“ಕುಜ ದೋಷ “ ಎಂದರೇನು ? ಪರಿಹಾರಗಳೇನು ?
ಭಾರತೀಯ ಸಂಪ್ರದಾಯದಲ್ಲಿ ವಿವಾಹದ ಮೊದಲು ವಧು –ವರರ ಮೂಲ ಜಾತಕದಲ್ಲಿ’ ಮಂಗಳ ಗ್ರಹ ‘ ನ ಕುರಿತು ಗಮನ ಕೊಡಲಾಗುತ್ತದೆ .
ದಂಪತ್ಯೋ : ಜನ್ಮ ಕಾಲೇ ವ್ಯಯ ,ಧನ , ಹಿಬುಕೇ ಸಪ್ತಮೇ ಲಗ್ನ ರಂದ್ರೇ
ಲಗ್ನಾತ್ ಚಂದ್ರಾತ್ಸಿತಾಚ್ಚಾಪಿ ಭವತಿ ಯದಾ ಭೂಮಿ ಪುತ್ರೋ ದ್ವಯೋರ್ವಾ ….[ಭಾವದೀಪಿಕಾ ]…..ಎಂಬ ಶ್ಲೋಕದಂತೆ ಲಗ್ನ ಚಂದ್ರ ಶುಕ್ರರಿಂದ 12, 2, 4, 7, 1, 8 ನೇ ಮನೆಯಲ್ಲಿರುವ ಅಂಗಾರಕನು ಕುಜ ದೋಷವನ್ನು ,ಉಳಿದ ರವಿ,ಶನಿ, ರಾಹುಗಳು ಪಾಪ ದೋಷವನ್ನು ಉಂಟು ಮಾಡುವರು .ಇದರಲ್ಲಿ ಸಪ್ತಮ ,ಅಷ್ಟಮ ದೋಷವು ಅತ್ಯಂತ ಪ್ರಬಲವಾಗಿರುತ್ತದೆ .
ಕುಜ ದೋಷವತೀ ದೇಯಾ ಕುಜ ದೋಷವತೇ ಕಿಲ !
ನಾಸ್ತಿ ದೋಷೋ ನಚಾನಿಷ್ಟಂ ದಂಪತ್ಯೋ : ಸುಖ ವರ್ಧನಮ್ !!
ಪುರುಷ ಜಾತಕದಲ್ಲಿ ದೋಷವಿದ್ದರೆ ,……ಸ್ತ್ರೀ ಜಾತಕದಲ್ಲಿಯೂ ದೋಷವಿದ್ದಾಗ ತೊಂದರೆ ಆಗುವುದಿಲ್ಲ.ಕುಜ ದೋಷಕ್ಕೆ ರಾಹು ದೋಷ ಸಮವೆಂದೂ ,ಶನಿ ದೋಷವು ರಾಹುದೋಷದ ಪಾದದಷ್ಟೆಂದು ಪರಿಗಣಿಸುತ್ತಾರೆ * ದಂಪತಿಗಳಲ್ಲಿ ದೋಷಸಾಮ್ಯತೆ ಇಲ್ಲದೆ ಹೋದರೆ ವಿವಾಹ ಪೂರ್ವದಲ್ಲಿಯೂ ವಿವಾಹದ ನಂತರದಲ್ಲಿಯೂ ಇದು ಅನೇಕ ಅನಿಷ್ಟಗಳಿಗೆ ಕಾರಣವಾಗುತ್ತದೆ .ಮಿಥುನ –ಕನ್ಯಾ ಲಗ್ನಕ್ಕೆ ತುಲಾ-ವೃಷಭ ಲಗ್ನಕ್ಕೆ ಕುಜನು ಸಂಪೂರ್ಣ ದೋಷಕಾರಿಯೆಂದೂ ಮಕರ-ಕುಂಭ ರಾಶಿಗಳಿಗೆ 75% ದೋಷಪ್ರದನೆಂದೂ ,ಧನು-ಮೀನ ಲಗ್ನದವರಿಗೆ ಶೇಖಡಾ 50 ದೋಷಕಾರಿಯೆಂದೂ ,ಮೇಷ –ವೃಶ್ಚಿಕ ದವರಿಗೆ 25% ದೋಷಕಾರಿಯೆಂದೂ ,ಸಿಂಹ-ಕರ್ಕಾಟಕ ಲಗ್ನದವರಿಗೆ ದೋಷವೇ ಇಲ್ಲವೆಂದೂ ಹೇಳಲ್ಪಟ್ಟಿದೆ .