ಕುಂಬಳೆಯ ಮನೆ ದೇವರಿಗೆ ಪೂಜೆ ಸಲ್ಲಿಸಿದ ಅನಿಲ್ ಕುಂಬ್ಳೆ ದಂಪತಿ
ಸಾಂಪ್ರಾದಾಯಿಕ ಉಡುಗೆಯಯೊಂದಿಗೆ ಭೇಟಿಯನ್ನು ರಹಸ್ಯವಾಗಿಟ್ಟ ಕ್ರಿಕೆಟ್ ದಿಗ್ಗಜ

ಕುಂಬಳೆ: ಭಾರತೀಯ ಕ್ರಿಕೆಟ್ ತಂಡದ ದಿಗ್ಗಜ ಅನಿಲ್ ಕುಂಬಳೆ ಸ್ವಪತ್ನಿಕರಾಗಿ ಕಾಸರಗೋಡು ಜಿಲ್ಲೆಯ ಕುಂಬಳೆಯ ತಮ್ಮ ಕುಟುಂಬಸ್ಥರ ದೇವರ ಮನೆಗೆ ಅಗಮಿಸಿ ದೇವರಿಗೆ ನಮಿಸಿದರು.
ಪತ್ನಿ ಚೇತನಾ ಜೊತೆ ಅಗಮಿಸಿದ ಅನಿಲ್ ಕುಂಬ್ಲೆ ಸರಳ ವಸ್ತ್ರಧರಿಸಿ ಶೃದ್ದೆ, ಭಕಿಯೊಂದಿಗೆ ಕುಟುಂಬಿಕ ದೇವರು ಕುಂಬಳೆ ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಆಯುರಾರೋಗ್ಯ ಭಾಗ್ಯಕ್ಕೆ ಪ್ರಾರ್ಥಿಸಿದರು.

ಅನಿಲ್ ಕುಂಬ್ಳೆ ಅವರ ಪೂರ್ವಿಕರ ಮನೆ ದೇವರು ಸಹಿತ ದೇವಸ್ಥಾನ ಇದಾಗಿದೆ. ಇಲ್ಲಿಗೆ ಈ ಹಿಂದೆಯೂ ವರ್ಷಕ್ಕೊಮ್ಮೆ ಭೇಟಿ ಇತ್ತು ಪ್ರಾರ್ಥಿಸಿ, ಸೇವೆ ಸಲ್ಲಿಸಿ ಮರಳುವುದು ಅವರ ರೂಢಿಯಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಅವರ ಆಗಮನ ಇರಲಿಲ್ಲ. ದೇವರ ಮನೆಗೆ ಅಗಮಿಸುವ ವಿಚಾರವನ್ನು ಖುದ್ದು ಅನಿಲ್ ಕುಂಬಳೆ ಅವರು ಅರ್ಚಕರಿಗೆ ಮುಂಚಿತ ತಿಳಿಸಿದ್ದರು. ಅದರನ್ವಯ ದೇವಸ್ಥಾನದ ಟ್ರಸ್ಟಿಗಳು ಸೇರಿ ಅನಿಲ್ ಕುಂಬ್ಳೆ ದಂಪತಿಯನ್ನು ಬರಮಾಡಿಕೊಂಡರು.
ಕುಂಬಳೆಯಿಂದ ನೇರವಾಗಿ ಮಂಗಳೂರಿನತ್ತ ಪ್ರಯಾಣ ಬೆಳೆಸಿದರು.

































