವು ಇರಬಾರದು.
ಅಸ್ತಮಾ ಸಮಸ್ಯೆಗೆ ಪ್ರತಿದಿನ ಈ ಯೋಗಾಭ್ಯಾಸ ಮಾಡಿ…

ರಾಷ್ಟ್ರಮಟ್ಟದ ಯೋಗ ಪಟು : ಅನ್ವಿ ಅಂಚನ್
ವಜ್ರಾಸನ : ಮೊದಲಿಗೆ ಚಾಪೆಯ ಮೇಲೆ ನಿಮ್ಮ ಮಂಡಿಗಳನ್ನು ಇರಿಸಿ ನಿಮ್ಮ ಹಿಮ್ಮಡಿಗಳ ಮೇಲೆ ನಿಮ್ಮ ಸೊಂಟ ಇರಿಸಿ ಕುಳಿತುಕೊಳ್ಳಿ. ನಿಮ್ಮ ಎರಡು ಹಿಮ್ಮಡಿಗಳನ್ನು ಸ್ವಲ್ಪ ಅಂತರದಲ್ಲಿ ಇಟ್ಟುಕೊಳ್ಳಿ. ಈಗ ನಿಮ್ಮ ಕೈಗಳನ್ನು ನಿಮ್ಮ ತೊಡೆಗಳ ಮೇಲೆ ಇಟ್ಟುಕೊಳ್ಳಿ ಮುಂದೆ ನೋಡುತ್ತಾ ನಿಮ್ಮ ಬೆನ್ನನ್ನು ನೇರವಾಗಿ ಇಟ್ಟುಕೊಳ್ಳಿ. ಇದೇ ಭಂಗಿಯಲ್ಲಿ ಸ್ವಲ್ಪ ಹೊತ್ತು ಇರಿ.
ಪಶ್ಚಿಮೋತ್ತನಾಸನ : ಚಾಪೆಯ ಮೇಲೆ ಕುಳಿತು ಕಾಲುಗಳನ್ನು ಮುಂದಕ್ಕೆ ಚಾಚಿ ಈಗ ನಿಮ್ಮ ಕೈಗಳನ್ನು ನೇರವಾಗಿ ಮೇಲೆತ್ತಿ ಉಸಿರನ್ನು ಹೊರಗೆ ಬಿಡುತ್ತಾ ಸಾಧ್ಯವಾದಷ್ಟು ಮುಂದಕ್ಕೆ ಬಾಗುವ ಪ್ರಯತ್ನ ಮಾಡಿ.
ಆದರೆ ಮಂಡಿಗಳನ್ನು ಮಡಚ ಬೇಡಿ. ಹತ್ತು ಸೆಕೆಂಡುಗಳ ಕಾಲ ಹೀಗೆ ಇರಿ. ದಿನಾ ಈ ಯೋಗಾಸನಗಳನ್ನು ಮಾಡಿ, ಅಸ್ತಮಾ ಕಂಟ್ರೋಲ್ಗೆ ಬರುತ್ತೆ!
ಉಷ್ಟ್ರಾಸನ (ಒಂಟೆಯ ಭಂಗಿ): ಚಾಪೆಯ ಮೇಲೆ ಮಂಡಿಯೂರಿ ಕುಳಿತುಕೊಂಡು ನಿಮ್ಮ ಕೈಗಳನ್ನು ಸೊಂಟದ ಮೇಲೆ ಇರಿಸಿಕೊಳ್ಳಿ. ಇದೇ ಸಂದರ್ಭದಲ್ಲಿ ನಿಮ್ಮ ಬೆನ್ನನ್ನು ಭಾಗಿಸಿ ನಿಮ್ಮ ಅಂಗೈ ಗಳನ್ನು ನಿಮ್ಮ ಪಾದಗಳ ಬಳಿಗೆ ತೆಗೆದುಕೊಂಡು ತನ್ನಿ, ನಿಮ್ಮ ತೋಳುಗಳು ಈ ಸಂದರ್ಭದಲ್ಲಿ ನೇರವಾ ಗಿರಲಿ. ಆದರೆ ನೆನಪಿರಲಿ, ನಿಮ್ಮ ಕುತ್ತಿಗೆ ಭಾಗಕ್ಕೆ ಯಾವುದೇ ಒತ್ತಡ ಎದುರಾಗಬಾರದು.
