[t4b-ticker]

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶಯುಡಿಎಫ್ ಮೇಲು “ಕೈ” : ಬಲಿಷ್ಠ ಕೋಟೆಯಲ್ಲಿ ಮುಳುವಾದ ಎಲ್ ಡಿಎಫ್ : ರಾಜಧಾನಿಯಲ್ಲಿ ಅರಳಿದ ತಾವರೆ

Picture of RB NEWS

RB NEWS

Bureau Report

ತಿರುವನಂತಪುರಂ : ದೇವರಮಾಡು ಎಂದೇ ಪ್ರಸಿದ್ಧಿ ಹೊಂದಿದ್ದ ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಲ್ಲಿ ವಿರೋಧ ಪಕ್ಷಗಳ ಒಕ್ಕೂಟವಾದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸ್ಪಷ್ಟ ಮೇಲು”ಕೈ” ಸಾಧಿಸಿದೆ. ಈ ಮೂಲಕ ರಾಜ್ಯ ರಾಜಕೀಯದಲ್ಲಿ ಗಮನಾರ್ಹ ಬದಲಾವಣೆಯ ಸೂಚನೆ ನೀಡಿದೆ.

:

ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ಪುರಸಭೆ ಹಾಗೂ ನಗರ ಮಹಾನಗರ ಪಾಲಿಕೆ, ಎಲ್ಲದರಲ್ಲೂ ಕಾಂಗ್ರೆಸ್-ಮುಸ್ಲಿಂ ಲೀಗ್ ನೇತೃತ್ವದ ಯುಡಿಎಫ್ ಹೆಚ್ಚಿನ ಸ್ಥಾನಗಳನ್ನು ಗಳಿಸಿದೆ. ಆಡಳಿತರೂಢ ಸಿಪಿಐ(ಎಂ) ನೇತೃತ್ವದ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ (ಎಲ್‌ಡಿಎಫ್) ಕೆಲವೆಡೆ ತನ್ನ ಸಾಂಪ್ರದಾಯಿಕ ಬಲಿಷ್ಠ ಕೋಟೆಗಳನ್ನೂ ಉಳಿಸಿಕೊಳ್ಳಲು ಹೆಣಗಾಡಿದೆ.

ಮುಂದಿನ ವರ್ಷ (2026) ನಡೆಯಲಿರುವ ಕೇರಳದ ವಿಧಾನಸಭಾ ಚುನಾವಣೆಗೆ ಈ ಚುನಾವಣೆ ದಿಕ್ಕೂಚಿ ಎಂದು ಪರಿಗಣಿಸಲಾಗಿದೆ. ಇಂದಿನ ಫಲಿತಾಂಶ ರಾಜಕೀಯ ಪಲ್ಲಟಕ್ಕೆ ಕಾರಣವಾಗಲಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಇದರ ಜೊತೆಗೆ ತಿರುವನಂತಪುರಂ ಮಹಾನಗರ ಪಾಲಿಕೆ, ವಕ್ಸ್ ಭೂಮಿ ವಿವಾದದ ಕೇಂದ್ರವಾಗಿರುವ ಮುನಂಬಂನಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಗೆಲುವು ದಾಖಲಿಸಿರುವುದು, ಮುಂದಿನ ಚುನಾವಣೆಯಲ್ಲಿ ಎನ್‌ಡಿಎಯ ಸೀಮಿತ.

ಕೇರಳದ 6 ಮಹಾನಗರ ಪಾಲಿಕೆಗಳು, 87 ಪುರಸಭೆಗಳು, 14 ಜಿಲ್ಲಾ ಪಂಚಾಯತ್‌ಗಳು, 152 ತಾಲೂಕು ಪಂಚಾಯತ್‌ಗಳು ಮತ್ತು 941 ಗ್ರಾಮ ಪಂಚಾಯತ್‌ಗಳಿಗೆ 2025ರ ಡಿಸೆಂಬರ್ 9 ಮತ್ತು 11ರಂದು ಎರಡು ಹಂತಗಳಲ್ಲಿ ಮತದಾನ ನಡೆದಿತ್ತು. ಅದರ ಫಲಿತಾಂಶ ಇಂದು ಪ್ರಕಟಗೊಂಡಿದೆ.

