ಕೂಲಿ ಕಾರ್ಮಿಕನ ಬರ್ಬರ ಕೊಲೆ : 15 ಮಂದಿ ಆರೋಪಿಗಳ ಬಂಧನ
ಮಂಗಳೂರು : ನಗರ ಹೊರವಲಯದ ಕುಡುಪು ಸಮೀಪ ರವಿವಾರ ವ್ಯಕ್ತಿಯೊಬ್ಬರನ್ನು ಸುಮಾರು 30ಕ್ಕೂ ಅಧಿಕವಿದ್ದ ಗುಂಪು ಹಲ್ಲೆ ನಡೆಸಿ ಹತ್ಯೆಗೈದಿರುವುದು ದೃಢಪಟ್ಟಿದೆ. ಪ್ರಕರಣಕ್ಕೆ ಸಂಬಂಧಿಸಿ 15 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ತಿಳಿಸಿದ್ದಾರೆ.
ಮಂಗಳವಾರ ಮಧ್ಯಾಹ್ನ ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ಕುಡುಪು ಮತ್ತು ಸುತ್ತಮುತ್ತಲಿನ ಸಚಿನ್ ಟಿ., ದೇವದಾಸ್, ಮಂಜುನಾಥ್, ಸಾಯಿದೀಪ್, ನಿತೀಶ್ ಕಮಾರ್ ಯಾನೆ ಸಂತೋಷ್, ದೀಕ್ಷಿತ್ ಕುಮಾರ್, ಸಂದೀಪ್, ವಿವಿಯನ್ ಅಲ್ವಾರಿಸ್, ಶ್ರೀದತ್ತ, ರಾಹುಲ್, ಪ್ರದೀಪ್ ಕುಮಾರ್, ಮನೀಶ್ ಶೆಟ್ಟಿ, ಧನುಷ್, ದೀಕ್ಷಿತ್, ಕಿಶೋರ್ ಕುಮಾರ್ ಎಂಬವರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.


ರವಿವಾರ ಪತ್ತೆಯಾದ ಅಪರಿಚಿತ ವ್ಯಕ್ತಿಯ ಮೃತದೇಹದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಅನುಮಾನದ ಆಧಾರದಲ್ಲಿ ಸೋಮವಾರ ಶವಪರೀಕ್ಷೆ ನಡೆಸಲಾಯಿತು. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಪ್ರಾಥಮಿಕ ವರದಿ ಪ್ರಕಾರ ಮೃತರ ಬೆನ್ನು ಭಾಗದಲ್ಲಿ ಬಲವಾದ ಹೊಡೆತದ ಗಾಯಗಳ ಕಾರಣದಿಂದ ಉಂಟಾದ ರಕ್ತಸ್ರಾವ, ಶಾಕ್ ಮತ್ತು ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ ಮರಣ ಸಂಭವಿಸಿರುವುದು ಕಂಡು ಬಂದಿದೆ. 3
ಈವರೆಗಿನ ತನಿಖೆಯಲ್ಲಿ, ಎ.27ರಂದು ಮಧ್ಯಾಹ್ನ ಸುಮಾರು 3 ಗಂಟೆಗೆ ಭಟ್ರ ಕಲ್ಲುರ್ಟಿ ದೈವಸ್ಥಾನದ ಬಳಿಯ ಮೈದಾನದಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯಾವಳಿಯ ಸಂದರ್ಭ ಅಪರಿಚಿತ ವ್ಯಕ್ತಿಗೆ ಯಾವುದೋ ಮಾತಿಗೆ ಸಂಬಂಧಿಸಿ ಸಚಿನ್ ಟಿ. ಎಂಬಾತ ಜಗಳಕ್ಕೆ ಮುಂದಾದಾಗ ಸಹಚರರು ಕೂಡಾ ಜತೆ ಸೇರಿ ಹಲ್ಲೆ ನಡೆಸಿದ್ದಾರೆ. ಆತ ಓಡಿಹೋಗಲು ಯತ್ನಿಸಿದಾಗ ಸುಮಾರು 30 ಮಂದಿ ಸೇರಿ ಹಲ್ಲೆ ನಡೆಸಿದ್ದಾರೆ.
ಗುಂಪು ಸೇರಿ ಕೈಯಿಂದ ಮತ್ತು ಕಟ್ಟಿಗೆಯಿಂದ ಹೊಡೆದು ಕಾಲಿನಿಂದ ಯದ್ವಾತದ್ವ ತುಳಿದು ಹಲ್ಲೆ ನಡೆಸಿದ್ದರು. ಈ ಸಮಯ ಕೆಲವರು ತಡೆಯಲು ಯತ್ನಿಸಿದರೂ ನಿರಂತರ ಹಲ್ಲೆ ನಡೆಸಿದ ಕಾರಣ ಅಪರಿಚಿತ ವ್ಯಕ್ತಿ ಮೃತಪಟ್ಟಿರುವುದು ಕಂಡುಬಂದಿದೆ ಎಂದು ಪೊಲೀಸ್ ಕಮಿಷನರ್ ತಿಳಿಸಿದರು.
