ಗಣಪತಿ ಹೋಮದ ಮಹತ್ವ,ಹೋಮ ಮಾಡುವ ವಿಧಾನ ,ಹೋಮಕ್ಕೆ ಬೇಕಾಗುವ ಸಾಮಗ್ರಿಗಳು
“ಕಲೌ ದುರ್ಗಾ ವಿನಾಯಕೌ “ ಕಲಿಯುಗದಲ್ಲಿ ದುರ್ಗಾ ಪೂಜೆಗೆ ಮತ್ತು ಗಣಪತಿ ಆರಾಧನೆಗೆ ಬಹಳ
ಮಹತ್ವವನ್ನು ಕೊಟ್ಟಿದ್ದಾರೆ .ಶೀಘ್ರವಾಗಿ ಒಲಿಯುವ ದೇವರೆಂದರೆ ದುರ್ಗೆ ಮತ್ತು ಗಣಪತಿ ದೇವರು.
ಯಾವುದೇ ಶುಭ ಕೆಲಸದ ಆರಂಭದಲ್ಲಿ ಶ್ರೀ ಮಹಾ ಗಣಪತಿಯನ್ನು ಪ್ರಾರ್ಥನೆ ಮಾಡದೆ ಕೆಲಸ ಆರಂಭ
ಮಾಡುವ ಕ್ರಮವಿಲ್ಲ. ವಿದ್ಯೆಯ ಆರಂಭದಲ್ಲಿ ,ಮದುವೆ ಇತ್ಯಾದಿ ಶುಭ ಕೆಲಸಗಳ ಆರಂಭದಲ್ಲಿ
ಗಣಪತಿಯನ್ನು ಪೂಜಿಸುತ್ತೇವೆ. ಪೂಜೆಯ ವಿಧಾನಗಳು ಅನೇಕ ರೀತಿಯಲ್ಲಿ ಇವೆ .ಒಂದು ಸ್ವಸ್ತಿಕ
ಇಟ್ಟುಪೂಜೆ ಮಾಡುವ ಕ್ರಮ ಇದೆ .ಹೋಮ ಮಾಡಿ ,ಗಣಪತಿ ಮೂಲ ಮಂತ್ರವನ್ನು ಹೇಳಿ
ಆಹುತಿಗಳನ್ನು ಕೊಡುವ ಮೂಲಕ ಆರಾಧನೆ ಮಾಡುವ ಕ್ರಮ ಇದೆ .ವರ್ಷಕ್ಕೆ ಒಮ್ಮೆಯಾದರೂ ನಮ್ಮ
ಮನೆಗಳಲ್ಲಿ ಹೋಮವನ್ನು ಮಾಡಬೇಕು ಎಂಬ ನಿಯಮ ಇದೆ .ಪ್ರತಿ ನಿತ್ಯ ಮಾಡುವವರೂ ಇದ್ದಾರೆ.
ಗಣಪತಿ ಹೋಮದಲ್ಲಿ ತೆಂಗಿನ ಕಾಯಿ ಲೆಕ್ಕದಲ್ಲಿ ಅಂದರೆ ಒಂದು ,ಮೂರು ,ಆರು ,ಹನ್ನೆರಡು
ನಲ್ವತ್ತೆಂಟು , ನೂರ ಎಂಟು ,ಸಾವಿರದ ಎಂಟು ತೆಂಗಿನ ಕಾಯಿಗಳ ಹೋಮ ಮಾಡುವ ಪದ್ಧತಿ ಇದೆ
.ತೆಂಗಿನ ಕಾಯಿ ಹೆಚ್ಚಾದಂತೆ ಹೋಮಕ್ಕೆ ಆಹುತಿ ಕೊಡುವ ಸಾಹಿತ್ಯದ ಪ್ರಮಾಣ ಕೂಡಾ ಹೆಚ್ಚಾಗುತ್ತಾ
ಹೋಗುತ್ತದೆ ,ನಮಸ್ಕಾರ ,ತರ್ಪಣ ಇದರಲ್ಲಿ ಒಳಗೊಂಡಿರುತ್ತದೆ .ಬಾಲಗಣಪತಿ ಹೋಮವನ್ನು
ಮದುವೆ ತಡವಾದಾಗ ಪರಿಹಾರವಾಗಿ ಮಾಡಲಾಗುತ್ತದೆ .ಕೇತು ಗ್ರಹದ ದೋಷ ಪರಿಹಾರವಾಗಿ ಕೂಡಾ
ಮಾಡಲಾಗುತ್ತದೆ.
