



]


ಗೋ ಪೂಜೆಯ ವಿಶಿಷ್ಟತೆ ಏನು?
ವೇದಕಾಲದಿಂದಲೂ ಹಸುವನ್ನು ದೇವತಾ ಸ್ವರೂಪದಿಂದ ಭಾರತೀಯ ಶಕ್ತಿ ಭಾರತೀಯ ಸಂಪತ್ತು ಭಾರತೀಯರ ಸರ್ವಸ್ವವು ಗೋಮಾತೆಯೇ !
ವರುಣಸ್ತ್ಯೈವ ಗೋಮೂತ್ರೆ ಗೋಮಯೇ ಹವ್ಯವಾಹನ:1
ದದೇ ವಾಯು: ಸಮೃದ್ಧಿಷ್ಟ: ಸೋಮ: ಕ್ಷೀರೆe ಘ್ರತ್ಯೇ ರವಿ:ll
ಗೋಮೂತ್ರದಲ್ಲಿ ವರುಣದೇವರು ಗೋಮಯದಲ್ಲಿ (ಸಗಣಿ) ಅಗ್ನಿ ದೇವನು ಮೊಸರಿನಲ್ಲಿ ವಾಯುದೇವನು ಗೋವಿನ ಹಾಲಿನಲ್ಲಿ ಚಂದ್ರನು ತುಪ್ಪದಲ್ಲಿ ಸೂರ್ಯದೇವನು ಇದ್ದಾರೆ. ಗೋಮಾತೆಯ ಒಂದೊಂದು ಅವಯವದಲ್ಲಿ ಒಂದೊಂದು ದೇವತೆ ಇದ್ದಾರೆoದು ವೇದಗಳು ಹೇಳುತ್ತಿವೆ. ಒಂದು ಸಲ ಗೋಮಾತೆಯ ಪ್ರದಕ್ಷಣೆ ಮಾಡಿದರೆ ತ್ರಿಲೋಕ ಪ್ರದಕ್ಷಿಣ ಮಾಡಿದ ಪುಣ್ಯ ಸಿಗುತ್ತದೆ . ಪ್ರತಿದಿನವೂ ಗೋಮಾತೆಯನ್ನು ಪೂಜಿಸುವವರಿಗೆ ಲಕ್ಷ್ಮಿ ಕಟಾಕ್ಷ ಸಿದ್ಧಿಸುತ್ತದೆ. ಆಕಳನ್ನು ಸಾಕುವ ವರಿಗೆ ಆಯುಷ್ಯ ಜಾಸ್ತಿ ಇರುತ್ತದೆ ಎಂದು ಹೇಳಲಾಗುತ್ತದೆ.
ಆಕಳ ಹಾಲು ಮೊಸರು ತುಪ್ಪ ತಿನ್ನುವವರು ಆರೋಗ್ಯವಂತರಾಗಿದ್ದು ಹೆಚ್ಚಿನ ಕಾಲ ಜೀವಿಸುತ್ತಾರೆಂದು ಪರಿಶೋಧಸಲ್ಪಟ್ಟಿದೆ.
ಶ್ರೀ ವಿಷ್ಣು ವನ್ನು ಗೋವಿಂದ ಅನ್ನುತ್ತಾರೆ.
ಶ್ರೀಕೃಷ್ಣನನ್ನು ಗೋಪಾಲ ಅನ್ನುತ್ತಾರೆ.
ಸರ್ವೋಪಕಾರಿಯಾದ ಗೋಮಾತೆ !
ಸರ್ವೋಪಕಾರಿಯಾದ ಗೋಮಾತೆ !

ಗೋವಿನ ಮಹತ್ವ, ಉಪಯೋಗ ಇತ್ಯಾದಿಗಳನ್ನು ನಾವು ನೋಡುತ್ತಾ ಹೋದರೆ ಅದಕ್ಕೆ ಕೊನೆಯೇ ಇರುವುದಿಲ್ಲ. ಗೋವಿನ ಉಪಯುಕ್ತತೆಯು ವೈದ್ಯಕೀಯದಲ್ಲಿ, ಆರ್ಥಿಕ ವಿಷಯದಲ್ಲಿ, ಕೃಷಿಯಲ್ಲಿ ಮತ್ತು ವಾತಾವರಣದ ಶುದ್ಧೀಕರಣದಲ್ಲಿ ಹೇಗಿದೆ ಎಂಬ ಬಗ್ಗೆ ಕೆಲವು ಅಂಶಗಳನ್ನು ನೋಡೋಣ.