6 ಮಹಾನಗರ ಪಾಲಿಕೆಗಳಾದ ತಿರುವನಂತಪುರಂ, ಕೊಲ್ಲಂ, ಕೊಚ್ಚಿ, ತ್ರಿಶೂರ್, ಕಣ್ಣೂರು, ಕೋಝಿಕ್ಕೋಡ್ ಪೈಕಿ ಕೊಲ್ಲಂ, ಕೊಚ್ಚಿ, ತ್ರಿಶೂರ್ ಮತ್ತು ಕಣ್ಣೂರು ಈ ನಾಲ್ಕರಲ್ಲಿ ಯುಡಿಎಫ್ ಜಯಭೇರಿ ಸಾಧಿಸಿದೆ.

ಇದು ಗಮನಾರ್ಹ ಗೆಲುವು. ಏಕೆಂದರೆ, 2020ರಲ್ಲಿ ಎಲ್‌ಡಿಎಫ್‌ ಗೆದ್ದಿದ್ದ ಹಲವು ಮಹಾನಗರ ಪಾಲಿಕೆಗಳನ್ನು ಯುಡಿಎಫ್ ಮರಳಿ ಪಡೆದುಕೊಂಡಿದೆ. ವಿಶೇಷವಾಗಿ ಕಣ್ಣೂರು ಮತ್ತು ತ್ರಿಶೂರ್ ಪಾಲಿಕೆಗಳು ದೀರ್ಘಕಾಲದಿಂದ ಎಲ್‌ಡಿಎಫ್‌ನ ಬಲಿಷ್ಠ ಕೋಟೆಗಳಾಗಿದ್ದವು.

ಬಿಜೆಪಿ ನೇತೃತ್ವದ ಎನ್‌ಡಿಎ ಮೊದಲ ಬಾರಿಗೆ ತಿರುವನಂತಪುರಂ ಮಹಾನಗರ ಪಾಲಿಕೆಯನ್ನು ಗೆದ್ದುಕೊಂಡಿದೆ. ಇದು ಬಿಜೆಪಿಗೆ ಕೇರಳದ ನಗರ ರಾಜಕಾರಣದಲ್ಲಿ ಮಹತ್ವದ ಮುಂದಡಿಯಾಗಿದೆ.

ಎಲ್‌ಡಿಎಫ್‌ ಕೇವಲ ಒಂದು ಮಹಾನಗರ ಪಾಲಿಕೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕೋಝಿಕ್ಕೋಡ್ ಪಾಲಿಕೆಯಲ್ಲಿ ಎಲ್‌ಡಿಎಫ್ ಗೆದ್ದಿದೆ. ಆದರೆ, ಅಲ್ಲಿಯೂ ಯುಡಿಎಫ್ ಮತ್ತು ಎನ್‌ಡಿಎ ಪ್ರಬಲ ಪೈಪೋಟಿ ಕೊಟ್ಟಿದೆ.

ಒಟ್ಟು 86 ಪುರಸಭೆಗಳ (2020ರಲ್ಲಿ 87 ಇದ್ದವು, ಒಂದು ಕಡಿಮೆಯಾಗಿದೆ) ಪೈಕಿ 54 ಪುರಸಭೆಗಳನ್ನು ಯುಡಿಎಫ್ ಗೆದ್ದುಕೊಂಡಿದೆ. ಇದು ನಗರ ಮತ್ತು ಅರೆ-ನಗರ ಪ್ರದೇಶಗಳಲ್ಲಿ ಯುಡಿಎಫ್‌ನ ಪ್ರಾಬಲ್ಯ ಹೆಚ್ಚಳವಾಗಿರುವುದನ್ನು ತೋರಿಸುತ್ತದೆ.

