ಗಣೇಶ ಚತುರ್ಥಿಯ ವಿಶೇಷತೆ -ಲೇಖನ : ರಾಯಿ ರಾಜಕುಮಾರ ಮೂಡುಬಿದಿರೆ

Picture of RB NEWS

RB NEWS

Bureau Report

ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯಂದು ಗಣೇಶ ಚೌತಿ ಹಬ್ಬವನ್ನು ಭಕ್ತಿ, ಶೃದ್ಧೆಯಿಂದ ಆಚರಿಸಲಾಗುತ್ತದೆ. ಸಾತ್ವಿಕ ಗುಣದ ಗಣಪನಲ್ಲಿ ಶಕ್ತಿ, ಬುದ್ಧಿ, ಸಂಪತ್ತು ಕೂಡಿಕೊಂಡಿದೆ. ಗಣಪತಿ ವಿದ್ಯೆ, ಬುದ್ಧಿ, ಸಿದ್ಧಿ ಯ ಅಧಿದೇವತೆಯಾಗಿದ್ದಾನೆ. ಈ ಎಲ್ಲದರ ಕಾರಣದಿಂದಾಗಿ ಪ್ರತಿಯೊಂದು ಮಂಗಲ ಕಾರ್ಯಕ್ಕೆ ಗಣೇಶನೇ ಆರಂಭ ಪೂಜಿತ.


ಸೂಕ್ಷ್ಮ ಕಣ್ಣು, ಮೊರದಗಲದ ಕಿವಿ, ಉದ್ದವಾದ ಮೂಗಿನಿಂದಾಗಿ ವಿಶೇಷ ಚೇತನ ನಂತೆ ಕಂಡುಬಂದರೂ ಗಣಪನಿಗೇ ಮೊದಲ ಪೂಜೆ. ಏಕೆಂದರೆ ಆತ ಅಸಾಮಾನ್ಯ -ಪರಾಕ್ರಮದ ದೇವತೆ. ದೇವ-ದಾನವರ ಪ್ರತಿಯೊಂದು ಯುದ್ಧದಲ್ಲೂ ಆತನೇ ಸೇನಾಧಿಪತಿ. 20 ಗಣ ಸೈನಿಕರ ಸೇನಾಧಿಪತಿಯಾಗಿದ್ದ ಕಾರಣ ಗಣಪನಿಗೆ 21 ಗರಿಕೆ, 21 ಪುಷ್ಪ, 21 ಮೋದಕಗಳನ್ನು ಅರ್ಪಿಸಿ ಸಂತಸಪಡಿಸಲಾಗುತ್ತದೆ.

ವಾಮದೇವರ ಶಾಪದಿಂದ ಇಲಿ ರೂಪ ಪಡೆದ ಗಂಧರ್ವನು ಪರಾಶರ ಋಷಿಗಳ ಆಶ್ರಮದ ಧಾನ್ಯ ಸಂಗ್ರಹ ನಾಶಗೊಳಿಸಿದಾಗ ಋಷಿಗಳ ಪ್ರಾರ್ಥನೆಯಂತೆ ಗಣೇಶ ಇಲಿಯನ್ನು ಶಾಶ್ವತವಾಗಿ ತನ್ನ ವಾಹನವನ್ನಾಗಿ ಮಾಡಿ ಕೊಂಡ ಎಂಬ ಪ್ರತೀತಿ ಇದೆ.

ಈ ಪ್ರಕಾರ ಹಲವಾರು ಕಾರಣಗಳಿಂದ ಗಣೇಶನನ್ನು ವಕ್ರತುಂಡ, ಏಕದಂತ, ಕೃಷ್ಣ ಪಿಂಗಾಕ್ಷ, ಗಜವಕ್ತ್ರ, ಲಂಬೋದರ, ವಿಕಟ, ವಿಘ್ನ ರಾಜೇಂದ್ರ, ಧೂಮ್ರ ವರ್ಣ, ಬಾಲಚಂದ್ರ, ವಿನಾಯಕ, ಮಹಾ ಗಣಪತಿ, ಗಜಾನನ ಎಂಬ ಹನ್ನೆರಡು ಹೆಸರುಗಳಿಂದ ಸ್ತುತಿಸಲಾಗುತ್ತದೆ. ಇಂತಿಪ್ಪ ವಿಘ್ನ ಹರ್ತಾರನ ಕೃಪೆ ಎಲ್ಲರ ಮೇಲೂ, ದೇಶದ ಮೇಲು ಇರಲೆಂದು ಪ್ರಾರ್ಥನೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top