ಕೋಟೆಕಾರು ಶ್ರೀ ಅಯ್ಯಪ್ಪ ಮಂದಿರ ಟ್ರಸ್ಟ್ (ರಿ.) ಮತ್ತು ಶ್ರೀ ಅಯ್ಯಪ್ಪ ಸೇವಾ ಸಮಿತಿ ಇದರ 50 ನೇ ವಾರ್ಷಿಕೋತ್ಸವ ಮತ್ತು ಶ್ರೀ ಅಯ್ಯಪ್ಪ ದೀಪೋತ್ಸವದ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯ ಬಿಡುಗಡೆ

Picture of RB NEWS

RB NEWS

Bureau Report

ಕೋಟೆಕಾರು : ಶ್ರೀ ಅಯ್ಯಪ್ಪ ಮಂದಿರ ಟ್ರಸ್ಟ್ (ರಿ.) ಮತ್ತು ಶ್ರೀ ಅಯ್ಯಪ್ಪ ಸೇವಾ ಸಮಿತಿ ಇದರ 50 ನೇ ವಾರ್ಷಿಕೋತ್ಸವಮತ್ತು ಶ್ರೀ ಅಯ್ಯಪ್ಪ ದೀಪೋತ್ಸವದ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯ ಬಿಡುಗಡೆ

ಮಂಗಳೂರು : ಕೋಟೆಕಾರು ಶ್ರೀ ಅಯ್ಯಪ್ಪ ಮಂದಿರ ಟ್ರಸ್ಟ್ (ರಿ.) ಮತ್ತು ಶ್ರೀ ಅಯ್ಯಪ್ಪ ಸೇವಾ ಸಮಿತಿ ಇದರ 50 ನೇ ವಾರ್ಷಿಕೋತ್ಸವ ಮತ್ತು ಶ್ರೀ ಅಯ್ಯಪ್ಪ ದೀಪೋತ್ಸವದ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮವು ಕೋಟೆಕಾರು ಶ್ರೀ ಅಯ್ಯಪ್ಪ ಮಂದಿರ ಇದರ ಆಡಳಿತ ಮೊಕ್ತೇಸರು ಆದ ಶ್ರೀ ಲಿಂಗಪ್ಪ ಗಟ್ಟಿ( ಗುರುಸ್ವಾಮಿ) ಸಂಕೋಳಿಗೆ ಬಿಡುಗಡೆ ಗೊಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಟ್ರಸ್ಟ್ ಪ್ರದಾನ ಕಾರ್ಯದರ್ಶಿ ಸಂತೋಷ್ ಕುಮಾರ್‌ ಶೆಟ್ಟಿ ಈ ಕುರಿತು ಮಾಹಿತಿ ನೀಡಿ ನವಂಬರ್ 28 ರಿಂದ ಡಿಸೆಂಬರ್ 02ರ ತನಕ ನಡೆಯುವ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮದ ವಿವರವನ್ನು ನೀಡಿದರು.

ಶ್ರೀ ಅಯ್ಯಪ್ಪ ಸೇವಾ ಸಮಿತಿಯ ಅಧ್ಯಕ್ಷ ಶ್ರೀಧರ ಶೆಟ್ಟಿ ಉಳ್ಳಾಲ ಬೈಲು ಕಾರ್ಯಕ್ರಮಕ್ಕೆ ಸರ್ವರ ಸಹಾಕಾರ ಯಾಚಿಸಿದರು.

ಸಮಿತಿಯ ಕಾರ್ಯಾಧ್ಯಕ್ಷ ಲಕ್ಷಣ್ ಕಟ್ಟಿಮನಿ,ಟ್ರಸ್ಟ್‌ನ ಕೋಶಾಧಿಕಾರಿ ನಾರಾಯಣ ಕಾಚಾರು,ಸಮಿತಿಯ ಪ್ರದಾನ ಕಾರ್ಯದರ್ಶಿ ಅಜಯ್ ಕುಂಪಲ,ಉಪಾಧ್ಯಕ್ಷರಾದ ಜನಾರ್ದನ ಗಟ್ಟಿ ಸಂಕೋಳಿಗೆ, ಶರಣಪ್ಪ ಕೋಟೆಕಾರು,ಮೋಹನ್ ಕೆ.ಟಿ.ಸಿ,ಟ್ರಸ್ಟಿ ಪ್ರಭಾಕರ್ ಕೊಲ್ಯ ಉಪಸ್ಥಿತಿರಿದ್ದರು.‌ ಟ್ರಸ್ಟಿ,ಸಾಂಸ್ಕೃತಿಕ ಸಂಚಾಲಕ ಪ್ರವೀಣ್ ಬಸ್ತಿ ಸ್ವಾಗತಿಸಿ, ಧನ್ಯವಾದ ನೀಡಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top