ಕೆ ಎಂ ಎಫ್ ಹೊಸ ಬಣದಿಂದ ಅಧ್ಯಕ್ಷ ಬಣ್ಣ ಸಿಂಗರಿಸುವಲ್ಲಿ ಉದಯ ಕೋಟ್ಯಾನ್ ಸಫಲರಾಗುವರೇ..?ಬೆಳಪು ದೇವಿಪ್ರಸಾದ್ ಶೆಟ್ಟಿ ಬಹುತೇಕ ಖಚಿತ!

Picture of RB NEWS

RB NEWS

Bureau Report

ಎಂ. ಎನ್. ರಾಜೇಂದ್ರ ಕುಮಾರ್ ಬಣದಲ್ಲಿ ಗುರುತಿಸಿಕೊಂಡು ನಾಮಪತ್ರ ಸಲ್ಲಿಸಿದ್ದ ಬಿಜೆಪಿಯ ಉಡುಪಿ ಜಿಲ್ಲಾ ಕಾರ್ಯದರ್ಶಿ ಇರ್ವತ್ತೂರು ಉದಯ ಎಸ್. ಕೋಟ್ಯಾನ್ ಅವರೀಗ ಕೆ ಎಂ ಎಫ್ ನಿರ್ದೇಶಕ ಸ್ಥಾನಕ್ಕೆ ಅಚ್ಚರಿಯ ಫಲಿತಾಂಶದಲ್ಲಿ ಗೆದ್ದು ಬೀಗುವುದರೊಂದಿಗೆ ಬಿಜೆಪಿಗೆ ಸೆಡ್ಡು ಹೊಡೆದಿದ್ದಾರೆ.

ಉದಯ ಎಸ್. ಕೋಟ್ಯಾನ್

ಹೊಸ ಗುಂಪು ಸೇರಿ ರಾಜಕೀಯದ ಜಾತಿ ಕೆಡದಂತೆ ಶ್ರಮವಹಿಸಿ ಗೆದ್ದಿರುವುದು ಹೆಮ್ಮೆಯ ವಿಚಾರ. ಮುಖ್ಯವಾಗಿ ಉಡುಪಿ ಜಿಲ್ಲೆಯೊಳಗಿನ ಬಿಜೆಪಿ ಬಣದ ಎಲ್ಲ ಅಭ್ಯರ್ಥಿಗಳೂ ಸೋತಿದ್ದಾರೆ. ಕಾಂಗ್ರೆಸ್ಸಿನ ಹಾಗೂ ಆ ಊರಿನ ಪ್ರಭಾವಿ ವ್ಯಕ್ತಿಯಾಗಿರುವ ಕೆ ಎಂ ಎಫ್. ಮಾಜಿ ಅಧ್ಯಕ್ಷರಾಗಿರುವ ಕಾಪು ದಿವಾಕರ ಶೆಟ್ಟಿಯವರು ಕೂಡಾ ಪರಾಭವಗೊಂಡಿರುವುದು ಅಚ್ಚರಿಯ ಫಲಿತಾಂಶ!

ಡಾ.ಎಂ.ಎನ್.ರಾಜೇಂದ್ರ ಕುಮಾರ್

ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿರುವ ಎಂ. ಎನ್. ರಾಜೇಂದ್ರ ಕುಮಾರ್ ಅವರದ್ದೆ ಪ್ರತ್ಯೇಕ ಬಣ ಬಹುಮತ ಪಡೆದಿರುವದರಿಂದ ಮುಂದೆ ಅಧ್ಯಕ್ಷ ಪಟ್ಟ ಯಾರಿಗೆ ಕಟ್ಟುವುದು ಎನ್ನುವುದು ಅವರ ತೀರ್ಮಾನಕ್ಕೆ ಬಿಟ್ಟ ವಿಚಾರ. ಬಹಳ ಕುತೂಹಲದ ನಿರೀಕ್ಷಯೂ ಕೂಡ.

ದೇವಿಪ್ರಸಾದ್ ಶೆಟ್ಟಿ

ಅತ್ತಿಂದ ಬೆಳಪು ದೇವಿಪ್ರಸಾದ್ ಶೆಟ್ಟಿಗೆ ಕೂಡಾ ಎಂ ಎನ್. ಆರ್. ಇತ್ತೀಚಿನ ಐದಾರು ವರ್ಷಗಳಿಂದ ತುಂಬಾ ಹತ್ತಿರವಾಗಿದ್ದಾರೆ.ಇತ್ತಿಂದ ಇರ್ವತ್ತೂರು ಭಾಸ್ಕರ ಕೋಟ್ಯಾನ್ ಅವರು ಹಳೆಯ ಆತ್ಮೀಯರು. ಇಬ್ಬರೊಳಗಿನ ಪರಸ್ಪರ ವಿಚಾರ ವಿನಿಮಯಗಳೇ ಹೆಚ್ಚು ತೀರ್ಮಾನಕ್ಕೆ ಬರುತ್ತಿರುವುದು. ಅಷ್ಟೊಂದು ವಿಶ್ವಾಸಾರ್ಹವಾದ ಸ್ನೇಹ ಅವರಿಬ್ಬರದು.

