






ಕೂಡುಬೆಟ್ಟು: ಕ್ರಿಕೆಟ್ ಪಂದ್ಯಾಟ
ಕಾರ್ಕಳ : ಕ್ರೀಡಾಕೂಟ ಸಮಿತಿ ಉಡುಪಿ ಜಿಲ್ಲೆ ಇವರ ವತಿಯಿಂದ, ಜಿಲ್ಲಾ ಮಲೆಕುಡಿಯ ಸಂಘ (ರಿ.) ಉಡುಪಿ ಇವರ ಸಹಯೋಗದೊಂದಿಗೆ ಕ್ರೀಡಾ ವೈಭವ-2024 ಮಲೆಕುಡಿಯ ಸಮಾಜ ಬಾಂಧವರ ಅಂತರ್ ರಾಜ್ಯ ಮಟ್ಟದ ಪುರುಷರ ಫುಲ್ ಗ್ರೌಂಡ್ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟವು ಮಾಳ ಕೂಡುಬೆಟ್ಟು ಸ.ಹಿ.ಪ್ರಾ.ಶಾಲೆಯಲ್ಲಿ ಜರುಗಿತು.
ಕಾಸರಗೋಡು ಕೆನರಾ ಬ್ಯಾಂಕ್ ನ ಅಧಿಕಾರಿ ಆಶಾ ಕಾರ್ಯಕ್ರಮ ಉದ್ಘಾಟಿಸಿದರು.
ಮಾಳ ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತ ಇದರ ಅಧ್ಯಕ್ಷ ಅನಿಲ್ ಎಸ್. ಪೂಜಾರಿ ಇವರು ಮಾತನಾಡಿ,ಕ್ರೀಡೆಯಿಂದ ಸಂಘಟನೆ ಬಲಗೊಳ್ಳುತ್ತದೆ. ಕ್ರೀಡೆಯ ಜೊತೆಗೆ ಶಿಕ್ಷಣದಲ್ಲೂ ಸಾಧನೆ ಮಾಡಬೇಕು ಎಂದರು.
ರಾಜ್ಯ ಮಲೆಕುಡಿಯ ಸಂಘದ ಸಂಘಟನಾ ಕಾರ್ಯದರ್ಶಿ ನೋಣಯ್ಯ ಗೌಡ ರೆಂಜಾಳ , ಶಿಕ್ಷಕ ರಾಧಾಕೃಷ್ಣ ಜೋಶಿ , ರಾಜ್ಯ ಮಲೆಕುಡಿಯ ಸಂಘದ ಅಧ್ಯಕ್ಷ ಶ್ರೀಧರ ಗೌಡ ಈದು, ಜಿಲ್ಲಾ ಮಲೆಕುಡಿಯ ಸಂಘದ ಅಧ್ಯಕ್ಷ ಗಂಗಾಧರ ಈದು ಹಾಗೂ ಕ್ರೀಡಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಅಶೋಕ್ ಗೌಡ ಕೆರ್ವಾಶೆ ನಿರೂಪಿಸಿದರು. ಪ್ರತ್ವಿಕ್ ಪೇರಡ್ಕ ಪ್ರಾರ್ಥನೆ ನೆರವೇರಿಸಿದರು. ಕ್ರೀಡಾ ಕೂಟ ಸಮಿತಿಯ ಕಾರ್ಯದರ್ಶಿ ಸೌಮ್ಯ ಕೆರ್ವಾಶೆ ಸ್ವಾಗತಿಸಿದರು. ಸಹ ಕಾರ್ಯದರ್ಶಿ ಮಲ್ಲಿಕಾ ಕಬ್ಬಿನಾಲೆ ಧನ್ಯವಾದವಿತ್ತರು.





