ಎರ್ನಾಕುಳಂ, ಆಲಪ್ಪುಝ, ಮಲಪ್ಪುರಂ, ಕೊಟ್ಟಾಯಂ, ಪಾಲಕ್ಕಾಡ್ ಪುರಸಭೆಗಳಲ್ಲಿ ಯುಡಿಎಫ್ ಬಲಿಷ್ಠವಾಗಿ ಗೆದ್ದಿದೆ. ಹಿಂದೆ ಕಳೆದುಕೊಂಡಿದ್ದ ಪತ್ತನಂತಿಟ್ಟ ಮತ್ತು ಇಡುಕ್ಕಿ ಪುರಸಭೆಗಳನ್ನು ಮರಳಿ ಪಡೆದಿದೆ.

ಎಲ್‌ಡಿಎಫ್ ತನ್ನ ಸಾಂಪ್ರದಾಯಿಕ ಬಲಿಷ್ಠ ಕೇಂದ್ರಗಳ ಪೈಕಿ ಕೆಲವನ್ನು ಉಳಿಸಿಕೊಂಡಿದೆ. ತಿರುವನಂತಪುರಂನ ಕೆಲ ಭಾಗಗಳು, ಕೊಲ್ಲಂ ಕೋಝಿಕ್ಕೋಡ್ ಮತ್ತು ಕಣ್ಣೂರಿನಲ್ಲಿ ಗೆಲುವು ದಾಖಲಿಸಿದೆ. ಆದರೆ, ಒಟ್ಟಾರೆಯಾಗಿ 2020ಕ್ಕಿಂತ ಕಡಿಮೆ ಸ್ಥಾನಗಳನ್ನು ಪಡೆದಿದೆ.

ಎರ್ನಾಕುಳಂ, ಆಲಪ್ಪುಝ, ಮಲಪ್ಪುರಂ, ಕೊಟ್ಟಾಯಂ, ಪಾಲಕ್ಕಾಡ್ ಪುರಸಭೆಗಳಲ್ಲಿ ಯುಡಿಎಫ್ ಬಲಿಷ್ಠವಾಗಿ ಗೆದ್ದಿದೆ. ಹಿಂದೆ ಕಳೆದುಕೊಂಡಿದ್ದ ಪತ್ತನಂತಿಟ್ಟ ಮತ್ತು ಇಡುಕ್ಕಿ ಪುರಸಭೆಗಳನ್ನು ಮರಳಿ ಪಡೆದಿದೆ.

ಎಲ್‌ಡಿಎಫ್ ತನ್ನ ಸಾಂಪ್ರದಾಯಿಕ ಬಲಿಷ್ಠ ಕೇಂದ್ರಗಳ ಪೈಕಿ ಕೆಲವನ್ನು ಉಳಿಸಿಕೊಂಡಿದೆ. ತಿರುವನಂತಪುರಂನ ಕೆಲ ಭಾಗಗಳು, ಕೊಲ್ಲಂ ಕೋಝಿಕ್ಕೋಡ್ ಮತ್ತು ಕಣ್ಣೂರಿನಲ್ಲಿ ಗೆಲುವು ದಾಖಲಿಸಿದೆ. ಆದರೆ, ಒಟ್ಟಾರೆಯಾಗಿ 2020ಕ್ಕಿಂತ ಕಡಿಮೆ ಸ್ಥಾನಗಳನ್ನು ಪಡೆದಿದೆ.

ಪುರಸಭೆಗಳಲ್ಲಿ ಎನ್‌ಡಿಎ ದೊಡ್ಡ ಮಟ್ಟದ ಗೆಲುವು ಪಡೆದಿಲ್ಲ. ಆದರೂ, ಕೆಲವೆಡೆ ಗಮನಾರ್ಹ ಪ್ರದರ್ಶನ ತೋರಿದೆ. ಇನ್ನೂ ಕೆಲವೆಡೆ ಪ್ರಬಲ ಪೈಪೋಟಿ ನೀಡಿದೆ. ಪಾಲಕ್ಕಾಡ್ ಮತ್ತು ತ್ರಿಪುಣಿತ್ತುರದಲ್ಲಿ ಎನ್‌ಡಿಎ ಗೆದ್ದಿದೆ. ತೊಡುಪುಝ ಮತ್ತು ಕಾಂಞಂಗಾಡ್‌ನಲ್ಲಿ ಪ್ರಬಲ ಪೈಪೋಟಿ ನೀಡಿದೆ

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top