ಅರ್ಧ ಮತ್ಸ್ಯಾಸನ : ದಂಡಸನದಿAದ ಮೊದಲು ಶುರು ಮಾಡಿ. ಇದಕ್ಕಾಗಿ ನೀವು ಎಡಗಾಲನ್ನು ಮಡಚಿ ನೆಲದ ಮೇಲೆ ಬಲಗಾಲನ್ನು ಇಟ್ಟು, ಬಲ ಮಂಡಿಯ ಮೇಲೆ ಎಡ ಪಾದವನ್ನು ಇರಿಸಿ. ಈಗ ನಿಮ್ಮ ಬಲಗಾಲನ್ನು ಮಡಚಿ ಎಡಗಾಲಿನ ಹೆಬ್ಬೆರಳನ್ನು ಬಲಗೈಯಿಂದ ಹಿಡಿದುಕೊಳ್ಳಿ.ಈಗ ನಿಧಾನವಾಗಿ ಉಸಿರನ್ನು ಹೊರಬಿಡುತ್ತ ನಿಮ್ಮ ಸೊಂಟದ ಭಾಗವನ್ನು ತಿರುಗಿಸಿ, ನಿಮ್ಮ ಕುತ್ತಿಗೆಯನ್ನು ಸಹ ತಿರುಗಿಸಿ. ಈ ಸಂದರ್ಭದಲ್ಲಿ ನಿಮ್ಮ ಕಣ್ಣುಗಳು ನಿಮ್ಮ ಎಡ ಭುಜ ವನ್ನು ನೋಡುತ್ತಿರಲಿ. ನಿಮ್ಮ ಸೊಂಟದ ಭಾಗವನ್ನು ನಿಮ್ಮ ಎಡಗೈ ಸುತ್ತುವರಿದು ಅಂಗೈ ಮೇಲ್ಭಾಗಕ್ಕೆ ಇರಲಿ. ಬಲಗಾಲು ಮತ್ತು ಬಲ ಮಂಡಿ ಈ ಸಂದರ್ಭದಲ್ಲಿ ನೆಲದ ಮೇಲಿರಲಿ. ಎಡಗಡೆ ಮಂಡಿ ಬಲಗಡೆಯ ತೋಳಿನ ಹತ್ತಿರದಲ್ಲಿ ಇರುವಂತಹ ನೋಡಿಕೊಳ್ಳಿ.

ಚಕ್ರಾಸನ : ಬೆನ್ನಿನ ಮೇಲೆ ಮಲಗಿಕೊಂಡು ಕಾಲುಗಳನ್ನು ಮಡಚಿ ನಿಮ್ಮ ಕೈಗಳನ್ನು ಮಡಚಿ ನಿಮ್ಮ ಅಂಗೈಗಳನ್ನು ನಿಮ್ಮ ತಲೆಗೆ ಅಕ್ಕಪಕ್ಕ ಉಲ್ಟಾ ತಿರುಗಿಸಿ ಇಟ್ಟುಕೊಳ್ಳಿ. ಈಗ ನಿಧಾನವಾಗಿ ಉಸಿರನ್ನು ಒಳಗೆ ತೆಗೆದುಕೊಂಡು ಕಾಲುಗಳನ್ನು ಮತ್ತು ಅಂಗೈಗಳನ್ನು ಬೆಂಬಲವಾಗಿ ಇಟ್ಟುಕೊಂಡು ನಿಮ್ಮ ಇಡೀ ದೇಹವನ್ನು ಮೇಲೆತ್ತಲು ಪ್ರಯತ್ನಿಸಿ. ನಿಮ್ಮ ಕುತ್ತಿಗೆ ಈ ಸಂದರ್ಭದಲ್ಲಿ ವಿಶ್ರಾಂತವಾಗಿರಲಿ ಮತ್ತು ನಿಮ್ಮ ತಲೆಯನ್ನು ಹಿಂಬದಿಗೆ ತನ್ನಿ.

ಯೋಗದಲ್ಲಿ ಎರಡು ಮುದ್ರೆಗಳು ಅಸ್ತಮಾ ಸ್ಥಿತಿಗೆ ಬಹಳ ಉಪಯುಕ್ತವಾಗಿವೆ. ಇವುಗಳನ್ನು ಆಸ್ತಮಾ ಮುದ್ರೆ ಮತ್ತು ಶ್ವಾಸನಾಳದ ಮುದ್ರೆ ಎಂದು ಕರೆಯಲಾಗುತ್ತದೆ. ಅಸ್ತಮಾ ರೋಗಿಗಳಿಗೆ ಯೋಗಾಸನಗಳ ಜೊತೆಗೆ, ಮೇಲಿನ ಎರಡು ಮುದ್ರೆಗಳನ್ನು ಒಂದರ ನಂತರ ಒಂದರAತೆ ಮಾಡುವುದರಿಂದ ಉಸಿರಾಟ ಸಮಸ್ಸೆಗೆ ಮುಕ್ತಿ ದೊರೆಯುತ್ತದೆ. ಪ್ರತಿದಿನ ಐದು ಬಾರಿ ೫ ನಿಮಿಷಗಳ ಕಾಲ ಮಾಡಬೇಕು.
