[t4b-ticker]

ಕೇಂದ್ರ ಚುನಾವಣಾ ಆಯುಕ್ತ ಅರುಣ್ ಗೋಯಲ್ ರಾಜೀನಾಮೆ

Picture of RB NEWS

RB NEWS

Bureau Report

ದೆಹಲಿ: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದ ವೇಳೆ ಕೇಂದ್ರ ಚುನಾವಣಾ ಆಯುಕ್ತ ಅರುಣ್ ಗೋಯಲ್ ಅವರು ರಾಜೀನಾಮೆ ನೀಡಿದ್ದಾರೆ.

2027ರವರೆಗೆ ಅರುಣ್ ಗೋಯಲ್ ಅವರ ಅಧಿಕಾರಾವಧಿ. ಇದೀಗ ಗೋಯಲ್ ಅವರ ರಾಜೀನಾಮೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಗೀಕರಿಸಿದ್ದಾರೆ.
ಇತ್ತ ಗೋಯಲ್​ ಅವರ ರಾಜೀನಾಮೆಯಿಂದಾಗಿ ಇದೀಗ ಚುನಾವಣಾ ಸಮಿತಿಯಲ್ಲಿ ಎರಡು ಚುನಾವಣಾ ಆಯುಕ್ತ ಸ್ಥಾನಗಳು ಖಾಲಿಯಾಗಿವೆ. ಮುಂದಿನ ವಾರ ಲೋಕಸಭಾ ಚುನಾವಣೆ ದಿನಾಂಕವನ್ನು ಘೋಷಿಸುವ ಸಾಧ್ಯತೆಗಳಿವೆ. ಆದರೆ ಗೋಯಲ್​ ಅವರ ರಾಜೀನಾಮೆಯಿಂದ ಚುನಾವಣಾ ದಿನಾಂಕ ಘೋಷಣೆ ಮತ್ತಷ್ಟು ಮುಂದೆ ಹೋಗಬಹುದು ಎಂದು ವರದಿಯಾಗಿದೆ.

ಅರುಣ್ ಗೋಯಲ್​ ಅವರು ಪಂಜಾಬ್ ಕೇಡರ್‌ನಲ್ಲಿ 1985ರ ಬ್ಯಾಚ್​ನ ಐಎಎಸ್ ಅಧಿಕಾರಿ ಆಗಿದ್ದರು. ನವೆಂಬರ್ 18, 2022 ರಂದು ಸ್ವಯಂ ನಿವೃತ್ತಿ ಪಡೆದರು. ಬಳಿಕ ಚುನಾವಣಾ ಆಯುಕ್ತರಾಗಿ ನೇಮಕಗೊಂಡರು. ಆದರೆ ಅರುಣ್ ಗೋಯಲ್​ರ ನೇಮಕವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top