ಕಾರ್ಕಳ : ಗುಂಡು ಹಾರಿಸಿಕೊಂಡು ಉದ್ಯಮಿ ಆತ್ಮಹತ್ಯೆ





ಕಾರ್ಕಳ : ನಿಟ್ಟೆ ದೂಪದಕಟ್ಟೆ ರಾಜ್ಯ ಹೆದ್ದಾರಿ ಬಳಿ ಕಾರ್ಕಳದ ಉದ್ಯಮಿ ದಿಲೀಪ್ ಎನ್.ಆರ್. ಸ್ವಯಂ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೈದಿದ್ದಾರೆ.
ಕಾರ್ಕಳ ಪುರಸಭೆಯ ಮಾಜಿ ಸದಸ್ಯರಾಗಿದ್ದ ದಿಲೀಪ್ ಎನ್.ಆರ್ ಅವರು ಪಣಿಯೂರು ಸಾಧುಶೆಟ್ಟಿ ಅವರ ನೇತೃತ್ವದ ತುಳುನಾಡ ಸೇನೆಯಲ್ಲಿ ಸಕ್ರಿಯಾರಾಗಿದ್ದು, ಸಂಘಟನೆಯನ್ನು ಕಾರ್ಕಳದಲ್ಲಿ ಕಟ್ಟಿ ಬೆಳೆಸುವಲ್ಲಿ ಪ್ರಮುಖರಾಗಿದ್ದರು.
ಮುಂಬಯಿಯಲ್ಲಿ ಪೊಲೀಸರು ಎನ್ಕೌಂಟರ್ ನಡೆಸಿರುವ ಮೂಲಕ ಪಣಿಯೂರು ಸಾಧುಶೆಟ್ಟಿಯನ್ನು ಇತೀ ಶ್ರೀಗೊಳಿಸಿದ ಬಳಿಕ ದಿಲೀಪ್ ಎನ್. ಆರ್ ತನ್ನ ತನ್ನ ವ್ಯವಹಾರ ಕೇಂದ್ರ ಬದಲಾಯಿಸಿದರು.
ಮುಂಬಯಿ, ಪೂನಾದಲ್ಲಿ ಹೊಟೇಲ್ ಉದ್ಯಮ ಆರಂಭಿಸಿದ ಅವರು ಮಂಗಳೂರಿಗೂ ಕಾರ್ಯಕ್ಷೇತ್ರವನ್ನು ವಿಸ್ತರಿಸಿದ್ದರು.
ಇತ್ತ ಅನಾರೋಗ್ಯದಿಂದ ಬಳಲುತ್ತಿದ್ದರೆ, ಮತ್ತೊಂದೆಡೆ ಆರ್ಥಿಕವಾಗಿ ಹದಗೆಟ್ಟಿದ್ದರು. ಈ ಎಲ್ಲಾ ಕಾರಣದಿಂದ ಅವರು ಜೀವನದಲ್ಲಿ ಜಿಗುಪ್ಸೆಗೊಂಡಿದ್ದರು.
ಆತ್ಮಹತ್ಯೆಗೆ ಅಂತಿಮ ನಿರ್ಧಾರ !
ರವಿವಾರದಂದು ರಾತ್ರಿ ಸಹೋದರರು ಸಹಿತ ತನ್ನ ಸ್ನೇಹಿತರಿಗೆ ಮೆಸೇಜ್ ಕಳುಹಿಸಿದ ದಿಲೀಪ್ ಎನ್.ಆರ್ ಅವರು “ನಿಮ್ಮನೆಲ್ಲ ಬಿಟ್ಟು ದೂರ ಹೋಗುತ್ತಿದ್ದೇನೆ” ಎಂಬ ಸಂದೇಶ ನೀಡಿದ್ದರು.