ಪ್ರಾಣಾಯಾಮವು ಆಸ್ತಮಾ ರೋಗಿಗಳಿಗೆ ಸಹಾಯ ಮಾಡುತ್ತದೆ. ಯೋಗ ಮಾಡುವಾಗ “ನಾಡಿಗಳು” ಅಥವಾ ದೇಹದ ಶಕ್ತಿಯ ಚಾನಲ್ಗಳು ತೆರೆದುಕೊಳ್ಳುತ್ತವೆ. ಈ ಚಾನಲ್ಗಳು ಸಿಸ್ಟಂನ ಪ್ರತಿಯೊಂದು ಭಾಗಕ್ಕೂ ಶಕ್ತಿಯನ್ನು ಪರಿಚಲನೆ ಮಾಡಲು ಸಹಾಯ ಮಾಡುತ್ತವೆ. ಇದು ಯೋಗಕ್ಷೇಮವನ್ನು ಸುಧಾರಿಸುವ ಮನಸ್ಸು ಮತ್ತು ದೇಹವನ್ನು ಗುಣಪಡಿಸಲು ಕಾರಣವಾಗುತ್ತದೆ. ಇದು ಆಸ್ತಮಾ (ಉಬ್ಬಸ )ವನ್ನು ಕಡಿಮೆ ಮಾಡುತ್ತದೆ. ಯೋಗವು ಕೊಲೆಸ್ಟಾçಲ್ಗೆ ಸಹಾಯ ಮಾಡುತ್ತದೆ ಮತ್ತು ಭಂಗಿಗಳನ್ನು ಕಲಿಯಲು ಸುಲಭವಾಗಿದೆ.
ಅನುಲೋಮ್ ವಿಲೋಮ್ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ನಾಡಿ ಶೋಧನ ಪ್ರಾಣಾಯಾಮವು ದೇಹದಲ್ಲಿನ ನಿರ್ಬಂಧಿಸಲಾದ ಶಕ್ತಿಯ ಚಾನಲ್ಗಳನ್ನು ತೆರವುಗೊಳಿಸುತ್ತದೆ. ಅದನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಇದು ನಮ್ಮ ಮನಸ್ಸನ್ನು ಶಾಂತಗೊಳಿಸುತ್ತದೆ. ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ. ಕಪಾಲ್ ಭಾತಿ ಒಂದು ಜನಪ್ರಿಯ ಪ್ರಾಣಾಯಾಮವಾಗಿದೆ. ಇದು ಚಯಾಪಚಯವನ್ನು ವೇಗಗೊಳಿಸುವುದು. ರಕ್ತ ಪರಿಚಲನೆ ಸುಧಾರಿಸುವುದು. ನರಮಂಡಲವನ್ನು ಶಕ್ತಿಯುತಗೊಳಿಸುವುದು. ದೇಹದಾದ್ಯಂತ ಶಕ್ತಿಯ ಹರಿವನ್ನು ಉತ್ತೇಜಿಸುವಂತಹ ಅನೇಕ ಪ್ರಯೋಜನಗಳನ್ನು ಹೊಂದಿದೆ. ದೇಹದ ವಾಯುಮಾರ್ಗಗಳನ್ನು ಶುದ್ಧೀಕರಿಸಲು ಕಪಾಲ್ ಭಾತಿಯೊಂದಿಗೆ ಭಸ್ತಿçಕಾ ಪ್ರಾಣಾಯಾಮವನ್ನು ಮಾಡಲಾಗುತ್ತದೆ.
ಶ್ವಾಸಕೋಶದಲ್ಲಿ ಬಲವನ್ನು ನಿರ್ಮಿಸುವ ತ್ರಾಣವನ್ನು ಹೆಚ್ಚಿಸುವ ಬಲವಾದ ಉಸಿರಾಟದೊಂದಿಗೆ ಆಳವಾದ ಉಸಿರಾಟವನ್ನು ಒಳಗೊಂಡಿರುತ್ತದೆ. ಇವುಗಳು ಆಸ್ತಮಾ ರೋಗಿಯ ಆರೋಗ್ಯವನ್ನು ಕಾಪಾಡಲು ಸಹಾಯಕವಾಗಬಹುದು ಮತ್ತು ಯೋಗವು ದೀರ್ಘಕಾಲದ ಕಾಯಿಲೆಗಳನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ .ಆದರೆ ಅವುಗಳನ್ನು ನಮ್ಮ ದಿನಚರಿಗೆ ಸೇರಿಸುವ ಮೊದಲು ನಿಮ್ಮ ವೈದ್ಯರನ್ನು ಸoಪರ್ಕಿಸಬೇಕು.




































