ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ನೀಚ ರಾಜಕಾರಣದ ಪರಮಾವಧಿ -ಉದಯ ಶೆಟ್ಟಿ ಮುನಿಯಾಲು
ಕಾರ್ಕಳ : ಕುಕ್ಕುಂದೂರು ಅಂಗನವಾಡಿ ಕಾರ್ಯಕರ್ತೆಯನ್ನು ಶಾಸಕರು ಅಮಾನತು ಮಾಡಿಸುವ ಮೂಲಕ ಬಡ ಕಾರ್ಯಕರ್ತೆಯ ಹೊಟ್ಟೆಗೆ ಹೊಡೆದು ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಹೊಡೆದಿರುವುದು ನೀಚ ರಾಜಕಾರಣದ ಪರಮಾವಧಿ ಎಂದು ಕಾಂಗ್ರೆಸ್ ಮುಖಂಡ ಮುನಿಯಾಲು ಉದಯಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಅಂಗನವಾಡಿ ಕಾರ್ಯಕರ್ತೆಯರು ಪುಟ್ಟ ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿಯನ್ನು ನೀಡುವವರು. ತಮಗೆ ಬರುವ ಸ್ವಲ್ಪ ಸಂಬಳದಲ್ಲಿ ಸರಕಾರಿ ಕೆಲಸವನ್ನು ದೇವರ ಕೆಲಸ ಎಂದು ಮಾಡುವವರು.
ಆದರೆ ಕುಕ್ಕುಂದೂರು ಅಂಗನವಾಡಿ ಕೇಂದ್ರದಲ್ಲಿ ಪೂಜೆ ಮಾಡಿಸಿದ್ದಾರೆ ಎಂಬ ಕಾರಣಕ್ಕೆ ಆ ಮಹಿಳೆಯನ್ನು ಇಲಾಖೆ ಅಮಾನತು ಮಾಡಿರುವ ಕಾರ್ಯ ಎಷ್ಟು ಸರಿ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ದಿನ ನಿಗದಿ ಮಾಡಿ ಅಂಗನವಾಡಿ ಕಟ್ಟಡ ಉದ್ಘಾಟನೆ ಮಾಡಬೇಕು. ಅದಕ್ಕೆ ದಿನ ನಿಗದಿ ಮಾಡಿ ಉದ್ಘಾಟನೆ ಮಾಡಲಿ.
ಅದರ ಬದಲಾಗಿ ಸಂಸ್ಕೃತಿ ಸಂಸ್ಕಾರ ಉಳಿಸುವ ಧರ್ಮ ಕಾರ್ಯದ ಪೂಜೆ ಮಾಡಿದ್ದಕ್ಕಾಗಿ ಶಾಸಕರು ಅಮಾನತು ಆದೇಶ ಮಾಡಿರುವುದು ಬಡ ವರ್ಗದ ಮೇಲಿನ ದಬ್ಬಾಳಿಕೆ.
ಪರಶುರಾಮರ ಮೂರ್ತಿಯನ್ನೇ ನಕಲಿ ಮೂರ್ತಿ ಮಾಡಿ ಧರ್ಮ ನಿಂದನೆ ಮಾಡಿದ ಶಾಪ ಹೊತ್ತು ಕೊಂಡಿರುವ ಶಾಸಕರು ಈಗ ಬಡ ಮಹಿಳೆಯ ಹೊಟ್ಟೆಗೆ ಹೊಡೆದು ಇನ್ನೊಂದು ಶಾಪಕ್ಕೆ ತುತ್ತಾಗಿರುವುದು ಅವರ ಅಹಂಕಾರ ದ ಪರಮಾವಾಧೀಗೆ ಉದಾಹರಣೆ.
ನೀವು ಪ್ರಬಲ ವರ್ಗದವರಿಗೆ ನಿಮ್ಮ ಬ್ರಹ್ಮಾಸ್ತ್ರ ಉಪಯೋಗ ಮಾಡಿ. ಅದು ಮಾಡೋಲ್ಲ. ಅದರ ಬದಲಾಗಿ ಇಂತಹ ನೀಚ ಕೃತ್ಯಕ್ಕೆ ಇಳಿದರೆ ಕಾಂಗ್ರೆಸ್ ಪಕ್ಷ ಈ ಬಗ್ಗೆ ಹೋರಾಟಕ್ಕೆ ಇಳಿಯಬೇಕಾದೀತು ಎಂಬ ಎಚ್ಚರಿಕೆ ಯನ್ನು ಉದಯ ಶೆಟ್ಟಿ ಮುನಿಯಾಲು ನೀಡಿದ್ದಾರೆ.































