ಕ್ರೀಡೆಯೂ ಮಾನಸಿಕ ಹಾಗೂ ದೈಹಿಕ ಸಾಮಾಥ್ಯ೯ ಹೆಚ್ಚಿಸುತ್ತದೆ

Picture of RB NEWS

RB NEWS

Bureau Report

ಮೂಡುಬಿದಿರೆ: ಮಹಾವೀರ ಕಾಲೇಜಿನ 2024ನೇ ಸಾಲಿನ ತ್ರಿಲೋತ್ಸವ ನವೆಂಬರ್ 29ರಂದು ಕಾಲೇಜು ಕ್ರೀಡಾಂಗಣದಲ್ಲಿ ಜರುಗಿತು.

ಮೂಡುಬಿದಿರೆ ವಲಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್ ಪಿ ಕಾರ್ಯಕ್ರಮವನ್ನು ಉದ್ಘಾಟಿಸಿ, ದೇಶಕ್ಕಾಗಿ ಬಲಿದಾನಗೈದ ಯೋಧರನ್ನು, ಬದುಕನ್ನು ಇತರರ ಏಳಿಗೆಗಾಗಿ ಸವೆಸುವ ಕೃಷಿಕರನ್ನು ನಾವು ಸದಾ ಸ್ಮರಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಈ ದಿಸದಲ್ಲಿ ಹೆಚ್ಚು ಕಾರ್ಯಾನ್ವಿತರಾಗಬೇಕು. ಕ್ರೀಡೆಯೂ ಮಾನಸಿಕ ಹಾಗೂ ದೈಹಿಕ ಸಾಮಾಥ್ಯ೯ ಹೆಚ್ಚಿಸುತ್ತದೆ
ಕ್ರೀಡೆಯಲ್ಲಿ ಪಾರಮ್ಯವನ್ನು ಹೊಂದಿ ಸಾಧನೆಯ ಶಿಖರಕ್ಕೆ ಏರಿ ಮಾದರಿಯಾಗಬೇಕು ಎಂದು ಹಾರೈಸಿದರು.
.

ವೇದಿಕೆಯಲ್ಲಿ ಕಾಲೇಜು ಆಡಳಿತ ಮಂಡಳಿಯ ಚೇರ್ಮನ್ ಮಾಜಿ ಸಚಿವ ಕೆ ಅಭಯ್ ಚಂದ್ರ ಜೈನ್, ಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯ, ಎಂ ಕೆ ಅನಂತರಾಜ್ ಶಾರೀರಿಕ ಕಾಲೇಜಿನ ಪ್ರಾಂಶುಪಾಲ ಧನಂಜಯ್ ಶೆಟ್ಟಿ, ಎಸ್‌ಎನ್ಎಂ ಪಾಲಿಟೆಕ್ನಿಕ್ ಪ್ರಾಂಶುಪಾಲ ಜೆಜೆ ಪಿಂಟೋ, ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿ ಹರೀಶ್, ಕ್ರೀಡಾಧಿಕಾರಿ ಅಕ್ಷಿತ್ ರೈ, ಮಹಾವೀರ ಕಾಲೇಜು ಪ್ರಾಂಶುಪಾಲ ಡಾ. ರಾಧಾಕೃಷ್ಣ ಹಾಜರಿದ್ದರು.

ಇದೇ ಸಂದರ್ಭದಲ್ಲಿ ಸಾಫ್ಟ್ ಬಾಲ್ ನಲ್ಲಿ ಅಂತರ್ ವಿಶ್ವವಿದ್ಯಾಲಯ ಕಾಲೇಜುಗಳ ನಡುವೆ ನಡೆದ ಸ್ಪರ್ಧೆಯಲ್ಲಿ ವಿಜೇತರಾದ ಜುನಿತ್, ಶಶಿಧರ್, ನವ್ಯ, ಶ್ರೀಜಾ ಇತ್ಯಾದಿಯರಿಗೆ ಪ್ರಶಸ್ತಿ ಫಲಕವನ್ನು ವಿತರಿಸಲಾಯಿತು.

ವಿದ್ಯಾರ್ಥಿಗಳಾದ ರಾಯ್ಸ್ಟನ್ ಸ್ವಾಗತಿಸಿದರು. ಶ್ರುತಿ ಪೆರಿ ಅತಿಥಿಗಳ ಪರಿಚಯ ಗೈದರು. ಕ್ರೀಡಾ ಕಾರ್ಯದರ್ಶಿ ಪ್ರಣೇಶ್, ಶ್ರಾವ್ಯ ಕಾರ್ಯಕ್ರಮ ನಿರ್ವಹಿಸಿದರು. ಪ್ರಜ್ಞಾ ವಂದಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top