ಗೋಚಾರ ರೀತ್ಯಾ ದ್ವಾದಶ ರಾಶಿಯವರಿಗೆ ಕುಜ ಕರುಣಿಸುವ ಫಲಗಳು

Picture of RB NEWS

RB NEWS

Bureau Report


ಪಂಚ ತಾರಾ ಗ್ರಹಗಳಲ್ಲಿ [ಕುಜ,ಬುಧ,ಗುರು,ಶುಕ್ರ,ಶನಿ ]ಒಬ್ಬನಾದ ಈತನು ವೇದಗಳಲ್ಲಿ ಪುರಾಣಗಳಲ್ಲಿ ಭೂಮಿ-ಪುತ್ರನೆಂದೂ ವರ್ಣಿತನಾಗಿದ್ದಾನೆ . “ಸತ್ವಮ್ ಕುಜ:” ಅಂದರೆ ಕುಜಾನು ಸತ್ವ ಕಾರಕನು .ಆತ್ಮ ಕಾರಕ ರವಿ,ಮನೋ ಕಾರಕ ಚಂದ್ರ ,ಶಕ್ತಿಕಾರಕ ಕುಜನಾಗಿದ್ದಾನೆ . ನಮ್ಮ ದೈಹಿಕ ಶಕ್ತಿಯನ್ನು ಸೂಚಿಸುವವನೇ ಕುಜ .ಇಂದ್ರಿಯ ಕಾರಕನೀತ .
ಮೇಷ-ವೃಶ್ಚಿಕಗಳು ಈತನ ಸ್ವಕ್ಷೇತ್ರಗಳು.ಕುಜನಿಗೆ ಮಕರ ರಾಶಿಯಲ್ಲಿ ಉಚ್ಚನಾಗಿರುದ್ದಾನೆ . ಕರ್ಕಾಟಕದಲ್ಲಿ ನೀಚನಾಗಿರುತ್ತಾನೆ .ರವಿ,ಚಂದ್ರ ,ಗುರುಗಳು ಈತನ ಮಿತ್ರರು ,ಬುಧನು ಶತ್ರುವು ,ಶುಕ್ರ,,ಶನಿ ಸಮಾನರು . ದಶಮದಲ್ಲಿ ಈತನಿಗೆ ದಿಗ್ಬಲವಿದೆ . ದಶಮದಲ್ಲಿ ಈತನಿದ್ದಾಗ ಕುಲ ದೀಪಕ ಯೋಗವೆಂದು ವರ್ಣಿಸಲಾಗಿದೆ. ಕೇಂದ್ರ ಕೋಣದಲ್ಲಿ [1,4,7,10,5,9] ಸ್ವಕ್ಷೇತ್ರನೋ ,ಮೂಲ ತ್ರಿಕೋಣಸ್ಟನೋ ಉಚ್ಚನೋ ಆದರೆ ‘ರುಚಕ’ಎನ್ನುವ ಯೋಗವಾಗುವುದು .ಕುಜ-ಚಂದ್ರರಿಂದ’ ಶಶಿಮಂಗಳಯೋಗ ‘ ಕುಜ ಶುಕ್ರರಿಂದ ಭೃಗ್ವಂಗಾರಕ ಯೋಗ [ಜಾರ ಯೋಗ ]ಶನಿಯಿಂದ ಕೂಡಿದಾಗ ‘ಮಂದಾರ ‘ಯೋಗ ಎಂದು ಕರೆಯಲ್ಪಡುವ ಯೋಗಗಳಾಗುವುವು.
