ಕುಂದಾಪುರ : ರಥಬೀದಿಯಲ್ಲಿ ಅಗ್ನಿಯ ರುದ್ರನರ್ತನ -ಅಂಗಡಿಗಳು ಭಸ್ಮ-ಕೋಟ್ಯಾಂತರ ನಷ್ಟ

Picture of RB NEWS

RB NEWS

Bureau Report

ಕುಂದಾಪುರ: ಸ್ಥಳೀಯ ರಥಬೀದಿಯ ವ್ಯಾಪಾರಸ್ಥರ ಪಾಲಿಗೆ ವರುಷದ ಕೊನೆಯ ಸೋಮವಾರ ಕರಾಳ ದಿನವಾಗಿ ಪರಿಣಮಿಸಿದ್ದು, ಸೋಮವಾರ ನಸುಕಿನ ಜಾವ ಕುಂದಾಪುರದ ಮುಖ್ಯರಸ್ತೆಯಲ್ಲಿರುವ ರಥಬೀದಿಯಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ.
ಅಗ್ನಿಯ ರುದ್ರ ನರ್ತನಕ್ಕೆ ಪಟಾಕಿ, ಪುಸ್ತಕದಂಗಡಿ, ಪೂಜಾ ಸಾಮಾಗ್ರಿಗಳ ಅಂಗಡಿ, ಕಿರಾಣಿ ಅಂಗಡಿ ಸಹಿತ,ಎಲೆಕ್ಟ್ರಾನಿಕ್ಸ್ ಅಂಗಡಿಗಳು ಅಕ್ಷರಶ: ಭಸ್ಮ ಗೊಂಡಿವೆ.
ಉಳಿದೆರಡು ಅಂಗಡಿ ಗಳು ಭಾಗಶಃ ಸುಟ್ಟು ಹೋಗಿವೆ.ಅಗ್ನಿ ಅವಘಡದಿಂದ ಕೋಟ್ಯಾಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಕುಂದಾಪುರದ ಪೇಟೆ ಶ್ರೀ ವೇಂಕಟರಮಣ ದೇವಸ್ಥಾನದ ಮುಂಭಾಗದಲ್ಲಿರುವ ರಥಬೀದಿಯಲ್ಲಿ ಹಂಚಿನ ಮೇಲ್ಚಾವಣಿ ಹೊಂದಿರುವ ಒಂದೇ ಸೂರಿನಡಿ ಪುರಾತನ ಪ್ರಸಿದ್ಧ ಪುಸ್ತಕದಂಗಡಿ, ಪಟಾಕಿ ಅಂಗಡಿ,ಕಿರಾಣಿ ಹಾಗೂ ಪೂಜಾ ಸಾಮಾಗ್ರಿ, ಮಾರಾಟದ ಅಂಗಡಿಗಳಿವೆ. ಊಹೆಯ ಪ್ರಕಾರ ಆ ಪೈಕಿ ಒಂದು ಅಂಗಡಿಯ ಉಪ್ಪರಿಗೆ ಯಲ್ಲಿ ಸೋಮವಾರ ನಸುಕಿನ ಜಾವ 3.30ರ ಆಸುಪಾಸು ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿಕೊಂಡಿದೆ. ಜ್ವಾಲೆಯನ್ನು ಗಮನಿಸಿದ ಶಾಪಿನ ಕಾವಲುಗಾರ ಮುಂಜಾನೆ ಕೆಲಸಕ್ಕೆ ತೆರಳುತ್ತಿದ್ದವರಿಗೆ ವಿಷಯ ತಿಳಿಸಿದ್ದು,ಅಲ್ಲಿಂದ ಪೊಲೀಸರಿಗೆ ಮಾಹಿತಿ ಹೋಗುವಷ್ಟರಲ್ಲಿ ಅಗ್ನಿಯ ಕೆನ್ನಾಲಗೆಗಳು ಸುತ್ತ ಮುತ್ತ ವಿಜೃಂಭಿಸ ಲಾರಂಭಿಸಿ ಅಂಗಡಿ ಮಳಿಗೆಗಳು ಧಗ ಧಗಿಸ ತೊಡಗಿವೆ.ಅಷ್ಟರಲ್ಲಾಗಲೇ ಮಾಹಿತಿ ಪಡೆದ ಅಗ್ನಿಶಾಮಕ ದಳಗಳು
ಸ್ಥಳಕ್ಕೆ ಬರುವ ಅರ್ಧ ಘಂಟೆ ಸಮಯದಲ್ಲಿ ಅಂಗಡಿಗಳು ಬಹುತೇಕ ಹೊತ್ತಿ ಉರಿದಿವೆ. ಲಲಿತ್ ನಾಥ್ ಭಟ್ ಆವರ ದಾಮೋದರ್‌ಪ್ರಾವಿಜನ್ ಸ್ಟೋರ್ ಹೆಸರಿನ ಪೂಜಾ ಸಾಮಾಗ್ರಿಗಳ ಅಂಗಡಿ ಸಂಪೂರ್ಣ ಸುಟ್ಟು ಹೋಗಿದೆ. ಶಿವಾನಂದ ಭಟ್ ಸಹೋದರರ ಖ್ಯಾತ ಜನಾರ್ಧನ ಭಟ್ ಎಂಡ್ ಸನ್ಸ್ ಎಂಬ ಪುಸ್ತಕದ ಅಂಗಡಿ,ಪಟಾಕಿ ಅಂಗಡಿಯೂ ಕರಕಲಾಗಿದೆ. ದಿವಾಕರ ಭಟ್‌ ಮಾಲೀಕತ್ವದ ಮಥುರಾ ಎಲೆಕ್ಟ್ರಾನಿಕ್ಸ್

ಗಣಪತಿ ನಾಯಕ್‌ ಮಾಲೀಕತ್ವದ ಬಾಲಾಜಿ ಪ್ರಾವಿಜನ್ ಸ್ಟೋರ್ ನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಪೂಜಾ ಸಾಮಾಗ್ರಿಗಳಿದ್ದ ಮೇಲಿನ ಮಹಡಿ ಸಂಪೂರ್ಣ ಅಗ್ನಿಯ ಪಾಲಾಗಿದೆ. ರಥ ಬೀದಿಯನ್ನು ಸಂಪೂರ್ಣ ದಹಿಸಬೇಕಾಗಿದ್ದ ಅಗ್ನಿಯ ಪೈಶಾಚಿಕ ನರ್ತನ ಅಗ್ನಿಶಾಮಕದಳದ ಕಾರ್ಯಾಚರಣೆಯಿಂದ ಕೊನೆಗೂ ಹತೋಟಿಗೆ ಬಂದಿದೆ. ಕುಂದಾಪುರದಲ್ಲಿ ಸಂಭವಿಸಿರುವ ದುರಂತಗಳಲ್ಲಿ ನಿನ್ನೆ ನಡೆದಿರುವ ಅಗ್ನಿಅವಘಡ ಅತೀ ಭೀಕರ ಎಂದು ಹೇಳಲಾಗುತ್ತಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top