
ಚಪ್ಪಲಿ ಅಂಗಡಿ ನೌಕರನ ಮೇಲೆ ದಾಖಲಾಗಿದ್ದ ಮಾನಭಂಗ ಯತ್ನ ಪ್ರಕರಣ : ಆರೋಪಿಯ ಖುಲಾಸೆ


ಕಾರ್ಕಳ : ಗ್ರಾಮಾಂತರ ಪೊಲೀಸ್ ಠಾಣೆಯ ಪ್ರಥಮ ವರ್ತಮಾನ ಪ್ರಕರಣ ಸಂಖ್ಯೆ 89/2023 ರನ್ವಯ ಚಪ್ಪಲಿ ಅಂಗಡಿ ನೌಕರ ಸರ್ಫುದ್ದೀನ್ ಅವರ ವಿರುದ್ಧ ಮಾನಭಂಗ ಯತ್ನದ ಆರೋಪದಡಿ ಪ್ರಕರಣ ದಾಖಲಾಗಿತ್ತು. ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಧಾನ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ, ಕಾರ್ಕಳದಲ್ಲಿ ಸಿ.ಸಿ. ನಂ. 1920/2023 ರಂತೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆಯನ್ನು ನಡೆಸಿದ ಪ್ರಧಾನ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯವು, ಆರೋಪಗಳ ಸಾಕ್ಷ್ಯಾಧಾರಗಳು ಸಮರ್ಪಕವಾಗಿಲ್ಲವೆಂದು ಪರಿಗಣಿಸಿ, ಆರೋಪಿ ಸರ್ಫುದ್ದೀನ್ ಅವರನ್ನು ಮಾನಭಂಗ ಯತ್ನದ ಆರೋಪದಿಂದ ದೋಷಮುಕ್ತಗೊಳಿಸಿ ಖುಲಾಸೆಗೊಳಿಸಿ ತೀರ್ಪು ಪ್ರಕಟಿಸಿದೆ.
ಆರೋಪಿತರ ಪರವಾಗಿ ನ್ಯಾಯವಾದಿ ಶರತ್ ಡಿ. ಶೆಟ್ಟಿ ಅವರು ವಾದ ಮಂಡಿಸಿದ್ದರು.








