ದೀಪಕ್ ಕುಮಾರ್ ಎಂಬವರು 19 ಜನರು ಮತ್ತು ಇತರರ ವಿರುದ್ಧ ನೀಡಿದ ದೂರಿನ ಆಧಾರದಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 37/2025 ಕಲಂ 102 (2), 189 (2),191 (1), 191(3), 240 ಭಾರತೀಯ ಸಂಹಿತೆ 2023 (ಬಿಎನ್ಎಸ್ 2023) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಗುಂಪು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪ್ರಥಮ ಬಾರಿಗೆ ಕಾನೂನಿನಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಮೃತ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ. ಆತ ಉತ್ತರಭಾರತ ಮೂಲದ ಕಾರ್ಮಿಕ ಎಂದು ಹೇಳಲಾಗಿದ್ದರೂ ಆತ ಮಲಯಾಳಂ ಮಾತನಾಡುತ್ತಿದ್ದ ಎನ್ನಲಾಗಿದ್ದು, ಪತ್ತೆ ಕಾರ್ಯ ಮುಂದುವರಿದಿದೆ ಎಂದು ಅವರು ಹೇಳಿದರು.


ಗೋಷ್ಟಿಯಲ್ಲಿ ಡಿಸಿಪಿಗಳಾದ ಸಿದ್ದಾರ್ಥ್ ಗೋಯಲ್, ರವಿಶಂಕರ್ ಉಪಸ್ಥಿತರಿದ್ದರು.
‘ಪ್ರಮುಖ ಆರೋಪಿ ಸಚಿನ್ ಆಟೋ ಚಾಲಕನಾಗಿದ್ದು, ಈ ಘಟನೆಯಲ್ಲಿ ಮಾಜಿ ಕಾರ್ಪೊರೇಟರ್ ಪತಿ ರವೀಂದ್ರ ನಾಯಕ್ ಎಂಬವರು ಭಾಗಿಯಾಗಿರುವ ಮಾಹಿತಿ ಇದೆ. ಈ ಬಗ್ಗೆ ಶೀಘ್ರವೇ ಮಾಹಿತಿ ನೀಡಲಾಗುವುದು’
–ಅನುಪಮ್ ಅಗ್ರವಾಲ್, ಪೊಲೀಸ್ ಆಯುಕ್ತರು.
ಗುಂಪು ಹಲ್ಲೆ ನಡೆಸುವ ಸಂದರ್ಭ ವೀಡಿಯೋ ಚಿತ್ರೀಕರಣ ಮಾಡಲಾಗಿದ್ದು, ಆ ಸಾಕ್ಷ್ಯವನ್ನು ನಾಶ ಮಾಡಿಸಲಾಗಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅನುಪಮ್ ಅಗ್ರವಾಲ್, ತನಿಖೆಯ ವೇಳೆ ಆರೋಪಿಗಳಿಂದ ಎಲ್ಲಾ ರೀತಿಯ ಸಾಕ್ಷ್ಯಗಳನ್ನು ಹೊರತರಲಾಗುವುದು ಎಂದು ಕಮಿಷನರ್ ಅನುಪಮ್ ಅಗ್ರವಾಲ್ ಹೇಳಿದರು.
ದಸ್ತಗಿರಿ ಮಾಡಲಾದ ಆರೋಪಿಗಳ ವಿವರ :
1.
ಸಚಿನ್ ಟಿ – ಪ್ರಾಯ: 26 ವರ್ಷ; ತಂದೆ: ದಿವಂಗತ ತಾರಾನಾಥ್; ವಿಳಾಸ: 2-117, ನಡುಮನೆ ಹೌಸ್, ಕುಡುಪು ಅಂಚೆ, ತಿರುವೈಲ್ ಗ್ರಾಮ, ಮಂಗಳೂರು.
- ದೇವದಾಸ್ – ಪ್ರಾಯ: 50 ವರ್ಷ; ತಂದೆ: ದಿವಂಗತ ಲಿಂಗಪ್ಪ ಪೂಜಾರಿ: ವಿಳಾಸ: ಕುಡುಪು ನಡುಮನೆ, ಕುಡುಪು ಅಂಚೆ, ತಿರುವೈಲ್ ಗ್ರಾಮ, ಮಂಗಳೂರು.
3.
ಮಂಜುನಾಥ್ ಪ್ರಾಯ: 32 ವರ್ಷ; ತಂದೆ: ಮಲ್ಲಿಕಾರ್ಜುನ; ವಿಳಾಸ: ಮಂಗಳನಗರ, ಕುಡುಪು ಅಂಚೆ, ತಿರುವೈಲ್ ಗ್ರಾಮ, ಮಂಗಳೂರು.
4.
ಸಾಯಿದೀಪ್ – ಪ್ರಾಯ: 29 ವರ್ಷ; ತಂದೆ: ಹರೀಶ್: ವಿಳಾಸ: ಸಮೃದ್ಧಿ ಹೌಸ್, ಸುಬ್ರಹ್ಮಣ್ಯ ನಗರ, ಪೆದಮಲೆ ಅಂಚೆ, ನೀರುಮಾರುಗ, ಮಂಗಳೂರು.
