ಗೋವಾದ ಕಡಲ ಕಿನಾರೆಯಂತೆ ಕರಾವಳಿಯ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲಿ

Picture of RB NEWS

RB NEWS

Bureau Report


ಗೋವಾ ರಾಜ್ಯವು ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿದೆ. ಇಲ್ಲಿನ ಕಡಲ ಕಿನಾರೆಯನ್ನು ಕೇಂದ್ರೀಕರಿಸಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಿದೆ. ಇದಕ್ಕೆ ಆ ಪ್ರದೇಶದ ಖಾಸಗಿಕ್ಷೇತ್ರವು ಉತ್ತೇಂಜನ ನೀಡಿದ ಪರಿಣಾಮ ಹಲವು ರೆಸಾರ್ಟ್ಗಳು, ಹೋಟೆಲ್‌ಗಳು, ಬಾರ್ ಎಂಡ್ ರೆಸ್ಟೋರೆಂಟ್‌ಗಳು, ಬೋಟಿಂಗ್‌ಗಳು, ವಸ್ತç ಹಾಗೂ ಇತರ ಅಲಂಕೃತಿಕ ವಸ್ತುಗಳ ಮಳಿಗೆಗಳು, ತಂಪು ಪಾನೀಯಗಳು ಸೇರಿದಂತೆ ಸಣ್ಣಪುಟ್ಟ ಆಹಾರ ಉತ್ಪಾದನೆಗಳು ತಲೆ ಎತ್ತಿವೆ. ಈ ಎಲ್ಲಾ ಕರಣಗಳಿಂದಾಗಿ ಗೋವಾದ ಕಡಲ ಕಿನಾರೆ ಪ್ರದೇಶವು ಪ್ರವಾಸೋದ್ಯಮವಾಗಿ ಅಭಿವೃದ್ಧಿಗೊಂಡ ಪರಿಣಾಮವಾಗಿ ಹಲವು ವಿಫುಲ ಉದ್ಯೋಗಾವಕಾಶ ತೆರದುಕೊಂಡಿವೆ. ಇದರಲ್ಲಿ ಅಕ್ಷರಜ್ಞಾನದಿಂದ ತಂತ್ರಜ್ಞಾನದ ವರೆಗಿನ ಜನರನ್ನು ಇಲ್ಲಿ ಕಾಣಬಹುದಾಗಿದೆ.

ಬಾಗ ಕಡಲ ಕಿನಾರೆಯಲ್ಲಿ ಕನ್ನಡಿಗರಿಗೆ ಕಾಯಕ
ಕಳೆದ 26 ವರ್ಷ ಹಿಂದೆ ಬಾಗ ಕಡಲ ಕಿನಾರೆಗೆ ಉದ್ಯೋಗ ಹರಿಸಿಕೊಂಡು ಬಂದವರಲ್ಲಿ ಗದಗ ಜಿಲ್ಲೆಯ ಶೇಖರ್ ನಾಯ್ಕ ಒಬ್ಬರಾಗಿದ್ದಾರೆ. ಅವರಲ್ಲಿ ಇದ್ದ ಸ್ವಾಮೀ ನಿಷ್ಠೆಯಿಂದಾಗಿ ಇದುವರೆಗೆ ಅದೇ ಪ್ರದೇಶದಲ್ಲಿ ಕಾಯಕವನ್ನು ಮುಂದುವರಿಸುತ್ತಾ ಬಂದಿದ್ದಾರೆ. ಇವರ ಹೇಳಿಕೆಯ ಪ್ರಕಾರ ಪ್ರವಾಸಿಗರು ವಿಹಾರಕ್ಕೆ ಬಂದಾಗ ಕಡಲ ಕಿನಾರೆಯ ಸೊಬಗನ್ನು ಅಸ್ವಾದಿಸಲು ಅರಾಮದಾಯಕವಾಗ ಸುಮಾರು 500ಕ್ಕೂ ಮಿಕ್ಕಿ ಬೆಡ್‌ಗಳು ಇಲ್ಲಿವೆ. ಇವೆಲ್ಲದರ ನಿರ್ವಹಣೆಯನ್ನು ಕರ್ನಾಟಕ ಗದಗದ ಕನ್ನಡಿಗರ ತಂಡವೇ ನಿರ್ವಹಿಸುತ್ತಾ ಹೆಮ್ಮೆಯನ್ನುಂಟು ಮಾಡಿದೆ. ಜೊತೆಗೆ ಇವರಲ್ಲಿ ಇರುವ ವಂಶಪಾರoಪರಿಕವಾದ ತೈಲ ಮಸಾಜ್ ಕಲೆಯು ಇನ್ನಷ್ಟು ಹೆಚ್ಚಿನ ರೀತಿಯಲ್ಲಿ ಸ್ವಾವಲಂಬಿ ಜೀವನಕ್ಕೆ ಪೂರಕ ಹಾಗೂ ಪ್ರೇರಕದಾಯಕವೂ ಆಗಿದೆ.