ಹೋಮದ ಮಹತ್ವ : “ಹುತಮ್ ಚ ದತ್ತಮ್ ಚ ತತೈವ ತಿಷ್ಟತಿ “ ಹೋಮದಲ್ಲಿ ನಾವು ಆಹುತಿಯ
ರೂಪದಲ್ಲಿ ಕೊಡುವ ಸಾಹಿತ್ಯಗಳನ್ನು ದೇವರು ನೇರವಾಗಿ ಸ್ವೀಕರಿಸುತ್ತಾರೆ .ಶ್ರೀ ಗಣಪತಿ ತನ್ನ
ಸೊಂಡಿಲಿನಿಂದ ನೇರವಾಗಿ ಸ್ವೀಕರಿಸುತ್ತಾನೆ ಎಂಬ ನಂಬಿಕೆ ನಮ್ಮದು .ಚೌತಿಯ ದಿನದಂದು ಗಣಪತಿಯ
ಮೂರ್ತಿಯ ಪ್ರತಿಷ್ಠೆ ಮಾಡುವ ಮೊದಲು ಗಣಪತಿ ಹೋಮ ಮಾಡಲೇ ಬೇಕು .ಹೋಮದ ಉದ್ದೇಶ
ಹೀಗಿದೆ .ಇಡೀ ಕುಟುಂಬದ ಸರ್ವ ಸದಸ್ಯರ ಜಾತಕದಲ್ಲಿ ಇರುವ ಗ್ರಹರ ದೋಷ ನಿವಾರಣೆಗೆ ,ಅಂತರ್ದೆಶೆ,
ಸೂಕ್ಷ್ಮ ದೆಶೆ ಗಳಲ್ಲಿ ಬರುವ ದುಷ್ಟಾರಿಷ್ಟ ದೋಷ ನಿವಾರಣೆಗೆ ,ಸರ್ವ ರೀತಿಯ ಮೃತ್ಯು ದೋಷ
ನಿವಾರಣೆಗೆ [ಮೃತ್ಯುವಿನಲ್ಲಿ ಅಪಮೃತ್ಯು ,ಕಾಲಮೃತ್ಯು, ತೀವ್ರ ಮೃತ್ಯು ,ಘೋರ ಮೃತ್ಯು ,ಕ್ಷುದ್ರ
ಮೃತ್ಯು ,ದುಷ್ಟ ಮೃತ್ಯು ,ವ್ಯಾಳ ಮೃತ್ಯು ,ಎಂಬ ಅನೇಕ ರೀತಿಯ ಮೃತ್ಯು ದೋಷಾ ನಿವಾರಣೆಗೆ
]ಆರೋಗ್ಯದಿಂದ ನೂರು ವರ್ಷಗಳ ಆಯುಷ್ಯಕ್ಕಾಗಿ ,ಮನಸ್ಸಿನಲ್ಲಿ ನಾವು ಮಾಡಬೇಕೆಂದು ಯೋಚಿಸುವ
ಸರ್ವ ಕೆಲಸಗಳ ಅಭೀಷ್ಟ ಸಿದ್ಧಿಗಾಗಿ ,ಮನೆಯಲ್ಲಿ ನಮಗೆ ಗೊತ್ತಿಲ್ಲದೆ ಇರುವ ಋಣಾತ್ಮಕ ದೋಷ
ನಿವಾರಣೆಗೆ , ಮನೆಯಲ್ಲಿರುವ ಎಲ್ಲರ ಮನಸ್ಸಿನ ಶುದ್ಧಿಗಾಗಿ ಹೋಮವನ್ನು ಭಕ್ತಿ ಶ್ರದ್ಧಾ
ಪೂರ್ವಕವಾಗಿ ಶುಭ ನಕ್ಷತ್ರ ಶುಭ ವಾರ ಶುಭ ತಿಥಿ ,ಶುಭ ಯೋಗ ,ಶುಭ ಕರಣದಂದು ,ಧರ್ಮ ಅರ್ಥ
,ಕಾಮ ,ಮೋಕ್ಷ ಚತುರ್ವಿಧ ಪುಣ್ಯ ಫಲ ಪುರುಷಾರ್ಥ ಸಿದ್ಧಿಗಾಗಿ ಹೋಮವನ್ನು ಮಾಡಲಾಗುತ್ತದೆ .
