ಕೆಎಂಎಫ್ ಚುನಾವಣೆ ಫಲಿತಾಂಶ

Picture of RB NEWS

RB NEWS

Bureau Report

ಮಂಗಳೂರು: ಭಾರೀ ಕುತೂಹಲ ಮೂಡಿಸಿದ್ದ ದಕ್ಷಿಣ ಕನ್ನಡ ಹಾಲು ಒಕ್ಕೂಟ (ಕೆಎಂಎಫ್) ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಎಸ್ ಸಿ ಡಿಸಿಸಿ ಅಧ್ಯಕ್ಷ ಡಾ. ಎಂ.ಎನ್ ರಾಜೇಂದ್ರ ಕುಮಾರ್ ನೇತೃತ್ವದ ಕಾಂಗ್ರೆಸ್‌ ಮುಖಂಡ ಬೆಳಪು ದೇವಿಪ್ರಸಾದ್ ಶೆಟ್ಟಿ ಬಣಕ್ಕೆ ಭರ್ಜರಿ ಜಯ ಸಿಕ್ಕಿದೆ.

ಉಡುಪಿ ಜಿಲ್ಲೆಯಲ್ಲಿ ಬೆಳಪು ನೇತೃತ್ವದ ಹೈನುಗಾರರ ಬಳಗದ ಅಭ್ಯರ್ಥಿಗಳು ಎಂಟಕ್ಕೆ ಎಂಟು ಸ್ಥಾನವನ್ನೂ ಗೆದ್ದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರು ಮಂದಿ ಸಹಕಾರ ಭಾರತಿ ಮತ್ತು ಇಬ್ಬರು ಹೈನುಗಾರರ ಬಳಗದವರು ಗೆಲುವು ಸಾಧಿಸಿದ್ದಾರೆ. ಈ ಮೂಲಕ ಮತ್ತೊಂದು ಮಹತ್ವದ ಸಹಕಾರ ಕ್ಷೇತ್ರವನ್ನು ರಾಜೇಂದ್ರ ಕುಮಾ‌ರ್ ಬಣ ತನ್ನ ಕೈವಶ ಮಾಡಿಕೊಂಡು ಬಿಜೆಪಿಗೆ ಹೀನಾಯ ಸೋಲುಣಿಸಿದೆ.

ಉಡುಪಿ ಜಿಲ್ಲೆಯಲ್ಲಿ ಬೆಳಪು ದೇವಿಪ್ರಸಾದ್ ಶೆಟ್ಟಿ (165), ಉದಯ ಕೋಟ್ಯಾನ್(172 ಮತ), ಎಸ್.ಪ್ರಕಾಶ್ಚಂದ್ರ ಮೇಕೋಡು (185), ಎನ್. ಮಂಜಯ್ಯ ಶೆಟ್ಟಿ ಸಬ್ಲಾಡಿ(-145), ಕೊಡವೂರು ರವಿರಾಜ ಹೆಗ್ಡೆ (220), ಕೆ.ಶಿವಮೂರ್ತಿ

ಉಪಾಧ್ಯ(124), ಮುಡಾರು ಸುಧಾಕರ ಶೆಟ್ಟಿ(162), ಹದ್ದೂರು ಮಮತಾ ಶೆಟ್ಟಿ(190) ಗೆಲುವು ಪಡೆದಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಸಹಕಾರ ಭಾರತಿಯ ಯಾವ ಅಭ್ಯರ್ಥಿಯೂ ಗೆಲುವು ಪಡೆದಿಲ್ಲ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರು ಮಂದಿ ಸಹಕಾರ ಭಾರತಿ ಅಭ್ಯರ್ಥಿಗಳು ಗೆಲುವು ಕಂಡಿದ್ದಾರೆ.

ಕೆ.ಚಂದ್ರಶೇಖರ ರಾವ್ (169 ಮತ), ಎಸ್.ಬಿ ಜಯರಾಮ ರೈ 190, ಹೆಚ್.ಪ್ರಭಾಕರ್ 157, ಭರತ್ ಎನ್ 173, ಸುಧಾಕರ ರೈ 97 ಮತ್ತು ಮಹಿಳಾ ಕೋಟಾದಿಂದ ಸ್ಪರ್ಧಿಸಿದ್ದ ಸವಿತಾ ಶೆಟ್ಟಿ(235 ಮತ) ಗೆಲುವು ಕಂಡಿದ್ದಾರೆ.

