





ಗ್ರಾಹಕ ತರಬೇತುದಾರರ ತರಬೇತಿ ಕಾರ್ಯಾಗಾರ
ವರದಿ : ರಾಯಿ ರಾಜಕುಮಾರ ಮೂಡುಬಿದಿರೆ
ಬೆಂಗಳೂರು : ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆ ಹಾಗೂ ಗ್ರಾಹಕರಕ್ಷಣೆ, ಸಂಬಂಧಿತ ಸಮಸ್ಯೆಗಳ ಬಗ್ಗೆ ತರಬೇತುದಾರ ತರಬೇತಿ ಕಾರ್ಯಗಾರ ಡಿಸೆಂಬರ್ 24ರಂದು ಬೆಂಗಳೂರು ಇನ್ಫೆಂಟ್ರಿ ರಸ್ತೆಯ ಐಏಎಸ್ ಅಧಿಕಾರಿಗಳ ಸಂಘದಲ್ಲಿ ನಡೆಯಿತು.

ಕಾರ್ಯಾಗಾರವನ್ನು ಉದ್ಘಾಟಿಸಿ ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆಯ ಅಧ್ಯಕ್ಷ ಟಿ ಎಂ ವಿಜಯ ಭಾಸ್ಕರ್ ಮಾತನಾಡಿದರು.
ಅವರು ತಮ್ಮ ಭಾಷಣದಲ್ಲಿ ಗ್ರಾಹಕರ ಕರೆ ಕೇಂದ್ರಗಳನ್ನು ಪುನಃ ಸರಿಪಡಿಸಬೇಕಾಗಿದೆ. ನ್ಯಾಯಬೆಲೆ ಅಂಗಡಿಗಳ ಜಾಗೃತಿ ಸಮಿತಿಗಳಲ್ಲಿ ಗ್ರಾಹಕರ ಪ್ರತಿನಿಧಿಗಳನ್ನು ನೇಮಕ ಮಾಡಬೇಕು. ಜಿಲ್ಲಾ ಗ್ರಾಹಕ ರಕ್ಷಣಾ ಸಮಿತಿ ಹಾಗೂ ಜಾಗೃತಿ ಸಮಿತಿಗಳನ್ನು ಪುನಃ ನವೀಕರಣ ಮಾಡಿ ಶಾಲಾ ಅಭಿವೃದ್ಧಿ ಸಮಿತಿಯಂತೆ ಸುಧಾರಿಸಬೇಕಾಗಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಫುಡ್ ಸೆಕ್ಯೂರಿಟಿಯ ಬಗ್ಗೆ ಡಾ. ಕೃಷ್ಣ ಹಾಗೂ ಆಹಾರ ಸುರಕ್ಷತೆ ಗ್ರಾಹಕ ಮಾಹಿತಿಯ ಬಗ್ಗೆ ಶ್ರೀಮತಿ ಸುಜಾತ ಹೊಸಮನಿ ಅವರು ವಿಚಾರಗಳನ್ನು ಮಂಡಿಸಿದರು.
ಭಾರತೀಯ ಮಾನಕ ಬ್ಯೂರೋ ನ ನಾಗವೇಣಿ ಅವರು ಬಿಐಎಸ್ ಮಾರ್ಕ್, ಚಿನ್ನದ ಮನದಂಡಗಳು ಇತ್ಯಾದಿಗಳ ಮಾಹಿತಿಯನ್ನು ನೀಡಿದರು. ಕಾರವಾರದ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗದ ಅಧ್ಯಕ್ಷ ಡಾ. ಮಂಜುನಾಥ್ ಬೊಮ್ಮನಕಟ್ಟೆ ಅವರು ಗ್ರಾಹಕ ಸಂರಕ್ಷಣಾ ಕಾಯ್ದೆಯ ಚೌಕಟ್ಟುಗಳ ಬಗ್ಗೆ ತಿಳಿಸಿದರು.
ಗ್ರಾಹಕ ಕಲ್ಯಾಣ ನಿತ್ಯ ಅನುದಾನಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸಾಧ್ಯ ಇದೆ ಎನ್ನುವ ಮಾಹಿತಿಯನ್ನು ಹಾಗೂ ಇತರ ಹಲವಾರು ಮಾಹಿತಿಗಳನ್ನು ಸಭೆಗೆ ತಿಳಿಸಿದರು.
ಬಿ ಎಂ ಎಸ್ ಕಾನೂನು ಕಾಲೇಜಿನ ಡಾ. ಗಾಯತ್ರಿ ಬಾಯಿ ಅವರು ವಸ್ತುವಿನ ಪೂರ್ಣ ಮಾಹಿತಿ ಗ್ರಾಹಕನಿಗೆ ದೊರಕಬೇಕು. ದಾರಿ ತಪ್ಪಿಸುವ ಜಾಹೀರಾತುಗಳು ಬಹಳಷ್ಟು ಬರುತ್ತಿರುವ ಬಗ್ಗೆ ಹಲವಾರು ಮಾಹಿತಿಗಳನ್ನು ತಿಳಿಸಿದರು. ಶಿವಮೊಗ್ಗ ಗ್ರಾಹಕ ವೇದಿಕೆಯ ಮಂಜುನಾಥ್ ಅವರು ಸಕಾಲದ ಬಗ್ಗೆ ಸಾಕಷ್ಟು ಪ್ರಾಯೋಗಿಕ ಮಾಹಿತಿಗಳನ್ನು ತಿಳಿಸಿದರು. ಡಾ. ಚೇತನ್ ಅವರ ಆಹಾರ ಸುರಕ್ಷತೆಯ ಬಗ್ಗೆ ವಿಚಾರಗಳನ್ನು ಹಂಚಿಕೊಂಡರು.
ಡಾ. ಎಚ್ ಎಸ್ ರಾಜು ಅವರು ಪೂಟ್ಟಣ ಸಾಮಗ್ರಿ ಹಾಗೂ ಡಾ.ಭಾಸ್ಕರ್ ರಾವ್ ಬೆಲೆ ನಿಯಂತ್ರಣಗಳ ಮಾಹಿತಿಯನ್ನು ಹಲವಾರು ಪ್ರಾಯೋಗಿಕ ವಿಚಾರಗಳೊಂದಿಗೆ ತಿಳಿಯಪಡಿಸಿದರು.
ಕಾರ್ಯಕ್ರಮವನ್ನು ಸಂಘಟಿಸಿದ್ದ ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆಯ ವೈ ಜಿ ಮುರಳೀಧರ್ ಅವರು ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ನಡೆಸುವ ಕುರಿತು ಕಾರ್ಯ ಸೂಚಿಯನ್ನು ಸಿದ್ಧಪಡಿಸಲು ಬೇಕಾದ ಸಮಗ್ರ ಮಾಹಿತಿಯನ್ನು ಸಭೆಗೆ ತಿಳಿಸಿದರು.
ಮಂಗಳೂರು ದ.ಕ. ಡಿಸಿಐಸಿ ಯ ರಾಯಿ ರಾಜಕುಮಾರ ಮೂಡುಬಿದಿರೆ ವಂದಿಸಿದರು.








































