ಗ್ರಾಹಕರನ್ನು ಬೆಸೆಯುವ ಬೆಳುವಾಯಿ ಚೇತನ ಗಾರ್ಡನ್!

Picture of RB NEWS

RB NEWS

Bureau Report

ಮೂಡುಬಿದಿರೆ ಕಾರ್ಕಳ ಮಾರ್ಗ ಮಧ್ಯೆ ಬೆಳುವಾಯಿ ಪೇಟೆ ಇದೆ. ಗ್ರಾಮೀಣ ರೈತರಿಗೆ ವ್ಯಾಪಾರ ಕೇಂದ್ರ ಸ್ಥಳವಾಗಿದ್ದ ಬೆಳುವಾಯಿ ಕಾಲ ಕ್ರಮೇಣ ಬಹಳ ವಿಸ್ತಾರವಾಗುತ್ತ ಅಭಿವೃದ್ಧಿಗೊಂಡಿತು.

ಪೇಟೆ ಅಭಿವೃದ್ಧಿಯಾಗುವಾಗ ಜೊತೆಜೊತೆಯಾಗಿ ಪ್ರತಿಯೊಂದು ಸೌಲಭ್ಯಗಳು ಹೆಚ್ತುತ್ತದೆ, ಜನರ ಬೇಡಿಕೆಗಳನ್ನು ಆವಶ್ಯಕತೆಯನ್ನು ಪೂರೈಸುವ ನಿಟ್ಚಿನಲ್ಲಿ ಸಮಾನ ಸ್ಪರ್ಧೆಗಳೂ ಏರ್ಪಡುತ್ತದೆ.
ಬೆಳುವಾಯಿಯ ಚೇತನ ಬಾರ್ ಆ್ಯಂಡ್ ರೆಸ್ಟೋರೆಂಟ್ ಇದೆ.

ಅಂದು ಸುಮಾರು ನಲವತ್ತು ವರ್ಷಗಳ ಹಿಂದೆ ಮುಖ್ಯ ರಸ್ತೆಯ ಬದಿಯಲ್ಲಿನ ಕಟ್ಟಡದಲ್ಲಿಯೆ ತೆರೆಯಲ್ಪಟ್ಚು ಕಳೆದ ನಲವತ್ತು ವರ್ಷಗಳ ತನಕವೂ ಅಗೇ ಜಾಗದಲ್ಲಿದ್ದು, ಕಳೆದ ಆರು ವರ್ಷಗಳ ಹಿಂದೆಯಷ್ಟೆ ಅಳಿಯೂರು ರಸ್ತೆಯತ್ತ ಸ್ಥಳಾಂತರಗೊಂಡಿತು.

ಹೆದ್ದಾರಿಯಿಂದ ಕೇವಲ ಮುನ್ನೂರು ಮೀಟರುಗಳ ಅಂತರದಲ್ಲಿರುವ ಚೇತನ ಬಾರ್ ಇದೀಗ ಹೊರಾಂಗಣದಲ್ಲಿ ಊಟೋಪಚಾರ ಇತ್ಯಾದಿಯ ಸೇವನೆಗಾಗಿ ಅನುಕೂಲ ಒದಗಿಸಿಕೊಡುವುದಕ್ಕೆಂದೇ “ಚೇತನ ಗಾರ್ಡನ್” ತೆರೆಯಲ್ಪಟಿದೆ.

ವಿಶಾಲವಾದ ಹೊರಾಂಗಣದಲ್ಲಿ ಆಕರ್ಷಕವಾದ ಎಂಟು ಕೊಠಡಿಗಳನ್ನು ಬಹಳ ಸುಂದರ ಹಾಗೂ ಅಚ್ಚುಕಟ್ಟಾಗಿ ನಿರ್ಮಿಸಲಾಗಿದೆ. ಒಟ್ಟು ಎಂಟು ಪ್ರತ್ಯೇಕ ಪ್ರತ್ಯೇಕ ರೂಮುಗಳನ್ನು ನಿರ್ಮಿಸಿದ್ದು ಒಳಗಡೆಯೂ ಬಹಳ ಅಚ್ಚುಕಟ್ಟಾದ ಆಸನ ವ್ಯವಸ್ಥೆ ವಾತಾನುಕೂಲ ವ್ಯವಸ್ಥೆಯನ್ನು ಮಾಡಲಾಗಿದೆ.

ಗ್ರಾಹಕರು ಆಸಕ್ತಿ ತೋರಿಸುವ ವಿಶೇಷ ಅಡುಗೆಯನ್ನು ಮಾಡಿ ಒದಗಿಸುವ ಒಂದು ಹೊಸ ಪರಿಕಲ್ಪನೆಯಿಂದ ಈ ಚೇತನ ಗಾರ್ಡನ್ ಅನ್ನು ರಚಿಸಲಾಗಿದೆ ಎಂದು ಅದರ ಮಾಲೀಕರಾಗಿರುವ ಭಾಸ್ಕರ ಕೋಟ್ಯಾನ್ ತುಂಬಾ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಮುಂದಿನ ದಿನಗಳಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಆಹಾರ ಪೂರೈಕೆ ಹಾಗೂ ಸರಬರಾಜು ಮಾಡುವ ಸೇವೆಯನ್ನೂ ಕೈಗೊಳ್ಳಲಾಗುವುದು. ನಾಗರಿಕರ ಬೇಡಿಕೆಯನ್ನು ಪ್ರಾಮಾಣಿಕವಾಗಿ ಪೂರೈಸಿಕೊಡುವ ಒಳ್ಳೆಯ ಪ್ರಯತ್ನಕ್ಕೂ ಮುಂದಾಗುವ ಮುಂದಾಲೋಚನೆಯಿದೆ ಎನ್ನುತ್ತಾರೆ.

