ಕ್ಷತ್ರೀಯ ಮರಾಠ ಸಮಾಜದ ವತಿಯಿಂದ- ಕ್ಷತ್ರೀಯ ಮರಾಠ ಟ್ರೋಫಿ 2025
RB NEWS
Bureau Report
ಕ್ಷತ್ರೀಯ ಮರಾಠ ಸಮಾಜದ ವತಿಯಿಂದ- ಕ್ಷತ್ರೀಯ ಮರಾಠ ಟ್ರೋಫಿ 2025
ಕ್ಷತ್ರೀಯ ಮರಾಠ ಸಮಾಜ(ರಿ) ಕಾರ್ಕಳ ಇವರ ಆಶ್ರಯದಲ್ಲಿ ಕರಾವಳಿ ಮತ್ತು ಮಲೆನಾಡು ವಲಯ ಸಮಾಜ ಬಂಧುಗಳ ಆಹ್ವಾನಿತ ತಂಡಗಳ ಕ್ರಿಕೇಟ್ ಮತ್ತು ತ್ರೋಬಾಲ್ ಪಂದ್ಯಾಟ ಕ್ಷತ್ರೀಯ ಮರಾಠ ಟ್ರೋಫಿ-2025 ಡಿಸೆಂಬರ್ 27 ಮತ್ತು 28 ರಂದು ಕಾರ್ಕಳ ಸ್ವರಾಜ್ಯ ಮೈದಾನದಲ್ಲಿ ಅಯೋಜಿಸಲಾಗಿದೆ. ಕ್ರೀಡಾಕೂಟವನ್ನು ಸಮಾಜದ ಹಿರಿಯರಾದ ಉಮೇಶ್ ರಾವ್ ಚಿರಾಗ್ ಉದ್ಘಾಟಿಸಲಿದ್ದು ಸಮಾಜದ ಅಧ್ಯಕ್ಷ ಶುಭದರಾವ್ ಅಧ್ಯಕ್ಷತೆ ವಹಿಸಲಿದ್ದಾರೆ, ಮುಖ್ಯ ಅತಿಥಿಗಳಾಗಿ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಗಿರೀಶ್ ರಾವ್, ರಾಜ್ಯ ನಾರಾಯಣಗುರು ಅಭಿವೃದ್ದಿ ನಿಗಮದ ಅಧ್ಯಕ್ಷ ಮಂಜುನಾಥ್ ಪೂಜಾರಿ, ಕಾಂಗ್ರೆಸ್ ಮುಖಂಡ ಉದಯ್ ಶೆಟ್ಟಿ ಮುನಿಯಾಲು, ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್, ರವೀಂದ್ರ ಶೆಟ್ಟಿ ಬಜಗೋಳಿ, ಬೋಳ ಪ್ರಶಾಂತ್ ಕಾಮತ್, ಚಂದ್ರಕಲಾ ಜಿ. ರಾವ್, ಪ್ರಕಾಶ್ ಕವಡೆ, ಕೀರ್ತನ್ ಲಾಡ್ ಮತ್ತು ಸಮಾಜದ ಅನೇಕ ಹಿರಿಯರು ಭಾಗವಹಿಸಲಿದ್ದಾರೆ.
ಅದಿತ್ಯವಾರ ಸಂಜೆ ಸಮಾರೋಪ ಸಮಾರಂಭದ ನಡೆಯಲ್ಲಿದ್ದು ವಿಜೇತರಿಗೆ ನಗದು ಬಹುಮಾನ, ಶಾಶ್ವತ ಫಲಕ, ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು ಎಂದು ಸಮಾಜದ ಅಧ್ಯಕ್ಷ ಶುಭದರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