ಭಾಸ್ಕರ್ ಕೋಟ್ಯಾನ್

ಮಂಗಳೂರು ಕೆ ಎಂ ಎಫ್ ನ ಅಧ್ಯಕ್ಷ ಹುದ್ದೆಯನ್ನು ಉದಯ ಎಸ್ ಕೋಟ್ಯಾನರವರಿಗೆ ಒದಗಿಸಿ ಕೊಡುವಂತೆ ಒತ್ತಾಯಿಸುವುದಕ್ಕಿಲ್ಲ.
ಭಾಸ್ಕರ ಕೋಟ್ಯಾನರು ಸದ್ದು ,ಪ್ರದರ್ಶನವಿಲ್ಲದೆ ಕೆಲಸ ಮಾಡಿಸಿಕೊಳ್ಳುವ ಜಾಯಮಾನದವರು. ಚುನಾವಣಾ ಪ್ರಚಾರದಲ್ಲಿ ಕಾಣಿಸಿಕೊಳ್ಳದೆ ರಾಜಕಾರಣಿಯಾಗಿರುವವರು !ಯಾರೊಡನೆಯೂ ನಿಷ್ಠೂರಕ್ಕೆ ಸಿಕ್ಕಿಕೊಳ್ಳದ ನಾಜೂಕಿನ ನಡೆಯವರು.

ಆತ್ಮೀಯ ಎನ್ನುವ ಸಲುಗೆಯಲ್ಲಿ ಬೆಳಪು ದೇವಿ ಪ್ರಸಾದ್ ಶೆಟ್ಟಿಯವರಿಗೆ ಅಧ್ಯಕ್ಷ ಪಟ್ಟ ಕಟ್ಟಲೂಬಹುದು.
ಬೆಳಪು ದೇವಿ ಪ್ರಸಾದ್ ಶೆಟ್ಟಿ ಮತ್ತು ಉದಯ ಎಲ್ ಕೋಟ್ಯಾನ್ ಇಬ್ಬರೂ ಸಹ ಹೊಸತಾಗಿ ಆಯ್ಕೆಯಾದವರಾಗಿರುವಾಗ ಅವರಿಬ್ಬರಲ್ಲಿ ಯಾರೊಬ್ಬನ ಆಯ್ಕೆಯೂ ಅಸಮತೋಲನವಾಗುವ ಸಂಭವ ಇದೆ ಸತ್ಯ.
ಇನ್ನೂ ಮುಖ್ಯವಾಗಿ ಉಡುಪಿ ,ಮಂಗಳೂರಿನ ಸಹಕಾರಿ ಯಕ್ಷಗಾನ ರಂಗಸ್ಥಳದಲ್ಲಿ ಎಂ. ಎನ್. ಅರ್. ಅವರ ತಾಳಕ್ಕೆ ಸರಿಯಾಗಿ ಕುಣಿಯಬೇಕು,ಅವರು ಹಾಡಿದ ಪದಕ್ಕೇ ಅರ್ಥ ಹೇಳಬೇಕು. ಭಾಗವತರು ಸೂಚಿಸಿದಂತೆಯೇ ಮುಖಕ್ಕೆ ಬಣ್ಣ ಬಳಿದುಕೊಳ್ಳಬೇಕು,ಕಿರೀಟ ಧರಿಸಬೇಕು ಎನ್ನುವ ಶಿಷ್ಟಾಚಾರದ ರೀತಿಯೇ ಎಂ. ಎನ್. ಆರ್. ಅವರ ಶಿಸ್ತು. ಗೆಲ್ಲಲಾಗದವನನ್ನೂ ಗೆಲ್ಲಿಸುತ್ತಾರೆ ! ಸೋಲದ ಸರದಾರನನ್ನೂ ಸೋಲಿಸುತ್ತಾರೆ ! ಬಂಗಾರಪ್ಪನವರಲ್ಲಿದ್ಗ ಹಠದ ಹಾಗೆ. ಹಾಗಂತ ಅವರು ಯಾರನ್ನೇ ಆಗಲಿ ಕಡೆಗಣಿಸುವುದು,ದೂರ ಮಾಡುವ ಪ್ರವೃತ್ತಿಯವರಲ್ಲ. ಅವರೊಬ್ಬ ನಿಜವಾದ ಸಹಕಾರಿ ಸರಿ.

ಹಾಗಿರುವಾಗ ಉದಯ ಎಸ್. ಕೋಟ್ಯಾನರನ್ನು ಈ ಬಾರಿ ಕೆ. ಎಂ. ಎಫ್. ಅಧ್ಯಕ್ಷನನ್ನಾಗಿಸಲು ಸೂಚಿಸಿದರೆ ಬಂದ ಸದಸ್ಯರುಗಳಲ್ಲಿ ಯಾರೂ ಆಕ್ಷೇಪ ಮಾಡಲಿಕ್ಕಿಲ್ಲ. ಎಂ. ಎನ್. ಆರ್. ಅವರನ್ನು ಎದುರುಹಾಕ್ಕೊಂಡು ಮುಂದುವರಿಯುವುದಕ್ಕೆ ಯಾರೂ ಕೂಡ ಇಚ್ಚಿಸುವುದಿಲ್ಲ ಕಾರಣ ಅವರಲ್ಲಿನ ಸ್ನೇಹಪರತೆ ಹಾಗೂ ನಂಬಿಕೆಯ ವ್ಯಕ್ತಿತ್ವ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top