ಗುರುವಿನ ಉಪದೇಶದಂತೆ ಮಾಡಬೇಕಾಗುತ್ತದೆ .ಊರಿಂದ ಊರಿಗೆ ಸಂಪ್ರದಾಯದಲ್ಲಿ ವ್ಯತ್ಯಾಸ
ಇರುತ್ತದೆ .ಅನ್ವಾದಾನ ಹೀಗಿದೆ .ವ್ಯಾಹೃತಿಭಿ:ಚತುರ್ವಾರಮ್ ,ಅಷ್ಟಾಕ್ಷರೇಣ ,ಕೃಷ್ಣ ಷಡಕ್ಷರೇಣ
,ದ್ವಾದಶ ಅಕ್ಷರ ಮನ್ತ್ರೇಣ , ವಿಷ್ಣು ಗಾಯತ್ರ್ಯಾ ,ಪುರುಷ ಸೂಕ್ತೇನ ,ಪೂರ್ವಾಜ್ಯೇನ , ಚತುರ್ವಾರಮ್
ಆಷ್ಟ ದ್ರವ್ಯೇನ ,ಅಪರಾಜ್ಯೇನ ,ಪ್ರಾಯಶ್ಚಿತ್ಯ ಮನ್ತ್ರೈ,ಬ್ರಹ್ಮಾರ್ಪಣ ಮನ್ತ್ರೇಣ :ಇದು ಹೋಮದ
ಮೊದಲು ನಾನು ಈ ರೀತಿಯಾಗಿ ಆಹುತಿ ಕೊಡುತ್ತೇನೆ ಎಂದು ಹೇಳುವುದು.
“ಓಂ ಶ್ರೀಂ ಹ್ರೀಂ ಕ್ಲೀಂಗ್ಲೌಂ ಗಂ ಗಣಪತಯೇ ವರ ವರದ ಸರ್ವ ಜನಂ ಮೇ ವಶಮಾನಯ ಸ್ವಾಹಾ “
ಇದು ಮೂಲ ಮಂತ್ರವಾಗಿದೆ . ನಮಸ್ಕಾರ ಮಾಡುವಾಗ ನಮೋ ನಮ: ಎಂದುಕೊನೆಯಲ್ಲಿ ಹೇಳಬೇಕು
.ತರ್ಪಣ ಕೊಡುವಾಗ ಮಹಾ ಗಣಪತಿಮ್ ತರ್ಪಯಾಮಿ ಎಂದು ಹೇಳಬೇಕು .ತರ್ಪಣಕ್ಕೆ ತೆಂಗಿನ ಕಾಯಿ
ನೀರನ್ನೆ ಉಪಯೋಗಿಸಬೇಕು ,ನಮಸ್ಕಾರಕ್ಕೆ ಗರಿಕೆಯನ್ನು ಉಪಯೋಗಿಸುವುದು ,
ಇಲ್ಲಿ ಯಾವುದೇ ವಸ್ತುಗಳನ್ನು ಬಿಸಾಡುವಂತಿಲ್ಲ.ತೆಂಗಿನ ಸಿಪ್ಪೆ ,ಗೆರಟೆ ,ತೆಂಗಿನ ನೀರು ,ಬಾಳೆ ಹಣ್ಣಿನ
ಸಿಪ್ಪೆ ,ಕಬ್ಬಿನ ಸಿಪ್ಪೆ ಎಲ್ಲವೂ ಹೋಮಕ್ಕೆ ಹಾಕಲಿಕ್ಕಿದೆ.
