
ಗೊಮ್ಮಟೇಶ್ವರ ಬೆಟ್ಟದ ಮುಂಭಾಗದಲ್ಲಿ ಚೆಲ್ಲಿದ ತ್ಯಾಜ್ಯ
ಕಾರ್ಕಳ: ಐತಿಹಾಸಿಕ, ಧಾರ್ಮಿಕ ನೆಲೆಬೀಡು ಕಾರ್ಕಳ ಗೊಮ್ಮಟೇಶ್ವರ ಬೆಟ್ಟವಾಗಿದೆ. ಈ ಬೆಟ್ಟಕ್ಕೆ ಏರುವಂತಹ ಮೆಟ್ಟಲಿನ ಹಾಸುಪಾಸುಗಳಲ್ಲಿ ಸ್ವಚ್ಚತೆ ಪರಿಪಾಲನೆಯಾಗುತ್ತಿಲ್ಲ ಎಂಬ ದೂರು ಕೇಳಿಬರುತ್ತಿವೆ.

ದೇಶ ವಿದೇಶಗಳಿಂದ ಪ್ರತಿದಿನ ಅಸಂಖ್ಯಾತ ಭಕ್ತಾದಿಗಳು, ಪ್ರವಾಸಿಗರು ಕಾರ್ಕಳ ಗೊಮ್ಮಟೇಶ್ವರ ಬೆಟ್ಟಕ್ಕೆ ಭೇಟಿ ನೀಡುತ್ತಿರುತ್ತಾರೆ.
ಧರ್ಮ ಪರಿಪಾಲನೆಯಲ್ಲಿ ಇರುವ ಅದೆಷ್ಟೋ ಶ್ರಾವಕ, ಶ್ರಾವಕಿಯರು ಸ್ವಚ್ಚತೆಗೆ ಒತ್ತು ನೀಡಿ ಪಾವನ ಬೆಟ್ಟವಾಗಿರುವ ಗೊಮ್ಮಟೇಶ್ವರ ಬೆಟ್ಟಕ್ಕೆ ಅಗಮಿಸಿ ಭಗವಾನ್ ಬಾಹುಬಲಿಯ ದಿವ್ಯ ದರ್ಶನ ಪಡೆದು ಪುನೀತರಾಗುತ್ತಾರೆ.
ಆದರೆ ಇದೇ ಗೋಮ್ಮಟೇಶ್ಬರ ಬೆಟ್ಟದ ಮುಂಭಾಗಕ್ಕೆ ಮಾತ್ರ ಸಿಕ್ಕಲ್ಲಿ ತ್ಯಾಜ್ಯ ರಾಶಿಗಳೇ ಚೆಲ್ಲಪಿಲ್ಲಿ ಚೆಲ್ಲಿಕೊಂಡಿರುವುದು ವಿಪರ್ಯಾಸ.
ವ್ಯಾಪಾರ ಮಳಿಗೆಗಳಿಂದ ಹಾಗೂ ಮನೆಗಳಿಂದ ಪ್ರತಿದಿನ ಉತ್ಪಾದನೆಯಾಗುವ ತ್ಯಾಜ್ಯಗಳನ್ನು ಗೋಮ್ಮಟ್ಟ ಬೆಟ್ಟದ ಪರಿಸರದಲ್ಲಿ ತಂದು ಹಾಕಲಾಗುತ್ತಾರೆ. ಅದು ಸಮರ್ಪಕವಾಗಿ ವಿಲೇವಾರಿಯಾಗದೇ ಈ ಎಲ್ಲಾ ಸಮಸ್ಸೆಗೆ ಕಾರಣವಾಗಿದೆ.

ಬೀಡಾಡಿ ನಾಯಿಗಳು ಆಹಾರ ಹುಡುಕುತ್ತಾ, ತ್ಯಾಜ್ಯ ಶೇಖರಿಸಿಟ್ಟ ಪ್ಲಾಸ್ಟಿಕ್ ತೊಟ್ಟೆಗಳನ್ನು ಎಳೆದಾಡುತ್ತಿರುವುದು ಸರ್ವೇ ಸಾಮಾನ್ಯ. ಪರಿಣಾಮವಾಗಿ ವಾಹನಗಳ ಚಕ್ರಕ್ಕೆ ಸಿಲುಕಿ, ಗಾಳಿಯ ವೇಗಕ್ಕೆ ಸಿಕ್ಕು, ಚೆಲ್ಲಾಪಿಲ್ಲಿಯಾಗಿ ಬಿದ್ದುಕೊಂಡಿವೆ.
ಸ್ವಚ್ಚತೆಗೆ ಒತ್ತು ನೀಡಿ ಮನವಿ…

ತ್ಯಾಜ್ಯ ಸಂಗ್ರಹ ( ಡಸ್ಟಬಿನ್ ) ಇಲ್ಲದೆ , ಎಲ್ಲೆಂದರಲ್ಲಿ ಕಸಗಳನ್ನು ಹಾಕ್ಕಿದು ಕಂಡು ಬಂದಿದೆ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕಾರ್ಕಳ ಜೈನ್ ಬ್ರಿಗೇಡ್ ಮತ್ತು ದಾನಶಾಲೆ ಫುಟ್ ಬಾಲ್ ಕ್ಲಬ್ ನ ವತಿಯಿಂದ ಪುರಸಭೆಯ ಮುಖ್ಯಾಧಿಕಾರಿ ರೂಪಾ ಶೆಟ್ಟಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಸಮೀರ್ ಜೈನ್, ಸುಕೇಶ್ ಜೆ.ಎಲ್, ಸಕೇತ್ ಬಳ್ಳಾಲ್, ತೇಜಸ್ ಜೈನ್ ಮನವಿ ಪತ್ರ ನೀಡಿದವರಲ್ಲಿ ಪ್ರಮುಖರಾಗಿದ್ದರು.

































