ಕ್ಷೀಣಿಸುತ್ತಿರುವ ಮುಂಗಾರು ಮಳೆ: ಚುರುಕುಗೊಂಡ ತೋಡು ನಿರ್ಮಾಣ ಕಾರ್ಯ

ಕಾರ್ಕಳ : ಮುಂಗಾರು ಮಳೆ ಕ್ಷೀಣಿಸುತ್ತಿರುವಾಗಲೇ ಎಚ್ಚೆತ್ತುಗೊಂಡ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಸಾಣೂರು ಪರಿಸರದಲ್ಲಿ ತೋಡು ನಿರ್ಮಿಸಲು ಮುಂದಾಗಿ ನಗೆಪಾಟಲುಗೀಡಾಗಿದೆ.
ಮಂಗಳೂರು ಬಿಕರ್ನಕಟ್ಟೆಯಿಂದ ಕಾರ್ಕಳ ಬೈಪಾಸ್ ವರೆಗೆ -169 ಅಭಿವೃದ್ಧಿ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ಈ ನಡುವೆ ಕಾಮಗಾರಿ ಪೂರ್ಣಗೊಳ್ಳಲು ಬಾಕಿ ಉಳಿದಿರುವ ರಸ್ತೆಗಳು ಸಂಪೂರ್ಣ ಹೊಂಡಮಯದಿಂದ ಕೂಡಿದ್ದು, ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.
ವಾಹನ ಸಂಚಾರಕ್ಕೆ ಸುಗಮವಾಗುವ ರೀತಿಯಲ್ಲಿ ತೇಪೆಕಾಮಗಾರಿ ಕೈಗೊಳ್ಳದೇ ದಿವ್ಯ ನಿರ್ಲಕ್ಷ್ಯ ವಹಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕ್ರಮದ ಬಗ್ಗೆ ತೀವ್ರ ಅಕ್ಷೇಪವು ನಾಗರಿಕರದಾಗಿದೆ.

ಈ ನಡುವೆ ಕಾರ್ಕಳ ಬೈಪಾಸ್ ಪರಿಸರದಲ್ಲಿ ಕಾರ್ಕಳ ಪುರಸಭಾ ಮಾಜಿ ಸದಸ್ಯ ಪ್ರಕಾಶ್ ರಾವ್ ನೇತೃತ್ವದಲ್ಲಿ ದಲ್ಲಿ ವಿಶಾಲ್ ಮೋಟಾರ್ಸ್ ಮಾಲಕ ಜೀವನ್ ದಾಸ್ ಅಡ್ಯಂತಾಯ ಅವರು ತನ್ನ ಸ್ವಂತ ಜೆಸಿಬಿಯನ್ನು ಕಳುಹಿಸಿ ಮಳೆ ನೀರು ಹರಿದು ಹೋಗಲು ಸುಗಮವಾಗುವಂತೆ ತೋಡು ನಿರ್ಮಿಸಿ ಸಹಕರಿಸಿದರು.
ಇದರ ಬೆನ್ನಲ್ಲೇ ಬೈಪಾಸ್ ಜಂಕ್ಷನ್ ನಲ್ಲಿ ಸಾಮಾಜಿಕ ಹೋರಾಟಗಾರ ರಾಜೇಶ್ ಅವರು ರಸ್ತೆಯಲ್ಲಿ ತೆರೆದಿದ್ದ ಹೊಂಡಗಳಿಗೆ ಕೆಂಪುಕಲ್ಲುಗಳನ್ನು ತುಂಬಿಸಿದ್ದರು.
ಇಷ್ಟೆಲ್ಲಾ ಬೆಳವಣಿಗೆ ನಡೆದಿದ್ದರೂ, ಇಷ್ಟಾದರೂ, ಇಲಾಖಾಧಿಕಾರಿಗಳು ಹಾಗೂ ಕಂಟ್ರಾಕ್ಟರ್ ದಾರರು ಮಂಗಮಯವಾಗಿದ್ದರು.
ಮಂಗಳೂರು ಕುಳೂರು ಪರಿಸರದಲ್ಲಿ ರಾಷ್ಟ್ರೀಯ ಹೆದ್ದಾರಿಯ ಹೊಂಡಕ್ಕೆ ಬಿದ್ದ ಮಹಿಳೆಯ ದಾರುಣ ಅಂತ್ಯ ಕಂಡಿದ್ದರು.

ಆ ಬಳಿಕ ಮಂಗಳವಾರದಂದು ಕಾರ್ಕಳ ಬೈಪಾಸ್ ಗೆ ಅಗಮಿಸಿದ ಕಂಟ್ರಾಕ್ಟರ್ ಅವರು ಕಾಮಗಾರಿ ಕೈಗೊಳ್ಳುವ ಭರವಸೆ ನೀಡಿದರು. ರಸ್ತೆಯ ತೆರೆದುಕೊಂಡ ಹೊಂಡಗಳಿಗೆ ತೇಪೆ ಕಾಮಗಾರಿ ನಡೆಸುವ ಬದಲಾಗಿ ಸಾಣೂರು ಪರಿಸರದಲ್ಲಿ ತೋಡು ನಿರ್ಮಿಸಲು ಮುಂದಾಗಿರುವುದು ಕಂಡುಬರುತ್ತದೆ.
ಸಾಣೂರು ಗ್ರಾಮಸ್ಥರು ಈ ಕುರಿತು ಹಲವು ಬಾರಿ ಹೋರಾಟ ಕೈಗೊಂಡು, ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕ ಸುನೀಲ್ ಕುಮಾರ್ , ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುತ್ತಾ ಬಂದಿದ್ದರೂ ಹೆಚ್ಚಿನ ಪ್ರಗತಿ ಕಂಡಿಲ್ಲ ಎಂಬ ಕೂಗು ಕೇಳಿತ್ತಿವೆ.


























