ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ ಕಾರ್ಕಳದ ಆಶ್ರಯದಲ್ಲಿ ಶಿರಸಿಯಲ್ಲಿ ಪ್ರೇರಣಾ ಶಿಬಿರ – 2025

Picture of RB NEWS

RB NEWS

Bureau Report


ಉದ್ಘಾಟಕರಾಗಿ ಆಗಮಿಸಿದ ಶಿರಸಿ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕÀ ಎಂ.ಎಸ್ ಪ್ರಸನ್ನಕುಮಾರ್‌ರವರು ಪ್ರೇರಣಾ ಶಿಬಿರ ಸಾಗಿ ಬಂದ ಹಾದಿಯ ಕುರಿತು ಮಾತನಾಡಿದರು. ಕಳೆದ ಬಾರಿಯ ವಾರ್ಷಿಕ ಫಲಿತಾಂಶದಲ್ಲಿ ಶಿರಸಿ ಶೈಕ್ಷಣಿಕಜಿಲ್ಲೆಯ 39 ವಿದ್ಯಾರ್ಥಿಗಳು ರಾಜ್ಯದ ಮೊದಲ 10 ಅತ್ಯುತ್ತಮ ಅಂಕಗಳೊAದಿಗೆ ಗುರುತಿಸಿಕೊಂಡಿದ್ದು, ಈ ಪ್ರೇರಣಾ ಶಿಬಿರಕ್ಕೆ ಸಹಕರಿಸುತ್ತಿರುವ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ, ಕಾರ್ಕಳದ ಸಹಕಾರವನ್ನು ಸ್ಮರಿಸಿದರು.
ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ ಕಾರ್ಕಳದ ಸಹ ಸಂಸ್ಥಾಪಕ ಗಣಪತಿ ಭಟ್‌ಕೆ.ಎಸ್‌ರವರು ಎಸ್.ಎಸ್.ಎಲ್.ಸಿ ಯ ಪ್ರತಿಭಾನ್ವಿತ ವಿದ್ಯಾರ್ಥಿಗಳು ಹೆಚ್ಚು ಅಂಕಗಳನ್ನು ಪಡೆಯುವ ಸಲುವಾಗಿ ವಿಶೇಷತರಬೇತಿ ನೀಡುವ ಈ ಪ್ರೇರಣಾ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳುವಂತಾಗಲಿ ಎಂದು ಶುಭ ಹಾರೈಸಿದರು.
ವಿದ್ಯಾರ್ಜನೆಯು ಪ್ರಾಮಾಣಿಕ ಪ್ರಯತ್ನ, ನಿರಂತರ ಶ್ರಮದ ನೆಲೆಯಲ್ಲಿ ಪ್ರಾಪ್ತ ವಾಗುವುದುಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಎಂ.ಎಸ್ ಹೆಗಡೆ, ಪ್ರಾಚಾರ್ಯರು, ಡಯಟ್ ಶಿರಸಿ ಇವರು ಮಾತನಾಡಿ ಸ್ಪರ್ಧಾತ್ಮಕಜಗತ್ತಿನಲ್ಲಿ ಗುರುತಿಸಿಕೊಳ್ಳಲು ಇಂತಹ ಪ್ರೇರಣಾ ಶಿಬಿರಗಳು ಪ್ರೇರಣೆಯಾಗಲಿ ಎಂದರು.
ಸದಾನಂದ ಸ್ವಾಮಿ, ಶಿಕ್ಷಣಾಧಿಕಾರಿಗಳು, ಉಪನಿರ್ದೇಶಕರಕಛೇರಿ, ಶಿರಸಿ ಇವರು ವಿದ್ಯಾರ್ಥಿಗಳ ಪ್ರಯತ್ನ, ಶಿಕ್ಷಕರ ಪ್ರಯತ್ನದಜೊತೆಜೊತೆಗೆ ಪ್ರೇರಣ ಶಿಬಿರವು ವಿದ್ಯಾರ್ಥಿಗಳ ಉತ್ತಮ ಫಲಿತಾಂಶಕ್ಕೆ ಸಹಕಾರಿಯಾಗಲಿದೆ ಎಂದರು.
ಲಯನ್ಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷÀ ಲಯನ್ ಲೋಕೇಶ್ ಹೆಗಡೆಯವರು ಪ್ರೇರಣಾ ಶಿಬಿರದಲ್ಲಿ ಸಂಸ್ಕಾರಯುತ ಶಿಕ್ಷಣ ಪಡೆಯಲಿರುವ ವಿದ್ಯಾರ್ಥಿಗಳು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವಂತಾಗಲಿ ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ಮುರಾರಿ ಭಟ್, ವ್ಯವಸ್ಥಾಪಕರು, ರಾಮಕೃಷ್ಣ ಸ್ಟುಡೆಂಟ್ ಹೋಮ್, ಶಿರಸಿ, ಲಯನ್ಸ್ ಪ್ರೌಢಶಾಲಾ ಮುಖ್ಯ ಶಿಕ್ಷಕ ಶಶಾಂಕ್ ಹೆಗಡೆರವರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಶಿರಸಿ ಶೈಕ್ಷಣಿಕಜಿಲ್ಲಾ 6 ತಾಲೂಕಿನ ಕನ್ನಡ ಮತ್ತು ಆಂಗ್ಲ ಮಾಧ್ಯಮದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು, ಪಾಲಕ ಪೋಷಕರು, ಕ್ರಿಯೇಟಿವ್ ಶಿಕ್ಷಣ ಸಂಸ್ಥೆ ಕಾರ್ಕಳದ ಪಿ ಆರ್ ಓ ಲಿಶಾನ್‌ಗೌಡ ಮತ್ತಿತರರು ಪಾಲ್ಗೊಂಡಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top