ಮಂಗಳವಾರಕ್ಕೆ ಈತನು ಅಧಿಪತಿ .ಸ್ತ್ರೀಯರ ಋತು ಕಾಲಕ್ಕೆ ಚಂದ್ರನೊಂದಿಗೆ ಈತನೂ ಕಾರಕನು .ಗರ್ಭಧಾರಣಾ ಶಕ್ತಿಯು ಈತನಿಂದಲೇ ನಿರ್ಣಯಿಸಲ್ಪಡುತ್ತದೆ . ಈತನು ತಾನೀರುವ ಸ್ಥಾನದಿಂದ 4, 7, 8 ನೇ ಮನೆಯನ್ನು ಪೂರ್ಣ ದೃಷ್ಟಿಯಿಂದ ನೋಡುವನು. ವಧೂ-ವರರ ಸಂಘಟಣೆ ಮಾಡುವಾಗ ಜಾತಕದಿಂದ 1, 2, 12, 4, 7, 8, ಸ್ಥಾನದಲ್ಲಿರಲು ಕುಜ ದೋಷವನ್ನು ಉಂಟು ಮಾಡುವನು .ಲಗ್ನ ,ಚಂದ್ರ, ಅಥವಾ ಶುಕ್ರನಿಂದ ಸಪ್ತಮಾಷ್ಟಮದಲ್ಲಿರಲು ವೈಧವ್ಯ ಯಾ ವಿಧುರಯೋಗ ಉಂಟಾಗುವುದು .
ಈತನು ಅನಿಷ್ಟ ಸ್ಥಾನದಲ್ಲಿರುವಾಗ ಹೆಚ್ಚು ಬಾಯಾರಿಕೆ, ಬಹು ಭೋಜನ ,ಪಿತ್ತಕ್ಕೆ ಸಂಬಂಧಿಸಿದ ಶರೀರ ಪೀಡೆ ,ಹಳದಿ ರೋಗ ಮೂಳೆ ಮುರಿತ,ಅಪಘಾತ,ಪತನ,ಕಲಹ,ಕಣ್ಣಿಗೆಸಂಬಂಧಿಸಿದ ರೋಗ, ರಕ್ತ ಹೀನತೆ ಹೊಟ್ಟೆ ಉಬ್ಬರ ಸುಟ್ಟ ಗಾಯಗಳು ಆತ್ಮ ಹತ್ಯೆ ,ಸಹೋದರ ವೈಮನಸ್ಸಿಗೆ ಕಾರಣನಾಗುತ್ತಾನೆ .ವಿಪರೀತ ಕೋಪ ಈತನ ಪ್ರಧಾನ ಗುಣ. .ಅರಿಷ್ಟ ಪರಿಹಾರಕ್ಕೆ ತೊಗರಿದಾನ ಕೆಂಪು ವಸ್ತ್ರ ದಾನ ,10,000 ಕುಜ ಮಂತ್ರ ಜಪ ,ಬೆಲ್ಲ ದಾನ ,ನಾಗ ದೇವರಿಗೆ ಪಂಚಾಮೃತ ,ಪವಮಾನ ಕಲಶಾಭಿಷೇಕ 12 ದಿವಸ ಕುಜ ಮಂತ್ರ ಜಪ ,ನಾಗ ಪ್ರತಿಷ್ಠೆ ,ಸರ್ಪ ಸಂಸ್ಕಾರ ,ಆಶ್ಲೇಷಾ ಬಲಿದಾನ , ಮೃತ್ಯುಂಜಯ ಜಪ ,ಹೋಮ ., ಮೃತ ಸಂಜೀವಿನಿ ಹೋಮ , ಚಂಡಿಕಾ ಹೋಮ ,ದುರ್ಗಾ ಆರಾಧನೆ ಯಥಾ ಶಕ್ತಿಯಾಗಿ ಮಾಡಿಕೊಂಡು ಬರುವುದು.
ಪ್ರಸ್ತುತ ಕುಜನು ಮಕರ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದಾನೆ . ಈತನು ಒಂದು ರಾಶಿಯಲ್ಲಿ ಒಂದೂವರೆ ತಿಂಗಳು ಇರುತ್ತಾನೆ . ಮಾರ್ಚ್ 2024, 15 ರಂದು ಕುಂಭ ರಾಶಿಗೆ ಪ್ರವೇಶ ಮಾಡಲಿದ್ದಾನೆ.