ಆದರೆ ಇದು ಅನುಭ ವಿರುದ್ಧವಾದುದು .ಅನುಭವದಲ್ಲಿ ಸಪ್ತಮ ಅಷ್ಟಮದ ಕುಜ ದೋಷವು ಪ್ರಬಲ ದೋಷವಾಗುತ್ತದೆ .ಈ ಕುಜನಿಗೆ ಶುಭಗ್ರಹರ ಸಂಯೋಗ ಯಾ ಶುಭ ಕ್ಷೇತ್ರ ಸ್ಟಿತಿಯಿದ್ದರೆ ದೋಷವು ಇಲ್ಲವಾಗುತ್ತದೆ .ಹಾಗೆಯೇ ನವಮದಲ್ಲಿ ಶುಭ ಗ್ರಹರು ಇದ್ದಾಗಲೂ ಕುಜ ದೋಷವು ಇಲ್ಲವಾಗುತ್ತದೆ .
ಅಷ್ಟಮದಲ್ಲಿ ಪಾಪಗ್ರಹರಿದ್ದಾಗ ‘ಕ್ರೂರೇ s ಷ್ಟಮೇ ವಿಧವತಾ …ಎನ್ನುವಂತೆ ವೈಧವ್ಯ , ವಿಚ್ಛೇದನ,ಸಾಮರಸ್ಯದ ಕೊರತೆ ,ವಿವಾಹದ ಆನಂತರ ಭಾಗ್ಯನಾಶ ಮೊದಲಾದ ಫಲಗಳನ್ನು ಊಹಿಸಬೇಕು. ಸ್ತ್ರೀಯರ ಜಾತಕದಲ್ಲಿ ಲಗ್ನ, ಚಂದ್ರರಿಂದ ಅವರ ಸ್ವರೂಪವನ್ನು ,ಸಪ್ತಮದಿಂದ ಪತಿಯನ್ನೂ ಅಷ್ಟಮದಿಂದ ಪತಿಯ ಆಯುಷ್ಯವನ್ನೂ ಚಿಂತಿಸಬೇಕು .
ಕುಜ ದೋಷವಿಲ್ಲದ ರಾಶಿ ಹಾಗೂ ಲಗ್ನಗಳು :-ಜನನಕಾಲದಲ್ಲಿ ಕರ್ಕಾಟಕ, ಸಿಂಹ,ಹಾಗೂ ಮಕರ ರಾಶಿಗಳಾಗಿದ್ದಲ್ಲಿ /ಲಗ್ನಗಳಾಗಿದ್ದಲ್ಲಿ ಕುಜ ದೋಷವಿರುವುದಿಲ್ಲ .
ಮೇಷ ದಲ್ಲಿ ಕುಜನಿದ್ದು ಮೇಷ ರಾಶಿ ಅಥವಾ ಮೇಷ ಲಗ್ನದಲ್ಲಿ ಜನಿಸಿದ್ದರೆ ದೋಷವಿರುವುದಿಲ್ಲ.
ವೃಷಭ ಲಗ್ನ ಹಾಗೂ ವೃಷಭ ರಾಶಿಯಿಂದ ಕುಜನು 2 ನೇ ಸ್ಥಾನ ವಾದ ಮಿಥುನ ದಲ್ಲಿ ಇದ್ದರೂ ಕುಜ ದೋಷವಿರುವುದಿಲ್ಲ.
ಧನು ಹಾಗೂ ಮೀನ ಲಗ್ನದಲ್ಲಿ ಜನಿಸಿದವರಿಗೆ ಅಷ್ಟಮದಲ್ಲಿ ಕುಜನಿದ್ದರೆ ದೋಷವಿಲ್ಲ.
