ಗುಣಮಟ್ಟದ ಶಿಕ್ಷಣ ಸಂಸ್ಥೆಗೆ ವಿದ್ಯಾರ್ಥಿಗಳ ಕೊರತೆ ಇಲ್ಲ
ವರದಿ : ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: ಇಲ್ಲಿನ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಸಮಾರಂಭವು ನ. 29ರಂದು ಅಮರನಾಥ ಶೆಟ್ಟಿ ಸ್ಮಾರಕ ಆವರಣದ ಅಮರಾವತಿ ಸಭಾಂಗಣದಲ್ಲಿ ಜರಗಿತು.
ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರೋಟರಿ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ನಾರಾಯಣ ಪಿ.ಎಂ ಮಾತನಾಡಿ, ಅದ್ಭುತ ಕಲ್ಪನೆಯೊಂದಿಗೆ ಈ ಶಾಲೆಯನ್ನು ಕಟ್ಟಿಕೊಂಡು ಬರಲಾಗಿದ್ದು ಈಗ ಶಾಲೆಯಲ್ಲಿ 1600 ವಿದ್ಯಾರ್ಥಿಗಳಿದ್ದಾರೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳು ಲಭ್ಯವಿದ್ದು, ದಕ್ಷ ಶಿಕ್ಷಕ ವೃಂದದ ಮಾರ್ಗದರ್ಶನ ವಿದ್ಯಾರ್ಥಿಗಳ ಸಾಧನೆಗೆ ಪ್ರೇರಣಾದಾಯಕವಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮೂಡುಬಿದಿರೆ ವಲಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ. ಶ್ರೀಧರ್ ಅವರು ಮಾತನಾಡಿ ಶಿಕ್ಷಕ ವರ್ಗದ ದಕ್ಷ ಮತ್ತು ಪ್ರಾಮಾಣಿಕ ಮಾರ್ಗದರ್ಶನದೊಂದುಗೆ ವಿದ್ಯಾರ್ಥಿಗಳು ಸಿಕ್ಕಿದ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡಾಗ ಸಾಧನೆ ಮೂಡಿಬರಲು ಸಾಧ್ಯ. ಜೀವನದ ಯಶಸ್ಸು ಕಾಣಲು ಅಂಕಪಟ್ಟಿಯನ್ನು ಆಧಾರ ವಾಗಿಸಿಕೊಳ್ಳದೆ, ವ್ಯಕ್ತಿತ್ವವನ್ನು ಅಂಕವಾಗಿ ಪರಿವರ್ತಿಸಿಕೊಳ್ಳುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ಮೂಡುಬಿದಿರೆ ರೋಟರಿ ಕ್ಲಬ್ ಅಧ್ಯಕ್ಷ ಯು. ರವಿಪ್ರಸಾದ್ ಉಪಾಧ್ಯಾಯ, ರೋಟರಿ ಪಿ.ಯು. ಕಾಲೇಜು ಮತ್ತು ಸಿ.ಬಿ.ಎಸ್.ಇ. ವಿಭಾಗದ ಸಂಚಾಲಕ ಜೆ. ಡಬ್ಲ್ಯೂ. ವಿದ್ಯಾರ್ಥಿ ನಾಯಕರಾದ ಸುಧಾಂಶು ಮತ್ತು ರಿಯಾನ್ ಅಲ್ಲನ್ ಡಿಸೋಜ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ರುಪ್ಸಾ ಸಂಸ್ಥೆಯಿಂದ ಕೊಡಲ್ಪಡುವ ರಾಜ್ಯಮಟ್ಟದ ವಿದ್ಯಾರತ್ನ ಪ್ರಶಸ್ತಿ ಪುರಸ್ಕೃತ ಸಂಸ್ಕೃತ ಅಧ್ಯಾಪಕ ಗಜಾನನ ಮರಾಠೆ ಮತ್ತು ರಾಜ್ಯಮಟ್ಟದ ಯುವರತ್ನ ಪ್ರಶಸ್ತಿ ಪುರಸ್ಕೃತ ಮೋಹನ ಹೊಸ್ಮಾರ್, ಹಾಗೂ 16 ವರ್ಷಗಳಿಂದ ಶಾಲಾ ಬಿಸಿಯೂಟ ವಿಭಾಗದಲ್ಲಿ ಸೇವೆಗೈಯುತ್ತಿರುವ ವಾಸುದೇವ ರಾವ್ ಅವರನ್ನು ಸನ್ಮಾನಿಸಲಾಯಿತು.
ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿರುವ ಹೆಮ್ಮೆಯ ವಿದ್ಯಾರ್ಥಿ ಕೌಶಿಕ್ ಶೆಟ್ಟಿ, ರಾಜ್ಯಮಟ್ಟದ ಕ್ರೀಡಾ ಸಾಧಕರಾದ ರಿಶಾನ್ ಶೇಖ್, ಸುಧಾಂಶು ಕೊಂಬ, ಆದಿತ್ಯ ನಾಯಕ್, ವರ್ಷಿತ್, ಎಸ್. ಆರ್. ವೈಭವ್ ಮತ್ತು ವಿದಿತ್ ಎಂ. ಅವರನ್ನು ಅಂತೆಯೇ ಸಾಂಸ್ಕೃತಿಕ ವಿಭಾಗದಲ್ಲಿ ಜಿಲ್ಲೆ ಮತ್ತು ರಾಜ್ಯಮಟ್ಟದ ಸಾಧಕ ವಿದ್ಯಾರ್ಥಿಗಳಾದ ಸಾನಿಯಾ ಫಾತಿಮಾ, ಸಮನ್ವಿ ಎಸ್., ಸತ್ಯಂ, ನಿಹಾಲ್, ಕ್ಲಿನ್ಸನ್, ರಿಯಾ ಪೂಜಾರಿ, ಆಧ್ಯಾ ವಿ. ಕೋಟ್ಯಾನ್ ಅವರನ್ನು ಪುರಸ್ಕರಿಸಲಾಯಿತು. ಕಳೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ಸಂಚಿತಾ ಎಸ್. ಕೋಟ್ಯಾನ್, ಚಿನ್ಮಯಿ ಶೆಣೈ, ಸಾನಿಧ್ಯಾ ಡಿ., ಅವನಿ ಮತ್ತು ಶ್ರೀಜಾ ಪೂಜಾರಿ ಅವರಿಗೆ ನಗದು ಪುರಸ್ಕಾರ ಅಂತೆಯೇ ಎನ್.ಸಿ.ಸಿ. ವಿಭಾಗದ ಮಹೀನ್ ಶೆಟ್ಟಿ, ಪ್ರೀಕ್ಷಾ ಪೂಜಾರಿ ಹಾಗೂ ಆಧ್ಯಾ ಜೈನ್ ಅವರನ್ನು ಪುರಸ್ಕರಿಸಲಾಯಿತು.
ಶಾಲಾ ಸಂಚಾಲಕ ಪ್ರವೀಣ್ ಚಂದ್ರ ಜೈನ್ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ಮುಖ್ಯೋಪಾಧ್ಯಾಯಿನಿ ತಿಲಕಾ ಅನಂತವೀರ ಜೈನ್ ಶಾಲಾ ವಾರ್ಷಿಕ ವರದಿ ವಾಚಿಸಿದರು. ಪ್ರೀತಿಕಾ ಮತ್ತು ಲೋನಾ ಎಫ್. ರಸ್ಕಿನ್ಹಾ ನಿರೂಪಿಸಿದ ಕಾರ್ಯಕ್ರಮದಲ್ಲಿ ಗಜಾನನ ಮರಾಠೆ ವಂದಿಸಿದರು. ಮೋಹನ ಹೊಸ್ಮಾರ್ ಮುಖ್ಯ ಅತಿಥಿಯವರನ್ನು ಪರಿಚಯಿಸಿದರು.
ಶಿಕ್ಷಕಿಯರಾದ ನವೀನಾ ಕೆ.ವಿ., ರಮ್ಯಾ ರಾವ್, ಜಾನೆಟ್ ಸ್ಯಾಂಕ್ಟಿಸ್ ಮತ್ತು ಪ್ರೇಮಲತಾ ಸನ್ಮಾನ ಮತ್ತು ಪುರಸ್ಕಾರ ಕಾರ್ಯಕ್ರಮ ನಡೆಸಿಕೊಟ್ಟರು.




