ಆಷ್ಟ ದ್ರವ್ಯಗಳು :ಬೆಲ್ಲ ,ಅರಳು, ಅರಳು ಹುಡಿ ,ಅವಲಕ್ಕಿ ,ದನದ ಶುದ್ಧ ತುಪ್ಪ ,ಜೇನು ತುಪ್ಪ ,ಎಳ್ಳು
,ಬಾಳೆ ಹಣ್ಣು ಕಬ್ಬು ತೆಂಗಿನ ಕಾಯಿ ಇತರ ವಸ್ತುಗಳು :ಬೆಳ್ತಿಗೆ ಅಕ್ಕಿ ,ತೆಂಗಿನಕಾಯಿ ,ವೀಳ್ಯದೆಲೆ ,ಅಡಿಕೆ ,ಬೈರವಾಸ [ವೇಷ್ಟಿ ],ದರ್ಭೆ ,ಹಲಸಿನ
,ಮಾವಿನ ತುದಿ ,ತೆಂಗಿನ ಸಿಪ್ಪೆ ,ಹಲಸಿನ ಒಣ ಕಟ್ಟಿಗೆ ,ಪಾಲಾಶ ಸಮಿಧೆ ,ಬತ್ತಿ ಎಣ್ಣೆ,ಊದುಬತ್ತಿ
,ಕರ್ಪೂರ ,ದೀಪಗಳು ,ಆರತಿ .ಬಾಳೆಯ ಎಲೆಗಳು ,ರಂಗೋಲಿ ಹುಡಿ,ಹರಿವಾಣಗಳು ಬಾಳೆ ದಿಂಡು ,
ಮರಳು ,ತಂಬಿಗೆ ,ಹಾಲು ಮೊಸರು ,ಗೋಮಯ ,ಗೋಮೂತ್ರ ಹೂ ತುಲಸಿ ಫಲವಸ್ತುಗಳು ,
ಮಾಂಸಾಹಾರಿಗಳ ಮನೆಯಲ್ಲಿ ಮಾಡುವಾಗ ಮನೆಯ ಒಳಗೆ ಮಾಡದೆ ತುಳಸಿ ಕಟ್ಟೆಯ ಎದುರು
ಮಾಡುವುದು .ಪುರುಷ ಸೂಕ್ತ ಮಂತ್ರ ಅಲ್ಲಿ ಹೇಳುವ ಹಾಗಿಲ್ಲ .ದ್ರವ್ಯ ಲೋಪ ,ಮಂತ್ರ ಲೋಪ ,ಶುದ್ಧ
ಅಶುದ್ಧ ಚಿಂತನೆ ಮಾಡದಿರುವುದು ,ಗುರುಗಳ ಉಪದೇಶ ಇಲ್ಲದಿರುವುದು ಮಹಾ ದೋಷಕ್ಕೆ
ಕಾರಣವಾಗಿರುತ್ತದೆ . ಆಹುತಿಗಳ ನಿರ್ಧಿಷ್ಟ ಸಂಖ್ಯೆ ಇದೆ .ಇಲ್ಲಿ ತಪ್ಪದಂತೆ ನೋಡಿಕೊಳ್ಳಬೇಕು ,.ಅನ್ನ
ದಾನದ ಅವಶ್ಯಕತೆ ಇಲ್ಲಿದೆ ,.ಮಾಡಿರುವ ಅಷ್ಟದ್ರವ್ಯದಲ್ಲಿ ಅರ್ಧ ಪಾಲು ಹೋಮಕ್ಕೆ ,ಹಾಗೆಯೇ ಅರ್ಧ
ಪಾಲು ಪ್ರಸಾದ ರೂಪದಲ್ಲಿ ಹಂಚಿ ಹೋಗಬೇಕು .ಅಂದರೆ ಅಷ್ಟು ಜನರಿಗೆ ಅನ್ನ ದಾನ ಆಗಬೇಕು.





