ಕಾಂಗ್ರೆಸಿನ ಹೈನುಗಾರರ ಬಳಗದಿಂದ ಸ್ಪರ್ಧಿಸಿದ್ದ ಸುಚರಿತ ಶೆಟ್ಟಿ-99 ಮತ್ತು ನಂದರಾಮ ರೈ-97 ಪ್ರಯಾಸದಲ್ಲಿ ಗೆಲುವು ಕಂಡಿದ್ದಾರೆ.

ಎರಡು ಜಿಲ್ಲೆಯ ವ್ಯಾಪ್ತಿಯಿರುವ ದಕ್ಷಿಣ ಕನ್ನಡ ಜಿಲ್ಲಾ ಹಾಲು ಒಕ್ಕೂಟಕ್ಕೆ 16 ಸದಸ್ಯರಿದ್ದು, 10-6 ಅಂತರದಲ್ಲಿ ಹೈನುಗಾರರ ಬಳಗ ಗೆಲುವು ದಾಖಲಿಸಿದೆ. ಆಮೂಲಕ ಸಹಕಾರಿ ಧುರೀಣನ ನೇತೃತ್ವದ ಬಣವು ಅಧಿಕೃತವಾಗಿ ಕೆಎಂಎಫ್ ಅಧಿಕಾರ ಹಿಡಿಯಲು ಎಂಟ್ರಿಯಾಗಿದೆ.

ಅವಿಭಜಿತ ದ. ಕ. ಜಿಲ್ಲಾ. ಪ್ರತಿಷ್ಠಿತ ಹಾಲು ಉತ್ಪಾದಕ ಸಂಘದ ನಿರ್ದೇಶಕರಾಗಿ ಸತತ 2ನೆ ಬಾರಿಗೆ ಮುಡಾರು ಸುಧಾಕ‌ರ್ ಶೆಟ್ಟಿ ಆಯ್ಕೆಗೊಂಡಿದ್ದಾರೆ.

ಕೆಎಂಎಫ್ ಅಧ್ಯಕ್ಷ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸುಚರಿತ ಶೆಟ್ಟಿ ಹಾಗೂ‌ ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಇರ್ವತ್ತೂರು ಉದಯ‌ ಎಸ್. ಕೋಟ್ಯಾನ್ ಇವರು ಬಿಜೆಪಿ ಬೆಂಬಲಿತ ವಿರುದ್ಧವಾಗಿ ಬಂಡಾಯ‌ ಅಭ್ಯರ್ಥಿಗಳಾಗಿ‌ ಸ್ವರ್ಧಾ ಕಣಕ್ಕೆ ಇಳಿದಿದ್ದರು.

ಈ ಎಲ್ಲಾ ಬೆಳವಣಿಗೆ ನಡುವೆ ಇರ್ವತ್ತೂರು ಉದಯ ಎಸ್. ಕೋಟ್ಯಾನ್ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಮುಂದಿಟ್ಟು ಆರು ವರ್ಷ ಅವಧಿಗೆ‌ ಉಚ್ಚಾಟಿ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರು ಅದೇಶ ಹೊರಡಿಸಿದ್ದರು.

ಈ ಕ್ರಮವು ಪಕ್ಷದೊಳಗೆ ತೀವ್ರ ಅಸಮಾಧಾನಕ್ಕೂ‌ ಕಾರಣವಾಗಿತ್ತು.‌ ಬಂಡಾಯ ಅಭ್ಯರ್ಥಿ ‌ಇರ್ವತ್ತೂರು ಉದಯಕೋಟ್ಯಾನ್ ಅವರು ಜಯಭೇರಿಗಳಿಸುವ ಮೂಲಕ ಉಡುಪಿ ಜಿಲ್ಲಾಧ್ಯಕ್ಷರಿಗೆ ಸಡ್ಡು ಹೊಡೆದಿದ್ದಾರೆ.

ಉಡುಪಿ ಜಿಲ್ಲಾ ವ್ಯಾಪ್ತಿಯ ಎಲ್ಲಾ ಶಾಸಕರುಗಳು‌ ಹಾಗೂ‌‌ ಇಬ್ಬರು ಸಂಸದರು ಬಿಜೆಪಿಗರಾಗಿದ್ದರೂ, ತೀವ್ರ‌ ಕುತೂಹಲ ಕೆರಳಿಸಿದ ಕೆ.ಎಂ.ಎಫ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹೀನಾಯವಾಗಿ ಸೋಲು ಕಂಡಿದ್ದಾರೆ. ಇದರ ನೈತಿಕ ಹೊಣೆ ಹೊತ್ತು ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಲು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರು ಮುಂದಾಗುವರೇ ಎಂಬುವುದನ್ನು ಕಾದು ನೋಡ ಬೇಕು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top