







ಗೋಪೂಜೆ ಹಾಗೂ ಸಾಮೂಹಿಕ ವಾಹನ ಪೂಜೆ

ಕಾಂತಾವರ : ಯುವಸಂಗಮ ಕಾಂತಾವರ (ರಿ.)ವತಿಯಿಂದ 6ನೇ ವರ್ಷದ ಗೋಪೂಜೆ ಹಾಗೂ ಸಾಮೂಹಿಕ ವಾಹನ ಪೂಜೆಯು ನ.2ರಂದು ಬಾಲಕೃಷ್ಣ ಭಟ್ ಜಾಕಿಬೆಟ್ಟು ಇವರ ಪೌರೋಹಿತ್ಯದಲ್ಲಿ ಮಿತ್ತಲಚ್ಚಿಲು ವಠಾರದಲ್ಲಿ ಜರಗಿತು.

ಇದೇ ಸಂದರ್ಭದಲ್ಲಿ ಊರ ನಾಗರಿಕರು ಹಾಗೂ ಯುವಸಂಗಮ ಕಾಂತಾವರದ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.










































