ಶಿರ್ತಾಡಿ (ಮೂಡುಬಿದಿರೆ) : ಶಿರ್ತಾಡಿಯ ಮೌಂಟ್ ಕಾರ್ಮೆಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಡಿಸೆಂಬರ್ 13 ರಂದು ಶಾಲಾ ವಾರ್ಷಿಕೋತ್ಸವವು ಜರುಗಿತು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಮಂಗಳೂರು ಕ್ಯಾಥೋಲಿಕ್ ಬೋರ್ಡ್ ಆಫ್ ಎಜುಕೇಷನ್ ನ ಕಾರ್ಯದರ್ಶಿ ವಂದನೀಯ ಸ್ವಾಮಿ ಡಾ. ಪ್ರವೀಣ್ ಲಿಯೋ ಲಸ್ರಾದೋ ವಹಿಸಿ, ಕಾರ್ಯಕ್ರಮವನ್ನು ಉದ್ದೇಶಿಸಿ ನಮ್ಮ ಶಿಕ್ಷಣ ವ್ಯವಸ್ಥೆಯು ಆರ್ಥಿಕ ದೃಷ್ಟಿ ಕೋನವನ್ನು ಬದಿಗಿಟ್ಟು ಗುಣಮಟ್ಟದಾರಿತ ಶಿಕ್ಷಣವನ್ನು ನೀಡುವಲ್ಲಿ ಪ್ರಮುಖ ಆದ್ಯತೆಯನ್ನು ನೀಡುತ್ತದೆ ಎಂದು ತಿಳಿಸಿದರು.
ಶಾಲಾ ಜೊತೆ ಕಾರ್ಯದರ್ಶಿ ವಂದನೀಯ ಸ್ವಾಮಿ ಹೆರಾಲ್ಡ್ ಮಸ್ಕರೇನಸ್ ಮತ್ತು ಅಭ್ಯಾಗತರಾಗಿ ರಾಜೇಶ್ ಭಟ್ ಕ್ಷೇತ್ರ ಶಿಕ್ಷಣ ಸಂಯೋಜಕರು, ನವೀನ್ ಆರ್. ಪುತ್ರನ್ ದೈಹಿಕ ಶಿಕ್ಷಣ ಪರಿವೀಕ್ಷಣ್ ಅಧಿಕಾರಿ ಮೂಡಬಿದ್ರೆ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಸತೀಶ್ ಕೆ. ಬಂಗೇರ, ಶಾಲಾ ಮುಖ್ಯೋಪಾಧ್ಯಾಯಿನಿ ಬಿಂದು ಮ್ಯಾಕ್ಸಿಮ್ ಡಿಸೋಜ ಆಡಳಿತ ಮಂಡಳಿಯ ಸರ್ವಸದಸ್ಯರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮ ನಂತರ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವು ನಡೆಯಿತು.