ಮೇಷ ಹಾಗೂ ವೃಶ್ಚಿಕ ಲಗ್ನದಲ್ಲಿ ಜನಿಸಿದವರಿಗೆ 4 ನೇ ಮನೆಯಲ್ಲಿ ಕುಜನಿದ್ದರೆ ದೋಷವಿರುವುದಿಲ್ಲ.
ಮಕರ ಹಾಗೂ ಕರ್ಕಾಟಕ ಲಗ್ನದಲ್ಲಿ ಜನಿಸಿದವರಿಗೆ ಸಪ್ತಮದಲ್ಲಿ ಕುಜನಿದ್ದರೂ ದೋಷವಿರುವುದಿಲ್ಲ .ಬಲಿಷ್ಟರಾದ ಗುರು ಹಾಗೂ ಶುಕ್ರರು ಸಪ್ತಮದಲ್ಲಿ ಇದ್ದರೆ ಅಥವಾ ಲಗ್ನದಲ್ಲಿದ್ದರೆ ಕುಜ ದೋಷ ಪರಿಹಾರವಾಗುತ್ತದೆ.
ವೃಷಭ ಹಾಗೂ ತುಲಾ ಲಗ್ನದಲ್ಲಿ ಜನಿಸಿದವರಿಗೆ ದ್ವಾದಶದಲ್ಲಿ ಕುಜನಿದ್ದರೆ ದೋಷವಿರುವುದಿಲ್ಲ.
ಸಿಂಹ ಹಾಗೂ ಕುಂಭ ರಾಶಿಯಲ್ಲಿ ಜನಿಸಿದವರಿಗೆ ಕುಜ ದೋಷವಿರುವುದಿಲ್ಲ .
ಸ್ವಕ್ಷೇತ್ರ ,ಮಿತ್ರ ಕ್ಷೇತ್ರ ಉಚ್ಚ ಕ್ಷೇತ್ರ ಸ್ಥಿತಿ ಯುಳ್ಳವನಾಗಿದ್ದರೆ ಕುಜನು ಹಾಗೂ ಶುಭ ಗ್ರಹ ಸಂಬಂಧ ಚಂದ್ರ ಬುಧ ಹಾಗೂ ಗುರು ಮಿತ್ರಾಂಶ ಸ್ಥಿತಿಯುಳ್ಳವನಾಗಿದ್ದರೆ ದೋಷವಿರುವುದಿಲ್ಲ
ಶನಿಯು ಲಗ್ನಾತ್ 1, 4, 7, 8 ಹಾಗೂ 12 ರಲ್ಲಿದ್ದರೆ ಕುಜ ದೋಷವಿರುವುದಿಲ್ಲ .
ಈ ಎಲ್ಲಾ ವಿಷಯಗಳು ಜ್ಯೋತಿಷ್ಯ ಗ್ರಂಥಗಳಲ್ಲಿ ಕೊಟ್ಟಿರುವ ವಿಷಯಗಳು .ಅನುಭವಿಗಳ ಮಾತೆಂದರೆ ಯಾವುದೇ ಲಗ್ನವಿರಲಿ ,ರಾಶಿಯಿರಲಿ ಸಪ್ತಮ ಮತ್ತು ಅಷ್ಟಮದಲ್ಲಿ ಕುಜ ಅಥವಾ ಪಾಪ ಗ್ರಹರಿದ್ದರೆ ಪರಿಹಾರಗಳನ್ನು ಮಾಡಿಕೊಂಡೇ ಮುಂದುವರಿಯಬೇಕು .
ಕುಜ ದೋಷವಿಲ್ಲದ ನಕ್ಷತ್ರಗಳು :ಅಶ್ವಿನಿ, ಮೃಗಶಿರ , ಪುನರ್ವಸು ,ಪುಷ್ಯ ,ಆಶ್ಲೇಷಾ ,ಉತ್ತರಾ ,ಸ್ವಾತಿ ,ಅನುರಾಧಾ ,ಪೂರ್ವಾಷಾಢ,ಉತ್ತರಾಷಾಢ ,ಶ್ರವಣ ,ಉತ್ತರಾಭಾದ್ರಾ ರೇವತಿ ನಕ್ಷತ್ರದಲ್ಲಿ ಜನಿಸಿದ್ದರೆ ದೋಷವಿರುವುದಿಲ್ಲ
ಕುಜ ದೋಷದ ಅಪವಾದದ ವಿಚಾರದಲ್ಲಿ ‘ಪ್ರಶ್ನ ಸಂಗ್ರಹದ ಉತ್ತರಾರ್ಧದ 35 ನೇ ಅಧ್ಯಾಯದಲ್ಲಿ 56 ರಿಂದ 63 ನೇ ಶ್ಲೋಕದವರೆಗೆ ಹಲವಾರು ವಿಚಾರಗಳನ್ನು ಹೇಳಿರುತ್ತಾರೆ .