ಮೇಷ : ಪ್ರಸ್ತುತ ನಿಮಗೆ ಕುಜನು ದಶಮದಲ್ಲಿ ಸಂಚಾರ ಮಾಡುತ್ತಿದ್ದಾನೆ [1, 8]ನಿಮಗೆ ಕುಜನು ಉತ್ತಮ ಫಲವನ್ನು ಉಂಟು ಮಾಡುವನು .ಉತ್ತಮ ನಿರ್ಧಾರಗಳನ್ನು ನೀವು ಕೈಗೊಳ್ಳುವಿರಿ . ಈ ಸಮಯದಲ್ಲಿ ನೀವು ಇತರರಿಂದ ಆದರಣೆ ಗೌರವ ,ಮಾನ್ಯತೆ,ಪ್ರೋತ್ಸಾಹಗಳು ಲಭಿಸುವುದು .ಆರೋಗ್ಯದ ಸಮಸ್ಯೆಗಳು ಬಂದರೂ ಅದನ್ನು ಗಣನೆಗೆ ತೆಗೆದುಕೊಳ್ಳದೆ ಮುಂದುವರಿಯುವಿರಿ .


ವೃಷಭ : ಪ್ರಸ್ತುತ ನಿಮಗೆ ಭಾಗ್ಯದಲ್ಲಿ ಕುಜನು ಸಂಚಾರ ಮಾಡುತ್ತಿದ್ದಾನೆ . [12, 7]ನವಮ ರಾಶಿಯಲ್ಲಿ ಗುಣ ದೋಷಗಳಿಂದ ಕೂಡಿದ ಮಿಶ್ರ ಫಲವು ಉಂಟಾಗುವುದು. ಸಮಾಜೋಕವಾಗಿ ಉತ್ತಮ ಸ್ಥಾನಗಳು ಲಭಿಸುವುದಾದರೂ ಕೆಲವೊಂದು ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುವುದು . ದಾಂಪತ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿಮ್ಮಲ್ಲಿರುತ್ತವೆ .ಜವಾಬ್ದಾರಿಯನ್ನು ಹೊಂದಿರುವ ಕೆಲಸಗಳನ್ನು ಮಾಡಬೇಕಾಗಿ ಬರುತ್ತದೆ . ಹಣದ ಮುಗ್ಗಟ್ಟು ಇರುತ್ತದೆ .


ಮಿಥುನ : ನಿಮಗೆ ಪ್ರಸ್ತುತ ಕುಜನು ಅಷ್ಟಮದಲ್ಲಿ ಸಂಚಾರ ಮಾಡುತ್ತಿದ್ದಾನೆ [11,6]ಈ ಸಮಯದಲ್ಲಿ ಮನಸ್ಸಿಗೆ ನೆಮ್ಮದೇ ಕಡಿಮೆಯಾಗಿ ಕಾಣುವುದು.,ಎಲ್ಲಾ ರೀತಿಯಲ್ಲಿ ನೀವು ಮಾಡುತ್ತಿರುವ ಉದ್ಯೋಗ ,ವ್ಯವಹಾರಗಳಲ್ಲಿ ತಡೆಗಳು ಉಂಟಾಗುವಂತೆ ಭಾಸವಾಗಲಿದೆ .ಅಂಗಾಂಗಗಳಲ್ಲಿ ವೃಣ ಹಾಗೂ ಗಾಯಗಳು ಉಂಗುವ ಸಾಧ್ಯತೆ ಅನಾರೋಗ್ಯ ಪಿತ್ತಾಧಿಕ್ಯ ಉಂಟಾಗುವುದರಿಂದ ಈ ಕಾಲದಲ್ಲಿ ಜಾಗ್ರತೆ ವಹಿಸಬೇಕಾಗಿದೆ .


