ಕೆ. ಪ್ರಸಾದ್ ಇವರಿಗೆ ಶುಭವಿದಾಯ

Picture of RB NEWS

RB NEWS

Bureau Report

ಕೆ. ಪ್ರಸಾದ್ ಇವರಿಗೆ ಶುಭವಿದಾಯ

ಕಾರ್ಕಳ : ಶ್ರೀಮದ್ ಭುವನೇಂದ್ರ ಪ್ರೌಢಶಾಲೆಯಲ್ಲಿ 41 ವರ್ಷಗಳ ಕಾಲ ದ್ವಿತೀಯ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿರುವ ಕೆ. ಪ್ರಸಾದ್ ಇವರಿಗೆ ಶುಭವಿದಾಯ ನೀಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ವ್ಯಾಸರಘುಪತಿ ಸಂಸ್ಕೃತ ವಿದ್ಯಾಶಾಲಾ ಫಂಡಿನ ಅಧ್ಯಕ್ಷ ಎ. ಯೋಗೀಶ ಹೆಗ್ಡೆಯವರು ವಹಿಸಿ ದೀರ್ಘಕಾಲ ಸಂಸ್ಥೆಯಲ್ಲಿ ಸೇವೆಗೈದ ಪ್ರಸಾದ್ ಇವರಿಗೆ ಅಭಿನಂದನೆ ಸಲ್ಲಿಸಿದರು.

ಮುಖ್ಯ ಅತಿಥಿ ಎಸ್. ನಿತ್ಯಾನಂದ ಪೈಯವರು ನಿವೃತ್ತರ ಕರ್ತವ್ಯ ನಿಷ್ಠೆಯ ಜೊತೆಗೆ ಅವರು ಮಾಡಿದ ಸಾಮಾಜಿಕ ಸೇವೆಯನ್ನು ಶ್ಲಾಘಿಸಿ ಶುಭಹಾರೈಸಿದರು.

ಸಂಚಾಲಕ ನರೇಂದ್ರ ಕಾಮತ್ ಕೆ. ಇವರ ಉಪಸ್ಥಿತಿಯಲ್ಲಿ ಮುಖ್ಯಶಿಕ್ಷಕ ಆರ್. ನಾರಾಯಣ ಶೆಣೈಯವರು ಸ್ವಾಗತಿಸಿದರು. ವಿದ್ಯಾ ಕಿಣಿ, ಸಂಜಯ್ ಕುಮಾರ್ ಮತ್ತು ಶೈಲೇಂದ್ರ ಶೆಣೈಯವರು ಎಲ್ಲ ಸಿಬ್ಬಂದಿಗಳ ಪರವಾಗಿ ನಿವೃತ್ತರಿಗೆ ಶುಭಾಶಯದ ಮಾತುಗಳನ್ನಾಡಿದರು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಪೂರ್ಣಿಮಾ ಪ್ರಭು ಕಾರ್ಯಕ್ರಮ ನಿರ್ವಹಿಸಿದರು. ದಿವ್ಯಕುಮಾರ್ ವಂದಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top