ಗವ್ಯ ಉತ್ಪನ್ನಗಳ ಪರಿಚಯ, ತಯಾರಿಕೆ, ಕೈತೋಟ, ಸಾವಯವ ಗೊಬ್ಬರ ಮಾಹಿತಿ ಶಿಬಿರ
ಮೂಡುಬಿದಿರೆ: ಸ್ಥಳೀಯ ವಂದೇ ಮಾತರಂ ಸೌಹಾರ್ದ ಸಹಕಾರಿ ಸಂಘದ ವತಿಯಿಂದ ಸ್ಥಳೀಯ ಇನ್ನರ್ ವೀಲ್ ಕ್ಲಬ್ ಹಾಗೂ ಗೋ ಸೇವಾ ಗತಿ ವಿಧಿ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ನಾಳೆ ಸೆಪ್ಟೆಂಬರ್ 1 ರಂದು ವಂದೇ ಮಾತರಂ ಆಡಳಿತ ಕಚೇರಿ ಸಭಾಂಗಣದಲ್ಲಿ ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಗೌವ್ಯ ಉತ್ಪನ್ನ ಪರಿಚಯ ಮತ್ತು ತಯಾರಿಕೆ, ಕೈತೋಟ ರಚನೆ ಹಾಗೂ ಸಾವಯವ ಗೊಬ್ಬರ ನಿರ್ಮಿಸುವ ಮಾಹಿತಿ ಶಿಬಿರ ನಡೆಯಲಿದೆ. ಸ್ವಸಹಾಯ ಸಂಘದ ಸದಸ್ಯರು ಹಾಗೂ ಗೋ ಪ್ರೇಮಿಗಳು ಇದರ ಸದುಪಯೋಗವನ್ನು ಪಡೆಯಬಹುದೆಂದು ವಂದೇ ಮಾತರಂ ಸಂಸ್ಥೆ ಪ್ರಕಟಣೆ ತಿಳಿಸಿದೆ.




































