ಪುತ್ತೆ ಶ್ರೀ ಸೋಮನಾಥೇಶ್ವರ ದೇವಸ್ಥಾನ: ಕೊಡಿಮರಕ್ಕೆ ತಾಮ್ರದ ಹೊದಿಕೆ
ವರದಿ : ರಾಯಿ ರಾಜಕುಮಾರ ಮೂಡುಬಿದಿರೆ

ಮೂಡುಬಿದಿರೆ: ಜನವರಿ 28 ರಂದು ಮಧ್ಯಾಹ್ನದ ಸುಮುಹೂರ್ತದಲ್ಲಿ ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಸ್ಥಾನದ ನೂತನ ಕೊಡಿ ಮರಕ್ಕೆ ತಾಮ್ರದ ಹೊದಿಕೆ ಮುಚ್ಚುವ ಕಾರ್ಯ ಪ್ರಾರಂಭಗೊಂಡಿದೆ.
ಸ್ಥಳೀಯ ಹಲವಾರು ಆಸಕ್ತರು ಈ ಸಂದರ್ಭದಲ್ಲಿ ಹಾಜರಿದ್ದು ಸಹಕರಿಸಿದರು. ಇದು ಸುತ್ತಮುತ್ತಲಿನ ಹದಿನೆಂಟು ಮಾಗಣೆಗಳಿಗೆ ಪ್ರಧಾನ ದೇವಾಲಯವಾಗಿದೆ. ಅರಸೊತ್ತಿಗೆ ಕೊನೆಗೊಂಡಿದ್ದರೂ ಸುಮಾರು 70 ಕ್ಕೂ ಹೆಚ್ಚು ಗ್ರಾಮಗಳ ವ್ಯಾಪ್ತಿಯನ್ನು ಹೊಂದಿದೆ.





