- ನಿತೇಶ್ ಕುಮಾರ್ @ ಸಂತೋಷ್
ಪ್ರಾಯ: 33 ವರ್ಷ; ತಂದೆ: ದಿವಂಗತ ವಿಶ್ವನಾಥ್; ವಿಳಾಸ: ಶಿವ ನಿಲಯ, 15ನೇ ಕ್ರಾಸ್, ಮಂಗಳನಗರ, ಕುಡುಪು ಅಂಚೆ, ಮಂಗಳೂರು.
6.
ದೀಕ್ಷೀತ್ ಕುಮಾರ್ – ಪ್ರಾಯ: 32 ವರ್ಷ; ತಂದೆ: ವಿಶ್ವನಾಥ್: ವಿಳಾಸ: ನಡುಮನೆ ಹೌಸ್, ಕುಡುಪು ಕಟ್ಟೆ, ಮಂಗಳೂರು.
7.
ಸಂದೀಪ್ – ಪ್ರಾಯ: 23 ವರ್ಷ; ತಂದೆ: ಬಸವರಾಜಪ್ಪ ಹಾವೇರಿ; ವಿಳಾಸ: 13ನೇ ಅಡ್ಡ ರಸ್ತೆ, ಶಿವ ನಿಲಯ, ದೇವರಪದವು, ವಾಮಂಜೂರು, ಮಂಗಳೂರು.
- ವಿವಿಯನ್ ಆಳ್ವಾರೀಸ್ – ಪ್ರಾಯ: 41 ವರ್ಷ; ತಂದೆ: ವಿಜಯ ಆಳ್ವಾರೀಸ್; ವಿಳಾಸ: 9ನೇ ಅಡ್ಡ ರಸ್ತೆ, ಪ್ರಾತಸೈಫ್ ಕಾಲೋನಿ, ನಡುಮನೆ, ಕುಡುಪು ಅಂಚೆ, ಮಂಗಳೂರು.
9.
ಶ್ರೀದತ್ತ – ಪ್ರಾಯ: 32 ವರ್ಷ; ತಂದೆ: ದಿವಂಗತ ಅನಂತ; ವಿಳಾಸ: ಮಾತ್ರಛಾಯ ನಿಲಯ, ಕುಡುಪುಕಟ್ಟೆ, ಕುಡುಪು ಅಂಚೆ, ಮಂಗಳೂರು.
10.
ರಾಹುಲ್ – ಪ್ರಾಯ: 23 ವರ್ಷ; ತಂದೆ: ರಮೇಶ್: ವಿಳಾಸ: ಗಿರಿಜಾ ಕಾಂಪೌಂಡ್, ಕದ್ರಿ ಕೈಬಟ್ಟಲು, ಬಿಜೈ ಅಂಚೆ, ಮಂಗಳೂರು.
11.
ಪ್ರದೀಪ್ ಕುಮಾರ್ ಪ್ರಾಯ: 35 ವರ್ಷ; ತಂದೆ: ಮೋಹನ್ ದಾಸ್; ವಿಳಾಸ: ಚೈತ್ರ ನಿಲಯ, ಜ್ಯೋತಿ ನಗರ, ಕುಲಶೇಖರ, ಕುಡುಪು ಅಂಚೆ, ಮಂಗಳೂರು.
12.
ಮನೀಷ್ ಶೆಟ್ಟಿ – ಪ್ರಾಯ: 21 ವರ್ಷ; ತಂದೆ: ಸತೀಶ್ ಶೆಟ್ಟಿ; ವಿಳಾಸ: ಮಂಜುಶ್ರೀ ನಿಲಯ, ಬೌಲ್ಯ ಶಕ್ತಿನಗರ, ಪದವು ಗ್ರಾಮ, ಮಂಗಳೂರು.
- ಧನುಷ್ – ಪ್ರಾಯ: 31 ವರ್ಷ; ತಂದೆ: ದಿವಂಗತ ಸದಾಶಿವ; ವಿಳಾಸ: ನೆಕ್ಕರೆ ರಸ್ತೆ, ಕುಡುಪುಕಟ್ಟೆ, ಕುಡುಪು ಅಂಚೆ, ಮಂಗಳೂರು.
14.
ದೀಕ್ಷಿತ್ – ಪ್ರಾಯ: 27 ವರ್ಷ; ತಂದೆ: ದೇವಪ್ಪ, ವಿಳಾಸ: ಬ್ರಾಹ್ಮರಿ ನಿಲಯ. ಕುಲಶೇಖರ ಚೌಕಿ, ಕುಲಶೇಖರ, ಕುಡುಪು ಅಂಚೆ, ಮಂಗಳೂರು.
15.
ಕಿಶೋರ್ ಕುಮಾರ್ ಪ್ರಾಯ: 37 ವರ್ಷ; ತಂದೆ: ಸುಬ್ರಹ್ಮಣ್ಯ ಆಚಾರ್; ವಿಳಾಸ: ಕುಡುಪು ದೇವಸ್ಥಾನದ ಬಳಿ, ಕುಡುಪು ಅಂಚೆ, ಮಂಗಳೂರು.





















