ಕಾರ್ಕಳ : ಕ್ಯಾನ್ ಫಿನ್ ಹೋಮ್ಸ್, ಮುಂಬೈ ಹಾಗೂ ಸೆಲ್ಕೋ ಸೋಲಾರ್ ಇವರ ಸಹಭಾಗಿತ್ವದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ದೊಂಡೇರಂಗಡಿಯಲ್ಲಿ 5ಕೆ.ವಿ ಯ ಸೋಲಾರ್ ವಿದ್ಯುತ್ ಹಾಗೂ ಕ್ಯಾನ್ ಫಿನ್ ಹೋಮ್ಸ್ ಮುಂಬೈಯವರು ಪ್ರಯೋಗಾಲಯಕ್ಕೆ ಗಣಕೀಕೃತ ರಕ್ತ ಪರಿಕ್ಷಿಸುವ ಉಪಕರಣವನ್ನು ಸಿ.ಎಸ್.ಆರ್ ಅನುದಾನದಲ್ಲಿ ಇತ್ತೀಚೆಗೆ ಕೊಡುಗೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ಕ್ಯಾನ್ ಫಿನ್ ಹೋಮ್ಸ್ ಎ.ಜಿ.ಎಂ ಸದಾಶಿವ ಕಾಮತ್ ಹಾಗೂ ಕಾರ್ಕಳ ಸೆಲ್ಕೋ ಸೋಲಾರ್ ನ ಮೆನೇಜರ್ ಪುನೀತ್ ಶೆಟ್ಟಿ, ಕಡ್ತಲ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಸುಕೇಶ್ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಚಂದ್ರಿಕಾ ಕಿಣಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಿಬ್ಬಂದಿ ಸತೀಶ್ ಕಾಮತ್ ಕಾರ್ಯಕ್ರಮವನ್ನು ನಿರೂಪಿಸಿ,ವಂದಿಸಿದರು.





