ಕರ್ಕಾಟಕ : ಪ್ರಸ್ತುತ ನಿಮಗೆ ಕುಜ ಸಪ್ತಮದಲ್ಲಿ ಅಂದರೆ ಮಕರ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದಾನೆ [5, 10] ಈ ಕಾಲದಲ್ಲಿ ಪ್ರಧಾನವಾಗಿ ದಾಂಪತ್ಯದಲ್ಲಿ ಸಂಗಾತಿಯೊಂದಿಗೆ ಅತೃಪ್ತಿ ವಿರಸ ಬರುವ ಸಮಯವಾಗಿದೆ .ದೇಹಾರೋಗ್ಯದ ಬಗ್ಗೆ ಅದರಲ್ಲಿಯೂ ಹೊಟ್ಟೆಗೆ ಸಂಬಂಧಿಸಿದ ,ಕಣ್ಣಿಗೆ ಸಂಬಂಧಿಸಿದ ಪಿತ್ತಕ್ಕೆ ಸಂಬಂಧಿಸಿದ ವಿಷಯದಲ್ಲಿ ಎಚ್ಚರ ಬೇಕು . ಉದ್ಯೋಗ ,ವ್ಯವಹಾರ,ಮಕ್ಕಳ ವಿಷಯದಲ್ಲಿ ಎಚ್ಚರವಿರಬೇಕು .


ಸಿಂಹ: ಪ್ರಸ್ತುತ ಕುಜನು ನಿಮಗೆ ಆರನೆಯ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದಾನೆ . [4, 9] ಮೇಷ ,ವೃಶ್ಚಿಕಗಳು ಭಾಧಾ ಸ್ಥಾನಗಳು . ಪಾಪ ಗ್ರಹರು ಆರನೆಯ ರಾಶಿಯಲ್ಲಿ ಸಂಚಾರ ಮಾಡುವಾಗ ಅನುಕೂಲ ಫಲಗಳನ್ನೇ ಉಂಟು ಮಾಡುವರು . ದೇಹಾರೋಗ್ಯದಲ್ಲಿ ಸುಧಾರಣೆಯಾಗುವುದು .ಹಲವಾರು ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ದುರ್ಗೆಯ ಆರಾಧನೆಯನ್ನು ,ನಾಗ ದೇವರ ಆರಾಧನೆಯನ್ನು ಮಾಡಿಕೊಂಡು ಬಂದಾಗ ಜೀವನವಿಡೀ ಸುಖವನ್ನು ಅನುಭವಿಸುವಿರಿ . ವಿವಾದ ರಹಿತ ಜೀವನ ನಿಮ್ಮದಾಗಲಿದೆ .


ಕನ್ಯಾ : ಪ್ರಸ್ತುತ ಕುಜನು ನಿಮಗೆ ಪಂಚಮದಲ್ಲಿ ಸಂಚಾರ ಮಾಡುತ್ತಿದ್ದಾನೆ. [3, 8] ಕಿಂಚಿತ್ ಅನಾರೋಗ್ಯವಿದ್ದರೂ ಶಾರೀರಿಕ ಚಟುವಟಿಕೆ ಉತ್ತಮವಾಗಿರುತ್ತದೆ .ಮಕ್ಕಳ ವಿಚಾರವಾಗಿ ಮನಸ್ಸಿಗೆ ನೆಮ್ಮದಿ ಕಡಿಮೆಯಾಗುವುದು ,ಸಹೋದರವರ್ಗದವರಲ್ಲಿ ಕಲಹ ಮನಸ್ತಾಪ ಅನಾರೋಗ್ಯ ಇರುವ ಸಾಧ್ಯತೆ ಇರುತ್ತದೆ .ಭೂಮಿಯಿಂದ ನೆಮ್ಮದಿ ಇರುವುದಿಲ್ಲ .