ಕುಜ ದೋಷಕ್ಕೆ ಪರಿಹಾರಗಳು :ಕುಂಭ ವಿವಾಹ , ಅರ್ಕ ವಿವಾಹ ,ಸ್ವಯಂವರ ಪಾರ್ವತಿ ದುರ್ಗಾ ನಮಸ್ಕಾರ ಪೂಜೆ ,ಸುವಾಸಿನಿ ಆರಾಧನೆ ,ದೇವಿ ಕ್ಷೇತ್ರದಲ್ಲಿ ಬಾಗಿನ ಅರ್ಪಣೆ ,ಶ್ರೀ ಸತ್ಯನಾರಾಯಣ ಪೂಜೆ ,ನಿತ್ಯವೂ ಗೋ ಪೂಜೆ , ತಿರುಪತಿಯಲ್ಲಿ ಶ್ರೀನಿವಾಸ –ಪದ್ಮಾವತಿ ವಿವಾಹ [ಸಾಧ್ಯವಿರುವವರಿಗೆ ] ನಿತ್ಯವೂ ದೇವಿಯ ಸ್ತೋತ್ರ ಪಾರಾಯಣ ಮಾಡುತ್ತಾ ಬರುವುದು .
ವಧು –ವರರಿಗೆ ಮನಸ್ಸಿನಲ್ಲಿ ಪರಸ್ಪರ ಪ್ರೀತಿ ಉಂಟಾಗಿದ್ದರೆ ಇದನ್ನು ಮನೋ ಘಟನೆ ಎನ್ನುತ್ತಾರೆ .ಇನ್ನೂ ಕೆಲವು ಕಡೆಯಲ್ಲಿ ದೇವಿ ಕ್ಷೇತ್ರದಲ್ಲಿ’ ಪ್ರಸಾದ ನೋಡುವುದು ‘ ಎಂಬ ಕ್ರಮವನ್ನು ಮಾಡುತ್ತಾರೆ .30 ವರ್ಷ ದಾಟಿದ ನಂತರ ಯಾವುದೇ ದೋಷ ನೋಡುವ ಅಗತ್ಯವಿಲ್ಲ.ಎಂಬ ವಿಚಾರವನ್ನು” ಜಾತಕ ಸಾರೋದ್ಧಾರ ‘ ಪುಸ್ತಕದಲ್ಲಿ ಕೊಟ್ಟಿರುತ್ತಾರೆ .
30 ವರ್ಷಗಳ ನನ್ನ ಅನುಭವದ ಪ್ರಕಾರ ಜಾತಕ ವಿಮರ್ಶೆ ಅತೀ ಅಗತ್ಯವಾಗಿದೆ .ಮಗು ಹುಟ್ಟಿದ ತಕ್ಷಣ ಜಾತಕವನ್ನು ಪರಿಣತ ಜ್ಯೋತಿಷ್ಯರಲ್ಲಿ ಮಾಡಿಸುವುದು ,ವಿದ್ಯೆ ,ವಿವಾಹ ಮುಂದಿನ ಜೀವನದ ವಿಷಯ ತಿಳಿದು ಕೊಂಡಿರುವುದು ಅತೀ ಅಗತ್ಯವಾಗಿದೆ .ಮಕ್ಕಳ ಚಲನ ವಲನವನ್ನು ಗಮನಿಸಿ ಕೊಂಡಿರುವುದು ಅಗತ್ಯವಾಗಿದೆ



































