ಕುಖ್ಯಾತ ಅಂತರ್ ಜಿಲ್ಲಾ ಬೈಕ್ ಕಳ್ಳರ ಬಂಧನ

Picture of RB NEWS

RB NEWS

Bureau Report

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಮೊಹಮದ್ ರುಹಾನ್, ವಾಸ: ಸೂಳೆಬೈಲು, ಶಿವಮೊಗ್ಗ, ತಾಜುದ್ದೀನ್ ಪಿ ಕೆ @ ತಾಜು, ವಾಸ: ಗೋಪಾಲ, ಶಿವಮೊಗ್ಗ ಎಂಬವರನ್ನು ಬಂಧಿಸಿದ ಪಡುಬಿದ್ರಿ ಪೊಲೀಸರು ಸುತ್ತನ್ನು ವಶಪಡಿಸಿದ್ದಾರೆ.

2025 ಜನವರಿ 21 ರಂದು ರಾತ್ರಿ ಕಾರ್ಕಳ ತಾಲೂಕು ಮುಂಡ್ಕೂರು ಗ್ರಾಮದಲ್ಲಿ ಘಟನೆ ನಡೆದಿತ್ತು.

ಪರೀಕ್ಷಿತ್ ಶೆಟ್ಟಿ ಎಂಬವರು ಪಡುಬಿದ್ರಿ ಪೇಟೆಯಲ್ಲಿ ತನ್ನ KA19ET2765 ನೇ ಬುಲೆಟ್ ಬೈಕ್ ನ್ನು ಪಾರ್ಕ್ ಮಾಡಿ ಕೆಲಸಕ್ಕೆ ಹೋಗಿದ್ದು ಬೆಳಗ್ಗೆ ಕೆಲಸ ಮುಗಿಸಿ ವಾಪಸ್ ಬಂದು ನೋಡಿದಾಗ ಅಲ್ಲಿ ಬೈಕ್ ಇಲ್ಲದೆ ಇದ್ದು ಬೈಕನ್ನು ಯಾರೋ ಕಳವು ಮಾಡಿರುವುದಾಗಿ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಾಗಿದೆ.

ಉಡುಪಿ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳ ನಿರ್ದೇಶನದಂತೆ ಪಡುಬಿದ್ರಿ ಪೊಲೀಸ್ ಠಾಣಾ ಎಸ್ ಐ ಪ್ರಸನ್ನ ಎಮ್ ಎಸ್ ರವರ ಆದೇಶದಂತೆ ಎಎಸ್ಐ ರಾಜೇಶ್, ಹೆಚ್ ಸಿ ಗಳಾದ ಕೃಷ್ಣಪ್ರಸಾದ್, ನಾಗರಾಜ್ ಸನಿಲ್, ಪಿಸಿ ಗಳಾದ ಸಂದೇಶ, ಶರಣ್ ಪುತ್ರನ್ ರವರು ಉಡುಪಿ ಜಿಲ್ಲಾ ಪೊಲೀಸ್ ಕಚೇರಿಯ ಸಿ ಡಿ ಆರ್ ವಿಭಾಗದ ಸಿಬ್ಬಂದಿ ದಿನೇಶ್ ರವರ ಸಹಕಾರದಿಂದ ಆರೋಪಿಗಳಾದ ಆರೋಪಿಗಳಾದ 1) ಮೊಹಮದ್ ರುಹಾನ್, ವಾಸ: ಸೂಳೆಬೈಲು, ಶಿವಮೊಗ್ಗ, 2) ತಾಜುದ್ದೀನ್ ಪಿ ಕೆ @ ತಾಜು, ವಾಸ: ಗೋಪಾಲ, ಶಿವಮೊಗ್ಗ ರವರನ್ನು ಶಿವಮೊಗ್ಗದಲ್ಲಿ ಬಂಧಿಸಿದ್ದಾರೆ.

ಪಡುಬಿದ್ರಿ ಯಲ್ಲಿ ಕಳವು ಮಾಡಿದ KA19ET2765 ನೇ ಬುಲ್ಲೆಟ್ ಮೋಟರು ಸೈಕಲನ್ನು ಮತ್ತು ಕಳ್ಳತನ ಸಮಯ ಆರೋಪಿಗಳು ಉಪಯೋಗಿಸಿದ ಮಾರುತಿ ರಿಟ್ಜ್ ಕಾರನ್ನು (ಒಟ್ಟು ಮೌಲ್ಯ ರೂ 4 ಲಕ್ಷ ) ಸ್ವಾಧೀನ ಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಲಯವು ಆರೋಪಿಗಳಿಗೆ 15 ದಿನಗಳ ನ್ಯಾಯಾಂಗ ಬಂಧನ ನೀಡಿರುತ್ತದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top