ಮೊದಲಿಂದಲೂ ಮೀನು,ಕೋಳಿ,ಮಾಂಸದೂಟದ ಅಡುಗೆಯಲ್ಲಿ ಚೇತನ ಬಾರ್ ಆ್ಯಂಡ್ ರೆಸ್ಟೋರೆಂಟ್ ಜನರ ಮೆಚ್ಚಗೆ ಗಳಿಸುತ್ತ ಬಂದಿರುತ್ತದೆ. ಬಗೆಬಗೆಯ ಆಹಾರವನ್ನು ಬಹಳ ರುಚಿಯಾಗಿ ತಯಾರಿಸುವ ಬಾಣಸಿಗರನ್ನು ಇಟ್ಟುಕೊಂಡಿರುವುದರಿಂದಲೇ ಚೇತನ ಬಾರ್ ಆ್ಯಂಡ್ ರೆಸ್ಟಾರೆಂಟ್ ತನ್ನ ಜನಪ್ರಿಯತೆಯನ್ನು ಕಾಪಾಡಿಕೊಳ್ಳುತ್ತ ಬಂದಿರುತ್ತದೆ.

ಇದೀಗ ಚೇತನ ಗಾರ್ಡನ್ ತೆರೆದ ನಂತರ ಬೆಳುವಾಯಿ ಪರಿಸರ ಮಾತ್ರವಷ್ಟೇ ಅಲ್ಲ ದೂರದ ಕಾರ್ಕಳ,ಹೊಸ್ಮಾರು ಅಳಿಯೂರು,ಕಜೆ,ಶಿರ್ತಾಡಿ ಮೂಡುಬಿದಿರೆಯಿಂದಲೂ ಆಗಮಿಸುತ್ತಿದ್ದು ಬಹಳ ಪ್ರಶಂಸೆಗೊಳಗಾುತ್ತಿದೆ.

ಭಾಸ್ಕರ ಕೋಟ್ಯಾನ್ ಅವರ ಸಹೋದರ ಉದಯ ಕೋಟ್ಯಾನ್ ಅವರು ಕೂಡಾ ಬಹಳ ಮುತುವರ್ಜಿಯಿಂದ ಮೇಲ್ವಿಚಾರಣೆ ಮಾಡುತ್ತಿರುವುದರಿಂದಲೂ ಹೊಟೇಲಿನ ಗುಣಮಟ್ಟವಷ್ಟೇ ಅಲ್ಲ, ಸ್ವಾಗತ ಮತ್ತು ಆಹಾರ ಒದಗಿಸುವಲ್ಲಿಯೂ ಗ್ರಾಹಕರಿಹೆ ಯಾವುಗೇ ಸಣ್ಣ ಪುಟ್ಚರೀತಿಯ ನೋವು,ಅಸಹನೆ ಬರುತ್ತಿಲ್ಲವೆನ್ನುವುದು ರೆಸ್ಟಾರೆಂಟಿನ ಮತ್ತೊಂದು ಹೆಮ್ಮೆಯ ಗರಿಯಾಗಿದೆ.

ಅಲ್ಲಿನ ಮೆನೇಜರ್ ಸುಧಾಕರ್ ಕೂಡಾ ಸದಾ ನಗುನಗುತ್ತಲೇ ಸೇವೆ ಕೊಡುವುದು ಕೂಡಾ ಕೋಟ್ಯಾನ್ ಸಹೋದರರ ಈ ಉದ್ಯಮಕ್ಕೆ ಒಳ್ಳೆಯ ಅದೃಷ್ಟವೂ ಆಗಿದೆ.

ಸುಮಾರು ಇಪ್ಪತ್ತೈದು ಮಂದಿಯಷ್ಟು ಸೇರುವುದಕ್ಕೆ ಸಾಧ್ಯವಾಗುವ ಪುಟ್ಚ ಸಭಾ ವೇದಿಕೆಯನ್ನು ಕೂಡ ಈ ಗಾರ್ಡನಲ್ಲಿ ನಿರಿಮಿಸಲಾಗಿದೆ. ಅದರಲ್ಲಿ ಸೀಮಿತ ಮಂದಿಗೆ ಆಹಾರ ಸರಬರಾಜು ಮಾಡುವುಕ್ಕೆ ಅವಕಾಶವಿದೆ. ಸ್ವಾಗತ,ಬೀಳ್ಕೊಡುಗೆ ಮುಂತಾದ ಪುಟ್ಟ ಕಾರ್ಯಕ್ರಮಗಳಿಗೆ ಹೇಳಿಮಾಡಿಸಿದಂತಿದೆ.

ಚಿಕ್ಕನ್,ಮಟನ್,ಫಿಶ್ ಇವುಗಳ ಖಾದ್ಯಗಳು ಇಲ್ಲಿ ಲಭಿಸುತ್ತದೆ. ಉತ್ತರ ಭಾರತ,ದಕ್ಷಿಣ ಭಾರತ ಆಹಾರ ಶೈಲಿಯ ಜೊತೆ ತುಳುನಾಡ ಆಹಾರ ಪದ್ಧತಿ ರೀತಿಯಲ್ಲಿ ಮಾಂಸಹಾರ ಆಹಾರಗಳನ್ನು ಸಿದ್ಧಪಡಿಸಲಾಗುತ್ತಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top