ದಿಲೀಪ್ ಎನ್ .ಆರ್. ಕರೆಗೆ ಸ್ವೀಕರಿಸದೇ ಇದ್ದಾಗ ಅವರ ಸಹೋದರ ಪೊಲೀಸರ ನೆರವಿಗೆ ಮುಂದಾಗಿದ್ದಾರೆ. ರಾತ್ರಿ ಇಡೀ ಹುಡುಕಾಟ ನಡೆಸಿದಾಗ ಕೊನೆಯ ಬಂದ ಮೆಸೇಜ್ ದೂಪದಕಟ್ಟೆ ಪರಿಸರದಿಂದ ಎಂಬುವುದು ಖಚಿತಗೊಂಡಿತು.
ಇದರ ಹಿನ್ನಲೆಯಲ್ಲಿ ಪೊಲೀಸರು ಹಾಗೂ ದಿಲೀಪ್ ಎನ್.ಆರ್ ನ ಸಹೋದರರು ಹಾಗೂ ಸ್ನೇಹಿತರು ಹುಡುಕಾಟ ನಡೆಸಿದಾಗ ದೂಪದಕಟ್ಟೆ ಪರಿಸರದಲ್ಲಿ ಕಾರಿನೊಳಗೆ ವಿಷಪಾಷಣ ಸೇವಿಸಿಕೊಂಡಿದ್ದ ದಿಲೀಪ್ ಎನ್.ಆರ್. ತನ್ನಲ್ಲಿದ್ದ ಪರವಾನಿಗೆ ಹೊಂದಿದ್ದ ಪಿಸ್ತೂಲ್ ನಿಂದ ಟ್ರಿಗರ್ ಒತ್ತಿದ್ದು, ಪರಿಣಾಮವಾಗಿ ಗುಂಡು ದೇಹದೊಳಗೆ ಲೀನಗೊಂಡು ಪ್ರಾಣಪಕ್ಷಿ ಹಾರಿಹೋಗಿದೆ.
ಕುಲೀನ ಮನೆ ತನಕ್ಕೆ ಸೇರಿದ ದಿಲೀಪ್ ಎನ್.ಆರ್.
ಎನ್.ಆರ್ ಮನೆತನಕ್ಕೆ ಸೇರಿದ ದಿಲೀಪ್ ಎನ್.ಆರ್ ಅವರ ಸಹೋದರ ಎನ್.ಆರ್.ಸುಭೀತ್ ಕುಮಾರ್ ಅವರು ಕಾರ್ಕಳ ಪುರಸಭೆಯ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಮುಖಂಡರಾಗಿ ಗುರುತಿಸಿಕೊಂಡಿದ್ದಾರೆ. ಮತ್ತೊಬ್ಬ ಸಹೋದರ ಪ್ರದೀಪ್ ಎನ್.ಆರ್ ಮುಂಬಯಿಯಲ್ಲಿ ಉದ್ಯಮ ನಡೆಸುತ್ತಿದ್ದರು. ಇತ್ತೀಚಿನ ವರ್ಷಗಳ ಹಿಂದೆ ಊರಿಗೆ ಹಿಂತಿರುಗಿದ್ದಾರೆ.
ಮಾಜಿ ಸಚಿವ ವಿನಯಕುಮಾರ್ ಸೊರಕೆಯ ನಿಕಟ ಸಂಬಂಧಿಗಳ ಪೈಕಿ ಎನ್.ಆರ್ ಮನೆತನವೂ ಸೇರಿದೆ.
ಮೃತದೇಹ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಘಟನಾ ಸ್ಥಳಕ್ಕೆ ವಿಧಿವಿಜ್ಞಾನಯಾಲದ ತಂಡ ಬಿಡುಬಿಟ್ಟು ಅಗತ್ಯ ಮಾಹಿತಿ ಕಲೆ ಹಾಕಿದೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಕೇಸುದಾಖಲಾಗಿದೆ.
ಕಾರ್ಕಳ ಪುರಸಭೆಯ ಮಾಜಿ ಸದಸ್ಯರಾಗಿದ್ದ ದಿಲೀಪ್ ಎನ್.ಆರ್. ಅವರು ಸಾಧುಶೆಟ್ಟಿಯ ತುಳುನಾಡ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರು.














