ಕ್ಷಾತ್ರ ಸಂಗಮ-3 ಪ್ರತಿಭಾ ಸ್ಪರ್ಧೆ: ಕಾರ್ಕಳ ರಾಮಕ್ಷತ್ರಿಯ ಸಂಘಕ್ಕೆ ಸಮಾಧಾನಕರ ಬಹುಮಾನ

Picture of RB NEWS

RB NEWS

Bureau Report

ಕಾರ್ಕಳ :   ರಾಮಕ್ಷತ್ರಿಯ ಸೇವಾ ಸಂಘ(ರಿ)ಮಂಗಳೂರು ಇದರ ಆಶ್ರಯದಲ್ಲಿ ಪಾಲೇಮಾರ್ ಗಾರ್ಡನ್, ಮೋರ್ಗನ್ಸ್ ಗೇಟ್, ಮಂಗಳೂರು ಇಲ್ಲಿ ದಿನಾಂಕ 23.02.2025ರಂದು  ಕ್ಷಾತ್ರ ಸಂಗಮ-3 (ರಾಮಕ್ಷತ್ರಿಯರ ಸಮಾವೇಶ)ಅಂಗವಾಗಿ ನಡೆಸಲಾದ ಪ್ರತಿಭಾ ಸ್ಪರ್ಧೆಯಲ್ಲಿ ರಾಮಕ್ಷತ್ರಿಯ ಸಂಘ(ರಿ) ಕಾರ್ಕಳ ತಂಡವು "ನೃತ್ಯ ಕೌಶಲ್ಯದ ಮೂಲಕ ಯುದ್ಧಭೂಮಿಯಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ವೀರ ಮಹಿಳೆ ಝಾನ್ಸಿ ರಾಣಿ ಲಕ್ಷ್ಮೀ ಬಾಯಿ" ಪ್ರದರ್ಶನದ ಸ್ಪರ್ಧೆಗೆ ಪ್ರಶಸ್ತಿ ಪತ್ರ, ಸ್ಮರಣಿಕೆ,  ನಗದಿನೊಂದಿಗೆ  ಸಮಾಧಾನಕರ ಬಹುಮಾನ ಲಭಿಸಿತು.

ತಂಡದಲ್ಲಿ ಕುಮಾರಿಯರಾದ ಮಾನ್ಯ ರಾವ್, ಧನ್ಯ ರಾವ್, ತನ್ವಿ, ಧೃತಿ, ಸ್ವರ್ಣ, ಸ್ಮೃತಿ, ಚೈತ್ರ ಹಾಗೂ ಮನೋಜ್ಞ ಭಾಗವಹಿಸಿದ್ದರು.
ನಿರೂಪಣೆಯನ್ನು ಶಿಕ್ಷಕ ಸಂಜಯ್ ಕುಮಾರ್ ಮಾಡಿದರು.
ಕಾರ್ಕಳದ ನೃತ್ಯ ಶಿಕ್ಷಕಿಯರಾದ ವೀಣಾ ಮತ್ತು ಶ್ರಾವ್ಯ ತರಬೇತಿ ನೀಡಿದ್ದರು.
ಕಾರ್ಕಳ ರಾಮಕ್ಷತ್ರಿಯ ಸಂಘದ ಪದಾಧಿಕಾರಿಗಳು, ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top