ಗ್ಯಾರಂಟಿ ಯೋಜನೆ ಅನುಷ್ಠಾನದ ಮೂಲಕ ವಿಪಕ್ಷಗಳಿಗೆ ತಕ್ಕ ಉತ್ತರ: ಭರತ್ ಮುಂಡೋಡಿ

Picture of RB NEWS

RB NEWS

Bureau Report

ಮೂಡುಬಿದಿರೆ: ವಿಪಕ್ಷಗಳ ಟೀಕೆಗಳಿಗೆ ಸರಕಾರ ಸೂಕ್ತ ಉತ್ತರ ನೀಡಿ ಅಧಿಕಾರಕ್ಕೆ ಬಂದ ಆರು ತಿಂಗಳಲ್ಲಿ ಎಲ್ಲಾ ಗ್ಯಾರೆಂಟಿಗಳನ್ನು ಅನುಷ್ಠಾನ ಮಾಡಿದೆ. ರಾಜ್ಯದ ಜಿಡಿಪಿ ಕೂಡ ಹೆಚ್ಚಿದೆ. ಈ ಕಾರ್ಯದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡಿ 90 ಶೇಕಡಾ ಅನುಷ್ಠಾನಗೊಂಡಿದೆ ಎಂದು ದ.ಕ.ಜಿಲ್ಲಾ ಗ್ಯಾರಂಟಿ ಯೋಜನೆ ಸಮಿತಿಯ ಅಧ್ಯಕ್ಷ ಭರತ್ ಮುಂಡೋಡಿ ಹೇಳಿದರು.

ಸಮಾಜ ಮಂದಿರದಲ್ಲಿ ಆಯೋಜಿಸಲಾದ ಪಂಚ ಗ್ಯಾರಂಟಿಯಲ್ಲಿ ತಿರಸ್ಕೃತಗೊಂಡ ಅರ್ಜಿಗಳ ವಿಲೇವಾರಿ ಹಾಗೂ ಯುವನಿಧಿ ನೋಂದಣಿ ಶಿಬಿರವನ್ನು ದೀಪ ಬೆಳಗಿ ಉದ್ಘಾಟಿಸಿ ಮಾತನಾಡಿದರು.

ಮೂಡುಬಿದಿರೆ ತಾಲೂಕಿನ ಪಂಚ ಗ್ಯಾರಂಟಿ ಸಮಿತಿಯ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ವೇದಿಕೆಯಲ್ಲಿ ಮೂಲ್ಕಿ ಗ್ಯಾರಂಟಿ ಸಮಿತಿಯ ಅಲ್ವಿನ್ ಲೋಬೋ, ಮಹಿಳಾ ಇಲಾಖೆಯ ಶುಭ, ವಾಹನ ಇಲಾಖೆಯ ನಿರ್ಮಲಾ, ಮೆಸ್ಕಾಂ ನ ಬುಶ್ರಾ, ಹಾಗೂ ಇತರ ಅಧಿಕಾರಿಗಳು ಹಾಜರಿದ್ದರು. ಮೂಡುಬಿದಿರೆ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾ ಅಧಿಕಾರಿ ಕುಸುಮಾಧರ್ ಸ್ವಾಗತಿಸಿದರು. ಶಿವಾನಂದ ಪಾಂಡು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top