ತುಲಾ : ಪ್ರಸ್ತುತ ಕುಜನು ನಾಲ್ಕನೆಯ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದಾನೆ. ಕುಜನು ಕಲಹಕಾರಕಾನೂ ಆಗಿರುವುದರಿಂದ ಮನಸ್ತಾಪಗಳನ್ನುಉಂಟು ಮಾಡುವ ಸಾಧ್ಯತೆ ಇದೆ [2, 7 ] ಸತಿ ಪತಿ ಹೊಂದಿಕೊಂಡು ಮುಂದುವರಿಯಬೇಕು . ಸಂಯಮ ಇರಬೇಕು . ಮಾತು ಹಿಡಿತದಲ್ಲಿರಬೇಕು .ಜ್ವರ ಉಷ್ಣ ದೋಷಗಳು ಕಾಣಲಿವೆ. ವಾಹನ ಭೂಮಿ ,ಮನೆಯ ವಿಷಯದಲ್ಲಿ ಯಾವುದೇ ಕೆಲಸ ಮಾಡುವುದಿದ್ದರೂ ಈ ಸಮಯ ಬೇಡ

.
ವೃಶ್ಚಿಕ : ಪ್ರಸ್ತುತ ಕುಜನು ನಿಮಗೆ ಮೂರನೆಯ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದಾನೆ ,ನೀವು ಉತ್ತಮ ಫಲವನ್ನೇ ಪಡೆಯುವಿರಿ .[1, 6 ] ಈ ಕಾಲದಲ್ಲಿ ನಿಮ್ಮ ವ್ಯವಹಾರಗಳು ಉತ್ತಮಗೊಳ್ಳುವುವು .ಇತರರಿಂದ ಸಹಕಾರವನ್ನು ಪಡೆಯುವಿರಿ .ಆರೋಗ್ಯದಲ್ಲಿ ವೃದ್ಧಿ ಉಂಟಾಗುವುದು .ಧನ ಲಾಭವನ್ನು ಹೊಂದುವಿರಿ .


ಧನು :ಕುಜನು ದ್ವಿತೀಯಾದಲ್ಲಿ ಸಂಚಾರ ಮಾಡುತ್ತಿರುವ ಈ ಸಮಯದಲ್ಲಿ ಆನಾರೋಗ್ಯ ಕಂಡು ಬರಲಿದೆ .[12, 5 ] ಸಣ್ಣ ಪುಟ್ಟ ವಿವಾದಗಳು ಮಕ್ಕಳಲ್ಲಿ ,ನೆರೆಕರೆಯವರಲ್ಲಿ ಎದುರಾಗಬಹುದು . ನಿಮ್ಮ ಸಿಟ್ಟಿನಿಂದ ಕೂಡಿದ ಮಾತುಗಳನ್ನು ಮನೆಯವರು ಅರಗಿಸಿಕೊಳ್ಳಲು ಕಷ್ಟವಾಗಬಹುದು . ಮಕ್ಕಳ ವಿದ್ಯಾಭ್ಯಾಸಕ್ಕೆ ಖರ್ಚು ಬರುವ ಸಾಧ್ಯತೆ ಇದೆ ನಾಗ ದೇವರ ಪ್ರಾರ್ಥನೆ ಸದಾ ಜೀವನದಲ್ಲಿ ನಿಮಗೆ ಅಗತ್ಯವಿದೆ.