ಇಂತಹ ಚಿಂತನೆಯೊoದಿಗೆ ಕರ್ನಾಟಕದ ಕರಾವಳಿ ಕಡಲ ಕಿನಾರೆಗಳನ್ನು ಪ್ರವಾಸೋದ್ಯಮವಾಗಿ ಅಭಿವೃದ್ಧಿ ಪಡಿಸಿದಾಗ ಕರ್ನಾಟಕ ಮಂದಿಗೆ ತಮ್ಮ ರಾಜ್ಯದಲ್ಲಿ ವಿಫುಲ ಉದ್ಯೋಗ ಅವಕಾಶಗಳು ದೊರಕುವಂತಾಗುತ್ತದೆ.

ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವಾಗ ನಾನಾ ಉದ್ಯೋಗಗಳಿಗೆ ಕಾನೂನು ರೀತ್ಯಾದಲ್ಲಿ ಅವಕಾಶ ನೀಡಿದಾಗ ಇಲ್ಲಿ ಸಮಸ್ಸೆಗೆ ಎಡೆ ಮಾಡುವುದಿಲ್ಲ. ಹೀಗಾಗಿ ಕಳೆದ 26 ವರ್ಷಗಳಿಂದ ಗೋವಾದ ಬಾಗ ಬೀಚ್‌ನಲ್ಲಿ ಆರಾಮದಾಯಕ ಮಂಚಗಳ ನಿರ್ವಹಣೆಯ ಜೊತೆ ಮಸಾಜ್ ಕಾಯಕವನ್ನು ನಿರ್ವಹಿಸಿ ಬಂದಿರುವ ಶೇಖರ್ ನಾಯ್ಕ ಅವರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.


-ಪಿಯುಸಿ ವರೆಗೆ ಓದಿರುವ ಶೇಖರ್ ನಾಯ್ಕ ಉದ್ಯೋಗವನ್ನು ಹರಿಸಿಕೊಂಡು ಗೋವಾದ ಕಡಲ ಕಿನಾರೆಗೆ ಬಂದಿದ್ದರು. ಇವರಂತೆ ಗದಗ ಜಿಲ್ಲೆಯಿಂದ ಇನ್ನಷ್ಟು ಮಂದಿ ಬಂದಿದ್ದು ಇದೀಗ ಅವರ ಸಂಖ್ಯೆ 100ರ ಗಡಿದಾಟಿದೆ. ಕನ್ನಡ, ತೆಲುಗು, ಕೊಂಕಣಿ, ಮರಾಠಿ, ಇಂಗ್ಲೀಷ್, ರಷ್ಯಾನ್ ಬಾಷೆಗಳನ್ನು ವ್ಯವಹರಿಸ ಬಲ್ಲವರಾಗಿದ್ದಾರೆ.
ಈ ಬೀಚ್‌ಗೆ ಅಕ್ಟೋಬರ್ ನಿಂದ ಫೆಬ್ರವರಿ ತನಕ ವಿದೇಶ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಅಗಮಿಸುತ್ತಾರೆ. ದೇಶದ ನಾನಾ ಭಾಗಗಳಿಂದ ಪ್ರವಾಸಿಗರು ಬರುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ವ್ಯವಹಾರಿಕ ಕ್ಷೇತ್ರಗಳಲ್ಲಿ ವಿವಿಧ ಭಾಷೆಗಳ ಜ್ಞಾನಗಳಿದ್ದರೆ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗುತ್ತದೆ. ವಿವಿಧ ಭಾಷೆಗಳ ಅಕ್ಷರ ಜ್ಞಾನ ಕಡಿಮೆ ಇದ್ದರೂ ವ್ಯವಹಾರಿಕ ಬಾಷೆಗಳನ್ನು ಸುಲಲಿತವಾಗಿ ಸಂಭಾಷಿಸ ಬಲ್ಲ ಎನ್ನುತ್ತಾರೆ. ಕುಟುಂಬವೂ ಊರಿನಲ್ಲಿ ಇದ್ದು, ವರ್ಷದ ನಾಲ್ಕು ತಿಂಗಳ ಮಳೆಗಾಲದಲ್ಲಿ ಊರಿಗೆ ಹಿಂತಿರುಗಿ ತಮ್ಮ ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಇವರಿಗೆ ಜಮೀನು ಇದ್ದು, ಅದರಲ್ಲಿ ಮೆಕ್ಕೆ ಜೋಳ, ಕಬ್ಬು, ಹತ್ತಿ, ತೊಗರಿ ಮೊದಲಾದವುಗಳನ್ನು ಬೆಳೆಸುತ್ತಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top