ಕೆಸರುಗದ್ದೆ ಕ್ರೀಡಾಕೂಟದಿಂದ ಮೂಲ ಸಂಸ್ಕೃತಿ ಉಳಿವಿಗೆ ಪ್ರೇರಣೆ

Picture of RB NEWS

RB NEWS

Bureau Report

ಕಲ್ಲಡ್ಕ : ಬಂಟ್ವಾಳ ತಾಲೂಕಿನ ಗೋಳ್ತಮಜಲು ಗ್ರಾಮದ “ಕೊಳಕೀರ್ದ ತುಡಾರ್” ಕೊಳಕೀರ್, ಕಲ್ಲಡ್ಕ ಇದರ ಆಶ್ರಯದಲ್ಲಿ “ಕೆಸರ್ ಡೊಂಜಿ ದಿನ- 2024 ” ಕಾರ್ಯಕ್ರಮ ಕೊಳಕೀರ್ ಬೈಲು ಅಡಿಕೊಳಕ್ಕೆ ಗದ್ದೆಯಲ್ಲಿ ಜರಗಿತು.

ಕಾರ್ಯಕ್ರಮವನ್ನು ಊರ ದನಿಗಳಾದ ರಮೇಶ್ ಪ್ರಭು ದೀಪ ಪ್ರಜ್ವಲಿಸಿ ಹಿಂಗಾರ ಅರಳಿಸಿ ಉದ್ಘಾಟಿಸಿ ಹಿಂದಿನ ಕಾಲದಲ್ಲಿ ಕೆಸರು ನಮ್ಮ ಜೀವನವಾಗಿತ್ತು. ಅದನ್ನು ಇಂದಿನ ಜನಾಂಗಕ್ಕೆ ನೆನಪಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಳಕೀರ್ದ ತುಡಾರ್ ಅಧ್ಯಕ್ಷ ಶಿವಪ್ರಸಾದ್ ಕೊಟ್ಟಾರಿ ವಹಿಸಿದ್ದರು .

ಈ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದೈವ ನರ್ತಕ ಶೇಖರ ಪಂಬದ ಸಜೀಪ ಇವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಊರಿನ ಗೌರವವಾಗಿ ಸತತವಾಗಿ 43 ವರುಷಗಳಿಂದ ಶಬರಿಮಲೆ ಯಾತ್ರೆ ಕೈಯುತ್ತಿರುವ 103 ವಯಸ್ಸಿನ ಕಮಲ ಗುರುಸ್ವಾಮಿ, ಪ್ರಸಿದ್ಧ ದೈವನರ್ತಕ ರುಕ್ಮಯ ನಲಿಕೆ, ವಿದ್ಯುತ್ ಲೈನ್ ಮ್ಯಾನ್ ವಸಂತ, ಪಂಪು ಚಾಲಕ ಕೊರಗಪ್ಪ ಕೊಟ್ಟಾರಿ, ದೈವ ಚಾಕರಿದ್ದಾರ ಪೂವಪ್ಪ ಮಡಿವಾಳ, ಸಾಧಕ ಶ್ರೀನಿಧಿ ಭಟ್ ಮೊದಲಾದವರನ್ನು ಗೌರವಿಸಿ ಅಭಿನಂದಿಸಲಾಯಿತು.

ಕಾರ್ಯಕ್ರಮದ ವೇದಿಕೆಯಲ್ಲಿ ಮಾಜಿ ಶಾಸಕರುಗಳಾದ ರುಕ್ಮಯ ಪೂಜಾರಿ ,ಪದ್ಮನಾಭ ಕೊಟ್ಟಾರಿ, ಗೋಳ್ತಮಜಲ್ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರೇಮಾ, ಬಂಡಾರ ಮನೆ ವಿಶ್ವನಾಥ್ ಆಳ್ವ, ಡಾ. ಪ್ರಶಾಂತ್ ಕೊಳಕೀರು, ಶಂಬೂರ್ ಬೊಂಡಲ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಕಮಲಾಕ್ಷ ಕೊಟ್ಟಾರಿ, ಕಲ್ಲಡ್ಕ ಶ್ರೀ ಶಾರದಾ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಯತೀನ್ ಕುಮಾರ್, ನಿವೃತ್ತ ಬ್ಯಾಂಕ್ ಮ್ಯಾನೇಜರ್ ನಾರಾಯಣ ನಾಯ್ಕ್, ಮಾಜಿ ಗ್ರಾಮ ಪಂಚಾಯತ್ ಸದಸ್ಯ ನರಸಿಂಹ ಮಡಿವಾಳ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಲಿಖಿತ ಆರ್ ಶೆಟ್ಟಿ, ಲೀಲಾವತಿ, ಜಾನ್ಸಿ ರಾಣಿ ಮಹಿಳಾ ಮಂಡಲದ ಅಧ್ಯಕ್ಷೆ ಮೀನಾಕ್ಷಿ ಆರ್ ಪೂಜಾರಿ, ಮೊದಲಾದವರು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಬಳಿಕ ಕ್ರೀಡಾಕೂಟದ ಗದ್ದೆಗೆ ಫಲ ಪುಷ್ಪ ಸಮರ್ಪಿಸಿ ಕೆಸರಿನಲ್ಲಿ ಮಕ್ಕಳಿಗೆ, ಮಹಿಳೆಯರಿಗೆ,ಪುರುಷರಿಗೆ ವಿವಿಧ ಕ್ರೀಡಾಕೂಟಗಳನ್ನು ನಡೆಸಿ ವಿಜೇತರಿಗೆ ಬಹುಮಾನ ನೀಡಲಾಯಿತು .

ನವ್ಯ ಪ್ರಶಾಂತ್ ಸ್ವಾಗತಿಸಿ, ನಿಧಿ ಪೃಥ್ವಿರಾಜ್ ಆಳ್ವ ವಂದಿಸಿ, ರಾಜೇಶ್ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top