ವೈದ್ಯಕೀಯ ವಿಷಯದಲ್ಲಿ: ಗೋಮೂತ್ರ, ಗೋಮಯ ಮತ್ತು ವಿಭೂತಿಗಳಲ್ಲಿ ಲಕ್ಷ್ಮೀಯು ವಾಸಿಸುತ್ತಾಳೆ ಎಂದು ಹೇಳುತ್ತಾರೆ. ಗೋಮೂತ್ರವು ರೋಗನಿವಾರಕ ಮತ್ತು ಆರೋಗ್ಯವರ್ಧಕವಾಗಿದೆ. ಗೋಮೂತ್ರವು ಗಂಗಾಜಲಕ್ಕೆ ಸಮಾನವಾಗಿದೆ. ಗೋಮಯವನ್ನು ಒಣಗಿಸಿ ತಟ್ಟಿ ಅಗ್ನಿಗೆ ಅರ್ಪಿಸಿದಾಗ ವಿಭೂತಿಯಾಗುತ್ತದೆ. ಇವುಗಳೆಲ್ಲವೂ ಪರಮಪವಿತ್ರ ಮಾತ್ರವಲ್ಲದೆ ಸ್ಥೂಲ ಮತ್ತು ಸೂಕ್ಷ್ಮ ದೇಹಗಳ ಶುದ್ಧೀಕರಣ ಮಾಡುತ್ತವೆ.
ಗೋಮೂತ್ರ: ಗೋಮೂತ್ರದಲ್ಲಿ ಅದ್ಭುತವಾದ ಔಷಧೀಯ ಗುಣಗಳಿವೆ. ಸುಮಾರು ೧೪೮ ರೋಗಗಳಿಗೆ ಗೋಮೂತ್ರವು ಔಷಧಿಯಂತೆ ಕೆಲಸ ಮಾಡುತ್ತದೆ. ಕ್ಯಾನ್ಸರ್ನಿಂದ ಪ್ರಾರಂಭಿಸಿ ಅಜೀರ್ಣ, ಹೊಟ್ಟೆ ನೋವು, ಚರ್ಮ ರೋಗಗಳವರೆಗೆ ಗೋಮೂತ್ರದಿಂದ ವಾಸಿಯಾಗುವ ರೋಗಗಳ ಪಟ್ಟಿ ಬೆಳೆಯುತ್ತದೆ. ಗೋಮೂತ್ರವು ಕ್ಯಾನ್ಸರ್ ವಿರುದ್ಧ ಪರಿಣಾಮಕಾರಿ ಎಂಬ ಸತ್ಯವು ಇತ್ತೀಚೆಗೆ ಪ್ರಚಾರಕ್ಕೆ ಬಂದಿರುವುದಾದರೂ ಇದರ ಉಲ್ಲೇಖವು ವೇದಗಳಲ್ಲಿ ಬಂದಿದೆ. ಶರೀರದ ಮೇಲೆ ಗಂಟುಗಳು ಆದಲ್ಲಿ ಗೋಮೂತ್ರದ ನೊರೆಯಿಂದ ತೇವ ಭರಿತವಾಗಿಸುವುದು, ಗೋಮೂತ್ರವನ್ನು ಅದರ ಮೇಲೆ ಧಾರೆಯಂತೆ ಸುರಿಯುವುದು, ಗೋಮೂತ್ರದಿಂದ ತೊಳೆಯುವುದು ಮೊದಲಾದ ಚಿಕಿತ್ಸಾ ವಿಧಾನವನ್ನು ‘ಅಥರ್ವವೇದ’ದಲ್ಲಿ ಹೇಳಲಾಗಿದೆ. ರಸೌಷಧಿಗಳ ಶೋಧನೆಗೂ ಗೋಮೂತ್ರವನ್ನು ಬಳಸುತ್ತಾರೆ.
