ಗ್ಯಾಂಗ್’ಸ್ಟಾರ್ ಛೋಟಾ ರಾಜನ್ :  ಜೀವಾವಧಿ ಶಿಕ್ಷೆ ಅಮಾನತುಗೊಳಿಸಿದ ನ್ಯಾಯಾಲಯ

Picture of RB NEWS

RB NEWS

Bureau Report

ಮುಂಬಯಿ: ನಟೋರಿಯಸ್ ಗ್ಯಾಂಗ್’ಸ್ಟಾರ್ ಛೋಟಾ ರಾಜನ್’ಗೆ ಮುಂಬೈ ಹೈಕೋರ್ಟ್ ಕೊಲೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆ ಅಮಾನತು ಮಾಡಿ ಜಾಮೀನು ಮಂಜೂರು ಮಾಡಿದೆ.

2001 ರಲ್ಲಿ ಮುಂಬೈನಲ್ಲಿ ನಡೆದ ಜಯ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಛೋಟಾ ರಾಜನ್ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ. ಇದೀಗ ಮುಂಬೈ ಹೈಕೋರ್ಟ್ ಈ ಪ್ರಕರಣದಲ್ಲಿ ಆತನಿಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಅಮಾನತು‌ ಮಾಡಿ ಆದೇಶ ಹೊರಡಿಸಿದೆ.

ನ್ಯಾ. ರೇವತಿ ಮೋಹಿತೆ ದೆರೆ ಆದೇಶ ಹೊರಡಿಸಿ ಒಂದು ಲಕ್ಷ ಬಾಂಡಿನ ಷರತ್ತಿನೊಂದಿಗೆ ಜಾಮೀನು ಮಂಜೂರು ಮಾಡಿದ್ದಾರೆ. ಆದರೆ ಛೋಟಾ ರಾಜಮ್ ಈ ಜಾಮೀನಿನಿಂದ ಜೈಲಿನಿಂದ ಸದ್ಯಕ್ಕಂತೂ ಹೊರ ಬರುವ ಲಕ್ಷಣ ಕಾಣುತ್ತಿಲ್ಲ.‌ಕಾರಣವೇನೆಂದರೆ ಈತನ‌ ಮೇಲಿರುವ ಇತರ ಕ್ರಿಮಿನಲ್ ಆರೋಪಗಳಿಗಾಗಿ ಜೈಲು ಊಟ ಮುಂದುವರಿಸಬೇಕಾಗಿದೆ.

ಸೆಂಟ್ರಲ್ ಮುಂಬೈನಲ್ಲಿ ಗೋಲ್ಡನ್ ಕ್ರೌನ್ ಹೋಟೆಲ್ ಮಾಲಿಕ ಜಯಶೆಟ್ಟಿಯವರನ್ನು ಛೋಟಾ ರಾಜನ್ ಗ್ಯಾಂಗ್ ನ ಇಬ್ಬರು ಆರೋಪಿಗಳು ಗುಂಡು ಹೊಡೆದು ಕೊಂದಿರುವ ಆರೋಪವಿದೆ. ಅವರಿಂದ ಹಣ ಸುಲಿಗೆಗೆ ಗ್ಯಾಂಗದ ಒತ್ತಾಯಿಸಿದ್ದು ಕೊಡದಿದ್ದಾಗ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.

ಈಗಾಗಲೇ ಛೋಟಾ ರಾಜನ್ ಕ್ರೈಮ್ ರಿಪೋರ್ಟರ್ ಜೆ ದೆಯ್ ಅವರ ಕೊಲೆ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top