ಕೆಸರ್ಡ್ ಒಂಜಿ ದಿನ: ಕೃಷಿಯ ಬಗ್ಗೆ ಮಾಹಿತಿ

ಕಾರ್ಕಳ : ರೋಟರಿ ಕ್ಲಬ್ ಕಾರ್ಕಳ ರೋಟರಾಕ್ಟ್ ಕ್ಲಬ್ ಕಾರ್ಕಳ ಆನ್ಸ್ ಕ್ಲಬ್ ಕಾರ್ಕಳ ಇವರ ಸಹಯೋಗದೊಂದಿಗೆ ಮಿಯ್ಯಾರು ಬೋರ್ಕಟ್ಟೆ ತಾವರೆಗೇಟ್ ಬಳಿಯ ಲ್ಲಿರುವ ಗದ್ದೆಯಲ್ಲಿ ಕೆಸರ್ಡ್ ಒಂಜಿ ದಿನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು .
ರಾಷ್ಟ್ರೀಯ ಸೇವಾ ಯೋಜನೆ ಭುವನೇಂದ್ರ ಕಾಲೇಜು ಕಾರ್ಕಳ ಇಲ್ಲಿನ ವಿದ್ಯಾರ್ಥಿಗಳೊಂದಿಗೆ ನೇಜಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಮುಖ್ಯ ಅತಿಥಿಯಾಗಿ ಕುಕ್ಕುಂದೂರಿನ ಕೃಷಿಕ ನಿವೃತ್ತ ಮುಖ್ಯೋಪಾಧ್ಯಾಯ ವಿಶ್ವನಾಥ್ ಪೈ ಹಾಗೂ ಶಿಕ್ಷಕಿ ಅಸ್ಮಾ ಬಾನು ಕೃಷಿಯ ಬಗ್ಗೆ ಮಾಹಿತಿಯನ್ನು ನೀಡಿದರು.
ನಿಕಟಪೂರ್ವ ಅಸಿಸ್ಟೆಂಟ್ ಗವರ್ನರ್ ರೊಟೇರಿಯನ್ ಶೈಲೇಂದ್ರ ರಾವ್ ಉದ್ಘಾಟಿಸಿದರು.
ಕೃಷಿಕರಾದ ರೇವತಿ ಮತ್ತು ವಿಶ್ವನಾಥ್ ಪೈ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಯೋಗೀಶ್ ಪ್ರಭು, ಕಾರ್ಯದರ್ಶಿಗಳಾದ ಗಣೇಶ್ ಸಾಲ್ಯಾನ್ ರೋಟರಾಕ್ಟ್ ಅಧ್ಯಕ್ಷ ಸುನಿಲ್ ನಾಯಕ್ ಆನ್ಸ್ ಅದಕ್ಷೆ ವಿನಯ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು





