ಗೋಮಯ: ಹಸುವಿನ ಸೆಗಣಿಯು ಕ್ರಿಮಿನಾಶಕ ಗುಣಗಳನ್ನು ಹೊಂದಿರುವುದರಿಂದ ಮೊದಲು ಜನರು ನೆಲವನ್ನು ಸಾರಿಸಲು ಉಪಯೋಗಿಸುತ್ತಿದ್ದರು. ಈಗಲೂ ಹಳ್ಳಿಗಳಲ್ಲಿ ಜನರು ಇದನ್ನು ಬಳಸುತ್ತಾರೆ. ಬೆರಣಿಯ ಭಸ್ಮವು ಚಳಿ, ಜ್ವರ ಇತ್ಯಾದಿಗಳಲ್ಲಿ ಮೈ ಶಾಖವನ್ನು ಕಾಪಾಡಲು ಸಹಾಯ ಮಾಡುತ್ತದೆ.
ಗೋಕ್ಷೀರ (ಹಸುವಿನ ಹಾಲು): ಎಳೆಯ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಉಪಯುಕ್ತ. ಹಾಲು ವಾತ, ಪಿತ್ಥ, ಕಫಗಳೆಂಬ ಮೂರು ದೋಷಗಳನ್ನು ಹೋಗಲಾಡಿಸುತ್ತದೆ.
ದಧಿ (ಮೊಸರು): ಹಸುವಿನ ಮೊಸರು ಶರೀರಕ್ಕೆ ಬಲಕರ. ವಾತ ಹರವೂ ದೇಹಪುಷ್ಟಿಕರವೂ ಆಗಿದೆ. ಮೊಸರಿಗೆ ಸಕ್ಕರೆ ಹಾಕಿ ಸೇವಿಸಿದರೆ ರಕ್ತದೋಷ ಹಾಗೂ ಪಿತ್ತದೋಷಗಳನ್ನು ಹೋಗಲಾಡಿಸಿ ಮೈ ಉರಿಯನ್ನು ಕಡಿಮೆ ಮಾಡುತ್ತದೆ.
ನವನೀತ (ಬೆಣ್ಣೆ): ತದ್ಹಿತಂ ಬಾಲಕೇ ವೃದ್ಧೇ ವಿಶೇಷಾದಮೃತಂ ಶಿಶೋಃ | ತಾಜಾ ಬೆಣ್ಣೆಯು ಮಕ್ಕಳಿಗೂ ಮತ್ತು ವೃದ್ಧರಿಗೂ ಹಿತವಾಗಿರುತ್ತದೆ. ಎಳೆ ಮಕ್ಕಳಿಗೆ ಅಮೃತದಂತೆ. ಅಗ್ನಿವರ್ಧಕ, ವಾತಪಿತ್ತಹರ, ಧಾತುಕ್ಷಯ, ಅತಿಸಾರ ಹಾಗೂ ದಮ್ಮುಗಳನ್ನು ನಿವಾರಿಸುತ್ತದೆ.
ಘೃತ (ತುಪ್ಪ): ತುಪ್ಪವು ವಾತಪಿತ್ತಹರ, ವಿಷಹರ, ಕಣ್ಣಿನ ರೋಗಗಳನ್ನು ಹೋಗಲಾಡಿಸಿ ದೃಷ್ಟಿಯನ್ನು ಚುರುಕುಗೊಳಿಸುತ್ತದೆ. ಖಾಯಿಲೆಗಳಲ್ಲಿ ಅರಿಶಿನ ಹಾಕಿ ಕಾಯಿಸಿದ ತುಪ್ಪವು ಉಪಯುಕ್ತವಾಗಿದೆ.
ಗೋರೋಜನ: ಗೋವಿನ ಪಿತ್ತಕೋಶದಲ್ಲಿ ಉತ್ಪತ್ತಿಯಾಗುವ ಗೋರೋಜನವು ಸರ್ವಾಂಗೀಣ ಆರೋಗ್ಯವರ್ಧಕ. ಇದು ದುಷ್ಟಶಕ್ತಿಗಳ ತೊಂದರೆಯನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದೆ.
ಗೊರಸು: ಹಸುವಿನ ಗೊರಸು ಧೂಪಗಳಲ್ಲಿ ಕ್ರಿಮಿಹರ ಮತ್ತು ರಕ್ಷೋಘ್ನವಾಗಿ ಬಳಸಲ್ಪಡುತ್ತದೆ.
