ಗೋಮಾಂಸ ರಫ್ತನ್ನು ತಕ್ಷಣ ನಿಲ್ಲಿಸಿ ಹಾಗೂ ಗೋವನ್ನು ‘ರಾಷ್ಟ್ರ ಮಾತೆ’ ಎಂದು ಘೋಷಿಸುವಂತೆ ಸ್ವಾಮಿ ಅವಿಮುಕೇಶ್ವರಾನಂದ ಸರಸ್ವತಿ ಸವಾಲು
RB NEWS
Bureau Report
ಗೋಮಾಂಸ ರಫ್ತನ್ನು ತಕ್ಷಣ ನಿಲ್ಲಿಸಿ ಹಾಗೂ ಗೋವನ್ನು ‘ರಾಷ್ಟ್ರ ಮಾತೆ’ ಎಂದು ಘೋಷಿಸುವಂತೆ ಸ್ವಾಮಿ ಅವಿಮುಕೇಶ್ವರಾನಂದ ಸರಸ್ವತಿ ಸವಾಲು
ವಾರಾಣಸಿ: ರಾಜ್ಯದಿಂದ ಗೋಮಾಂಸ ರಫ್ತನ್ನು ತಕ್ಷಣ ನಿಲ್ಲಿಸಿ ಹಾಗೂ ಗೋವನ್ನು ‘ರಾಷ್ಟ್ರ ಮಾತೆ’ ಎಂದು ಘೋಷಿಸುವ ಮೂಲಕ ಹಿಂದೂ ಧರ್ಮದ ಕುರಿತ ತಮ್ಮ ಬದ್ಧತೆಯನ್ನು ಸಾಬೀತುಪಡಿಸಬೇಕು ಎಂದು ಸ್ವಾಮಿ ಅವಿಮುಕೇಶ್ವರಾನಂದ ಸರಸ್ವತಿ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಸವಾಲು ಹಾಕಿದ್ದಾರೆ. ಪ್ರಯಾಗರಾಜ್ನ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನಕ್ಕೆ ಅವಕಾಶ ನೀಡದ ಆಡಳಿತದ ಕ್ರಮವನ್ನು ಖಂಡಿಸಿ, ಶಂಕರಾಚಾರ್ಯ ಕ್ಯಾಂಪ್ನಲ್ಲಿ ಜನವರಿ 18ರಿಂದ ಸ್ವಾಮಿ ಅವಿಮುಕೇಶ್ವರಾನಂದ ಸರಸ್ವತಿ ಅವರು ಸತ್ಯಾಗ್ರಹ ನಡೆಸುತ್ತಿದ್ದರು. ಬುಧವಾರ ತಮ್ಮ ಸತ್ಯಾಗ್ರಹವನ್ನು ಅಂತ್ಯಗೊಳಿಸಿ ಭಾರವಾದ ಹೃದಯದಿಂದ ಅಲ್ಲಿಂದ ತೆರಳಿದ್ದಾರೆ ಎಂದು ತಿಳಿಸಿದ್ದಾರೆ. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಾನು 11 ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರೂ ಯಾವುದೇ ಅಧಿಕಾರಿಗಳು ಪುಣ್ಯಸ್ನಾನಕ್ಕೆ ಅವಕಾಶ ನೀಡಲಿಲ್ಲ. ಈಗ ಎಲ್ಲವೂ ತಡವಾಗಿದೆ. ಮುಂದಿನ ವರ್ಷ ಮಾಘ ಮೇಳದ ಸಂದರ್ಭದಲ್ಲಿ ಪವಿತ್ರ ಸ್ನಾನ ಮಾಡುತ್ತೇನೆ” ಎಂದು ಹೇಳಿದರು. ಇದೇ ವೇಳೆ, “ಹಿಂದೂ ಧರ್ಮದ ಮೇಲಿನ ನಿಮ್ಮ ನಿಜವಾದ ಬದ್ಧತೆಯನ್ನು ತೋರಿಸಲು 40 ದಿನಗಳೊಳಗಾಗಿ ಗೋಹತ್ಯೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಆಗ ಮಾತ್ರ ನೀವು ನಿಜವಾದ ಹಿಂದೂ ಅನುಯಾಯಿ ಎಂದು ಒಪ್ಪಿಕೊಳ್ಳುತ್ತೇವೆ” ಎಂದು ಸ್ವಾಮಿ ಅವಿಮುಕೇಶ್ವರಾನಂದ ಸರಸ್ವತಿ ಅವರು ಹೇಳಿದ್ದಾರೆ.