ಕುಸ್ತಿ ಪಂದ್ಯಾಟ : ಎಸ್ ‌ವಿ ಟಿ ಯ ಆರು ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ

Picture of RB NEWS

RB NEWS

Bureau Report

ಕಾರ್ಕಳ : ಶಿಕ್ಷಣ ಇಲಾಖೆಯ ವತಿಯಿಂದ ನಿವೇದಿತಾ ಪ್ರೌಢ ಶಾಲೆ ಬಸ್ರೂರು ಇಲ್ಲಿ ಆಯೋಜಿಸಿದ ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಎಸ್ ‌ವಿ ಟಿ ಕನ್ನಡ ಮಾಧ್ಯಮ ಪ್ರೌಢ ಶಾಲೆಯ 10ನೇ ತರಗತಿಯ ಪ್ರಣೀತ್, ಅನ್ವಿತಾ, ಭಾರತಿ, ಶೃತಿ, 9ನೇ ತರಗತಿಯ ವಾಣಿ ಸಂಗಪ್ಪ, 8ನೇ ತರಗತಿಯ ಧನ್ಯಶ್ರೀ ಸೇರಿದಂತೆ ಒಟ್ಟು 06 ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.10ನೇ ತರಗತಿಯ ಪ್ರೇಕ್ಷಾ ಮತ್ತು 9ನೇ ತರಗತಿಯ ಪೂಜಾ ಕೆ ತೃತೀಯ ಸ್ಥಾನ ಹಾಗೂ 9ನೇ ತರಗತಿಯ ಮುತ್ತುರಾಜ್ ದ್ವಿತೀಯ ಸ್ಥಾನ ಪಡೆದಿರುತ್ತಾರೆ.

ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕಿ ಪ್ರಿಯಾ ಪ್ರಭು , ಪ್ರಭಾವತಿ , ತರಬೇತುದಾರ ಅಕ್ಷತ್, ಕು. ಕೀರ್ತನ ತರಬೇತಿಯನ್ನು ನೀಡಿರುತ್ತಾರೆ.

ಕಾಲೇಜಿನ ಆಡಳಿತ ಮಂಡಳಿ, ಪ್ರಾಚಾರ್ಯರಾದ ನೇಮಿರಾಜ್ ಶೆಟ್ಟಿ, ಮುಖ್ಯೋಪಾಧ್ಯಾಯರಾದ ಯೋಗೇಂದ್ರ ನಾಯಕ್, ಕಾಲೇಜಿನ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿರುತ್ತಾರೆ.

ವರದಿ: ದೇವದಾಸ್ ಕೆರೆಮನೆ

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top