ಆರ್ಥಿಕ ವಿಷಯದಲ್ಲಿ ನಮ್ಮದು ಕೃಷಿ ಪ್ರಧಾನ ದೇಶ. ಬಹುತೇಕ ಕೃಷಿಕರು ಕೃಷಿಗಾಗಿ ಜಾನುವಾರು ಗಳನ್ನು ಅವಲಂಬಿಸಿದ್ದಾರೆ. ಭಾರತದಲ್ಲಿ ಕೃಷಿ ಚಟುವಟಿಕೆಗಳಿಗೆ ಉಪಯೋಗಿಸಲ್ಪ ಡುವ ಜಾನುವಾರುಗಳು ಸುಮಾರು ೨೭,೦೦೦ ಮೆಗಾವಾಟ್ ಶಕ್ತಿಯನ್ನು ಉತ್ಪಾದಿಸುತ್ತವೆ. ಈ ಕೆಲಸಕ್ಕೆ ಟ್ರಾಕ್ಟರ್ ಉಪಯೋಗಿಸುವುದರಿಂದ ಸುಮಾರು ೨೪ ಮಿಲಿಯನ್ ಟನ್ ಡೀಸೆಲ್ನ್ನು ಆಮದು ಮಾಡಿಕೊಳ್ಳಬೇಕಾಗುತ್ತದೆ. ಇದರ ಬೆಲೆ ಸುಮಾರು ೨೨,೦೦೦ ಕೋಟಿಗಳು. ನಮ್ಮ ರಾಜ್ಯದಲ್ಲಿ ಪ್ರತಿ ಒಂದು ಸಾವಿರ ಹೆಕ್ಟೇರ್ ಭೂಮಿಯಲ್ಲಿ ೨.೭೯ ಟ್ರಾಕ್ಟರ್, ೦.೯೪೭ ಟಿಲ್ಲರ್ ಮತ್ತು ೩೫೯ ಜಾನುವಾರುಗಳನ್ನು ಕೃಷಿಗಾಗಿ ಬಳಸುತ್ತಿದ್ದೇವೆ. ಇನ್ನೂ ಪಕ್ಕಾ ರಸ್ತೆಗಳು ಇಲ್ಲದಿರುವುದರಿಂದ ಸಾರಿಗೆ ಮತ್ತು ಸಾಗಾಟಗಳಲ್ಲಿ ನಮ್ಮ ದೇಶದ ೮೪ ದಶಲಕ್ಷ ಜಾನುವಾರುಗಳು ಭಾಗಿಯಾಗುತ್ತಿವೆ. ಅತ್ಯಂತ ಉಪಯುಕ್ತವಾದ ನೈಸರ್ಗಿಕ ಗೊಬ್ಬರದ ಉತ್ಪತ್ತಿಗೆ ಗೋವಂಶವೇ ಕಾರಣ. ೨೩೬ಮಿಲಿಯನ್ ಟನ್ ನೈಸರ್ಗಿಕ ಗೊಬ್ಬರವನ್ನು ನಮ್ಮ ಜಾನುವಾರುಗಳು ನೀಡುತ್ತವೆ. ಹಳ್ಳಿಗಳಲ್ಲಿ ಕ್ಷೀರಕ್ರಾಂತಿಯನ್ನು ತರಲು ಮತ್ತು ಜನರ ಆರ್ಥಿಕ ಸ್ವಾವಲಂಬನೆಗಾಗಿ ಹೈನುಗಾರಿಕೆಯನ್ನು ಅಭಿವೃದ್ಧಿ ಪಡಿಸುವ ಯಾವುದೇ ಯೋಜನೆಗೆ ಗೋವು ಅವಕಾಶಗಳನ್ನು ಒದಗಿಸಿ ಕೊಟ್ಟಿದ್ದಾಳೆ . ನಮ್ಮ ಪೂರ್ವಜರನ್ನು ಸಾಕಿ ಸಲಹಿದ ಗೋಸಂತತಿಯನ್ನು ನಾವು ಗೌರವಿಸಬೇಕು.



