ಮಕರ :ಕುಜ ಪ್ರಸ್ತುತ ನಿಮ್ಮ ಜನ್ಮ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದಾನೆ [4,11] ನಿಮಗೆ ಭಾಧಕ ರಾಶಿಗಳು ವೃಶ್ಚಿಕ ಮತ್ತು ಕುಂಭ ಆಗಿರುತ್ತದೆ ಬೆಂಕಿ ಲೋಹಾದಿ ಆಯುಧಗಳಲ್ಲಿ ಹಾಗೂ ವಾಹನಗಳಲ್ಲಿ ಸಂಚಾರ ಸಮಯದಲ್ಲಿ ಜಾಗ್ರತೆ ಬೇಕು ನೀವು ಮಾಡುವ ಕೆಲಸಗಳಲ್ಲಿ ,ಉದ್ಯೋಗದಲ್ಲಿ .ವ್ಯವಹಾರದಲ್ಲಿ ವ್ಯರ್ಥ ಖರ್ಚುಗಳು ,ವಿವಾದಗಳು ನಿಧಾನಗತಿಯೂ ಸೋಲು ಉಂಟಾಗಬಹುದು.


ಕುಂಭ : ನಿಮಗೆ ಪ್ರಸ್ತುತ ಕುಜನು 12 ನೇ ರಾಶಿಯಲ್ಲಿ ಅಂದರೆ ಮಕರದಲ್ಲಿ ಸಂಚಾರ ಮಾಡುತ್ತಿದ್ದಾನೆ.[3, 10] ನಿಮಗೆ ತುಲಾ ,ಕರ್ಕಾಟಕ ಭಾಧಕ ರಾಶಿಗಳು ದೇವಿಯ ಆರಾಧನೆ ನಿಮ್ಮ ಜೀವನದಲ್ಲಿ ಅವಶ್ಯಕವಾಗಿದೆ. ಧನದ ಅಪವ್ಯಯ ಉಂಟಾಗುವುದರಿಂದ ಆರ್ಥಿಕವಾಗಿ ಎಚ್ಚರ ವಹಿಸಬೇಕು.ವಾಹನಾಡಿಗಳಲ್ಲಿ ಲೋಹ ಆಯುಧ ಬಿಸಿ ಪದಾರ್ಥಗಳಲ್ಲಿ ಎಚ್ಚರವಹಿಸಬೇಕು.ಆಹಾರವು ರುಚಿಸದೆ ಇರಬಹುದು .ಭೂಮಿ ಸಂಬಂಧವಾದ ಇತರ ನೂತನ ಕಾರ್ಯಕ್ರಮಗಳಿಗೆ ಈ ಕಾಲ ಪ್ರಶಸ್ತವಾಗಿಲ್ಲದಿರುವುದರಿಂದ ಹೆಚ್ಚು ಜಾಗ್ರತೆ ವಹಿಸಿರಿ.

ಮೀನ : ಕುಜನು ಪ್ರಸ್ತುತ ಏಕಾದಶದಲ್ಲಿ ಸಂಚಾರ ಮಾಡುತ್ತಿದ್ದಾನೆ .ಈಗ ಮನಸ್ಸಿನಲ್ಲಿರುವ ಎಲ್ಲ ವ್ಯವಹಾರಗಳು ಸರಾಗವಾಗಿ ನಡೆಯುವುದಲ್ಲದೆ ಇತರರಿಂದಲೂ ಅನುಕೂಲಗಳು ಉಂಟಾಗುವುದು .ಭೂ ಸಂಬಂಧವಾದ ವ್ಯವಹಾರಗಳು ಸುಲಭವಾಗಿ ನಡೆಯಬಹುದು.ಉತ್ತಮ ಗೌರವ ಹಾಗೂ ಆದರಗಳಿಗೆ ಈ ಕಾಲದಲ್ಲಿ ನೀವು ಭಾಗಿಯಾಗುವಿರಿ [2,9] ನಿಮಗೆ ಕನ್ಯಾ ಮತ್ತು ಧನು ರಾಶಿಗಳು ಭಾಧಕ ರಾಶಿಗಳಾಗಿವೆ ಹಿರಿಯರ ಜೊತೆಗೆ ಭೂಮಿ ಸಂಬಂಧವಾಗಿ ಕಲಹ ಬರದಂತೆ ಸದಾ ಎಚ್ಚರದಿಂದಿರಬೇಕು .

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top