ಗ್ಯಾರೇಜು ಕಾರ್ಮಿಕರಿಗೆ ರೋಗ ನಿರೋಧಕ ಲಸಿಕೆ ವಿತರಣೆ

Picture of RB NEWS

RB NEWS

Bureau Report

ಕಾರ್ಕಳ : ರೋಟರಿ ಕ್ಲಬ್ ಕಾರ್ಕಳ ದಕ್ಷಿಣ ಕನ್ನಡ ಉಡುಪಿ ಜಿಲ್ಲಾ ಗ್ಯಾರೇಜು ಮಾಲಕರ ಸಂಘ( ರಿ), ರೋಟರ ಕ್ಟ್ ಕ್ಲಬ್ ಕಾರ್ಕಳ ಸಂಯುಕ್ತ ಆಶ್ರಯದಲ್ಲಿ ಕಾರ್ಕಳದ ಎಲ್ಲಾ ಗ್ಯಾರೇಜು ಕಾರ್ಮಿಕರಿಗೆ ರೋಗನಿರೋಧಕ ಲಸಿಕೆ,(ಟಿ . ಟಿ)ಕಾರ್ಯಕ್ರಮವು ರೋಟರಿ ಬಾಲ ಭವನದಲ್ಲಿ ನಡೆಯಿತು.

ಮಾಜಿ ಜಿಲ್ಲಾ ಗವರ್ನರ್ ರೋ ಡಾ. ಭರತೇಶ್ ಆದಿರಾಜ ಕಾರ್ಯಕ್ರಮ ಉದ್ಘಾಟಿಸಿ ರೋಗನಿರೋಧ ಲಸಿಕೆಯ ಅಗತ್ಯತೆಯ ಬಗ್ಗೆ ಸವಿವರವಾಗಿ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ರೋಟರಿ ಅಧ್ಯಕ್ಷ ಇಕ್ಬಾಲ್ ಅಹ್ಮದ್ ಸ್ವಾಗತಿಸಿದರು.

ಪ್ರಾಸ್ತಾವಿಕವಾಗಿ ರೊಟರಕ್ಟ್ ನಿರಂಜನ್ ಜೈನ್ ರವರು ಮಾತನಾಡಿ ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ನೀಡಿದರು.

ವೇದಿಕೆಯಲ್ಲಿ ದಕ್ಷಿಣ ಕನ್ನಡ ಉಡುಪಿ ಜಿಲ್ಲಾ ಗ್ಯಾರೇಜು ಮಾಲಕರ ಸಂಘದ ಅಧ್ಯಕ್ಷ ಅಬ್ದುಲ್ ಮೊಯಿದ್ದೀನ್ ಗೌರವ ಅಧ್ಯಕ್ಷ ಕೆ ಜಿ ರಾಮಪ್ಪ ರೋಟರಾಕ್ಟ್ ಕಾರ್ಯದರ್ಶಿ ವಿನೀತ್, ರೋಟರಿ ಕಾರ್ಯದರ್ಶಿ ಗಣೇಶ್ ಸಾಲಿಯನ್ ದಕ್ಷಿಣ ಕನ್ನಡ ಜಿಲ್ಲೆ ಗ್ಯಾರೇಜ್ ಮಾಲಕರ ಸಂಘದ ಕಾರ್ಯದರ್ಶಿ ಶಂಕರ್ ಶೆಟ್ಟಿಗಾರ್, ರೋಟರಿ ಸಮುದಾಯದ ನಿರ್ದೇಶಕ ಸೌಜನ್ಯ ಉಪಾಧ್ಯಾಯ ಮುಂತಾದವರು ವೇದಿಕೆಯಲ್ಲಿದ್ದರು.

ತದನಂತರ ಕಾರ್ಕಳದ 60ಕ್ಕೂ ಹೆಚ್ಚು ಗ್ಯಾರೇಜುಗಳಿಗೆ ತೆರಳಿ 350 ಮಂದಿ ಗ್ಯಾರೇಜು ಕಾರ್ಮಿಕರಿಗೆ ಚುಚ್ಚುಮದ್ದನ್ನು ನೀಡಲಾಯಿತು.

ಶುಶ್ರೂಶಕಿ ರೊ. ಮಮತಾ ಶೆಟ್ಟಿ ಎಲ್ಲಾ ಗ್ಯಾರೇಜುಗಳಿಗೆ ತೆರಳಿ, ಅಲ್ಲಿನ ಕಾರ್ಮಿಕರಿಗೆ ಚುಚ್ಚುಮದ್ದನ್ನು ನೀಡಿ ಸಹಕರಿಸಿದರು.

ಕಾರ್ಯಕ್ರಮದ ಕೊನೆಗೆ ದಕ್ಷಿಣ ಕನ್ನಡ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ಕಾರ್ಯದರ್ಶಿ, ಶಂಕರ್ ಶೆಟ್ಟಿಗಾರ್ ಧನ್ಯವಾದ ನೀಡಿದರು

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top